ಬಿಜೆಪಿಯಿಂದ ನಾನು ಅಂತರ ಕಾಯ್ದುಕೊಂಡಿಲ್ಲ; ಅವರೇ ನನ್ನನ್ನು ಗುರುತಿಸದಿದ್ದರೆ ಏನ್ಮಾಡಲಿ?: ನಂಜುಂಡಿ ಬೇಸರ
ಬಿಜೆಪಿಯಿಂದ ನಾನು ಅಂತರ ಕಾಯ್ದುಕೊಂಡಿಲ್ಲ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸಿದ್ದು, ಅವರೇ ನನ್ನನ್ನು ಗುರುತಿಸದಿದ್ದರೆ ನಾನೇನು ಮಾಡಲು ಆಗುತ್ತದೆ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಬೆಂಗಳೂರು (ಜ.8) : ಬಿಜೆಪಿಯಿಂದ ನಾನು ಅಂತರ ಕಾಯ್ದುಕೊಂಡಿಲ್ಲ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸಿದ್ದು, ಅವರೇ ನನ್ನನ್ನು ಗುರುತಿಸದಿದ್ದರೆ ನಾನೇನು ಮಾಡಲು ಆಗುತ್ತದೆ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದಾಗ ಅವರ ಜೊತೆ ಹೆಜ್ಜೆ ಹಾಕಿ ಪಕ್ಷ ಸಂಘಟನೆ ಮಾಡಿದ್ದೇನೆ. ಜವಾಬ್ದಾರಿ ಕೊಟ್ಟಾಗ ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಕೊಡದಿದ್ದಾಗ ಸುಮ್ಮನಾಗಿದ್ದೇನೆ. ಸಮಾಜದಲ್ಲಿನ ಮುಖಂಡರಿಗೆ ರಾಜಕೀಯ ಜ್ಞಾನ ಹೆಚ್ಚು ಇರಬೇಕಾಗುತ್ತದೆ. ಆದರೆ, ನಮ್ಮ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಇನ್ನಷ್ಟು ಜಾಗೃತವಾಗಬೇಕಿದ್ದು, ನಾಯಕರನ್ನು ನಿರ್ಲಕ್ಷಿಸಿದಾಗ ಅದರ ಬಗ್ಗೆ ಧ್ವನಿ ಎತ್ತಬೇಕಿದೆ ಎಂದರು.
ಆಯೋಧ್ಯೆಯಲ್ಲಿ ರಾಮಮಂದಿರ ಜೊತೆಗೆ ವಾಲ್ಮೀಕಿ ದೇಗುಲ ನಿರ್ಮಾಣ: ಪ್ರಧಾನಿಗೆ ಸಚಿವ ರಾಜಣ್ಣ ಪತ್ರ!
ನಾವು ಕೇವಲ ರಾಜಕೀಯಕ್ಕೆ ಸೀಮಿತವಲ್ಲ, ಸಮಾಜಕ್ಕೂ ಬದ್ಧನಾಗಿದ್ದೇವೆ. ವಿಧಾನ ಪರಿಷತ್ ಸದಸ್ಯನಾಗಿ ಜೂನ್‌ಗೆ ಆರು ವರ್ಷ ಆಗುತ್ತದೆ. ಆದರೆ, ಈ ಅವಧಿಯಲ್ಲಿ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ನಿರ್ಲಕ್ಷ್ಯವೇ ಕಾರಣ. ಸಮಾಜ ನಮ್ಮ ಪಕ್ಷದ ಜೊತೆಗಿದೆ ಎಂಬ ಭಾವನೆಯೂ ಇದಕ್ಕೆ ಕಾರಣ ಆಗಿರಬಹುದು ಎಂದು ಹೇಳಿದರು.