Asianet Suvarna News Asianet Suvarna News

ಹಾವೇರಿ: ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಬಿಜೆಪಿ ನೆರವು

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಬಿಜೆಪಿ ನಾಯಕರು ಸಾಂತ್ವನ ಹೇಳುವ ಜತೆಗೆ ರೈತರ ವಾಸ್ತವ ಸಮಸ್ಯೆ ತಿಳಿದುಕೊಂಡು ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸಭೆ ಮಾಡಿ ನಿರ್ಣಯ ಮಾಡುವ ಮಾತುಕತೆ ಆಗಿದೆ ಎಂದು ಮಾಜಿ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ ಹೇಳಿದರು.

BJP Karnataka help to farmer families who committed suicide at haveri rav
Author
First Published Sep 10, 2023, 6:21 AM IST

ಹಾವೇರಿ (ಸೆ.10) :  ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಬಿಜೆಪಿ ನಾಯಕರು ಸಾಂತ್ವನ ಹೇಳುವ ಜತೆಗೆ ರೈತರ ವಾಸ್ತವ ಸಮಸ್ಯೆ ತಿಳಿದುಕೊಂಡು ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸಭೆ ಮಾಡಿ ನಿರ್ಣಯ ಮಾಡುವ ಮಾತುಕತೆ ಆಗಿದೆ ಎಂದು ಮಾಜಿ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ ಹೇಳಿದರು.

ತಾಲೂಕಿನ ಆಲದಕಟ್ಟಿಗ್ರಾಮದಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರು. ಪರಿಹಾರ ನೀಡಿ ಮಾತ​ನಾ​ಡಿ​ದರು.

ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಅಧಿವೇಶನದಲ್ಲಿ ಹೇಳಿದರೂ ಕೃಷಿ ಸಚಿವರು ಅಲ್ಲಗಳೆದಿದ್ದರು. ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಗಳ ಸುದ್ದಿ ಬಂದ ನಂತರ ಒಪ್ಪಿಕೊಂಡು ಪರಿಹಾರ ಕೊಡಲು ಆರಂಭಿಸಿದ್ದಾರೆ. ಆತ್ಮಹತ್ಯೆ ಪ್ರಕರಣಗಳಲ್ಲಿ ಎಫ್‌ಎಸ್‌ಎಲ್‌ ವರದಿ ಬರುವುದು ವಿಳಂಬವಾಗುತ್ತದೆ. ಕನಿಷ್ಠ 15-20 ದಿನ ಸಮಯ ಬೇಕಾಗುತ್ತದೆ. ರೈತರು ವಿವಿಧ ರೂಪದಲ್ಲಿ ಸಾಲ ಮಾಡಿರುತ್ತಾರೆ. ಬ್ಯಾಂಕ್‌ಗಳಲ್ಲಿನ ಸಾಲ ಮಾತ್ರ ನೋಡದೆ ವಾಸ್ತವ ಅರಿತು ಮೃತರ ಕುಟುಂಬಗಳಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ ಅವರು, ರೈತರ ಆತ್ಮಹತ್ಯೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.

 

ಸಚಿವ ಪಾಟೀಲ್ ಓರ್ವ ಅವಿವೇಕಿ, 50 ಕೋಟಿ ಆಫರ್ ಕೊಡ್ತೇವೆ, ಆತ್ಮಹತ್ಯೆ ಮಾಡಿಕೊಳ್ಳಿ: ರೈತರ ಆಕ್ರೋಶ

ಕುಂಟು ನೆಪ:

ಇದೇ ವೇಳೆ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರ್ಕಾರ ಕುಂಟುನೆಪ ಹೇಳುತ್ತಿದೆ. ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ ಎಂದು ಬೊಮ್ಮಾಯಿ ಸರ್ಕಾ​ರ​ವನ್ನು ತರಾ​ಟೆಗೆ ತೆಗೆ​ದು​ಕೊಂಡ​ರು.

ಜುಲೈ ತಿಂಗಳಲ್ಲಿ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಹೇಳಿ ಇಲ್ಲಿಯವರೆಗೂ ತಳ್ಳುತ್ತಾ ಬಂದಿದ್ದಾರೆ. ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತ ನೆಪ ಹೇಳುತ್ತಿದ್ದಾರೆ. ಸಬೂಬು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ಮಳೆಗಾಲ ಮುಗಿಯುತ್ತ ಬಂತು. ಬರ ಘೋಷಣೆಗೂ ಮುಹೂರ್ತ ನೋಡುತ್ತಿದ್ದೀರಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ರೈತ ವಿರೋಧಿ ಜಡತ್ವ ಇರುವ ಸರ್ಕಾರವಿದು ಎಂದು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ತಲೆದೋರಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಕೊರತೆಯಿಂದ ತೊಂದರೆಯಾಗಿದೆ. ಹಣಕಾಸಿನ ನೇರವು ನೀಡಿ ವಿದ್ಯುತ್‌ ಖರೀದಿ ಮಾಡಬೇಕು. ಬರಗಾಲ ಘೋಷಣೆ ಮಾಡದೆ ಸುಮ್ಮನೆ ಮುಂದಕ್ಕೆ ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇರುವ ಹಣ ಬಳಕೆ ಮಾಡುತ್ತಿಲ್ಲ. ಬರಗಾಲ ಘೋಷಣೆ ಮಾಡಿದರೆ ಪರಿಹಾರ ಕೊಡಬೇಕಾಗುತ್ತದೆ ಎಂದು ಮುಂದೆ ಹಾಕುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಲಿದೆ ಎಂದು ಹೇಳಿದರು. 

ಪರಿಹಾರ ಹೆಚ್ಚಿಸಿದ ಬಳಿಕ ರೈತರ ಆತ್ಮಹತ್ಯೆ ಏರಿಕೆ: ಸಚಿವ ಶಿವಾ​ನಂದ ಪಾಟೀ​ಲ್‌ ವಿವಾದ

Follow Us:
Download App:
  • android
  • ios