Asianet Suvarna News Asianet Suvarna News

ನಮಗೆ ಮುಡಾ ನಿವೇಶನಗಳನ್ನು ನೀಡಿದ್ದೇ ಬಿಜೆಪಿ ಸರ್ಕಾರ: ಸಿಎಂ ಸಿದ್ದು

ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ. ನಮ್ಮ ಜಮೀನಿಗೆ ಪರಿಹಾರವಾಗಿ 2021 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುಡಾ ನಮಗೆ ನಿವೇಶನ ಹಂಚಿಕೆ ಮಾಡಿದೆ. ಈಗ ಬಿಜೆಪಿಯವರೇ ಸುಳ್ಳು ಆರೋಪ ಮಾಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ 

bjp government that has given us muda sites in mysuru says cm siddaramaiah grg
Author
First Published Jul 5, 2024, 7:13 AM IST

ಬೆಂಗಳೂರು(ಜು.05):  'ನಮಗೆ ನೀಡಿರುವ ನಿವೇಶನಗಳ ಬೆಲೆಗಿಂತ ನಮ್ಮ ಜಮೀನು ಮೌಲ್ಯವೇ ಹೆಚ್ಚು. ಇದು ಸರಿಯಿಲ್ಲ ಎನ್ನು ವುದಾದರೆ ಮುಡಾ ನಿವೇಶನಗಳನ್ನು ಹಿಂಪಡೆಯಲಿ. ನಮ್ಮ 3.18 ಎಕರೆ ಜಮೀನಿಗೆ ಪರಿಹಾರವಾಗಿ ಮಾರು ಕಟ್ಟೆ ಮೌಲ್ಯದ ಆಧಾರದ ಮೇಲೆ 62 ಕೋಟಿ ರು. ಪರಿಹಾರ ನೀಡಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ. ನಮ್ಮ ಜಮೀನಿಗೆ ಪರಿಹಾರವಾಗಿ 2021 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುಡಾ ನಮಗೆ ನಿವೇಶನ ಹಂಚಿಕೆ ಮಾಡಿದೆ. ಈಗ ಬಿಜೆಪಿಯವರೇ ಸುಳ್ಳು ಆರೋಪ ಮಾಡಿದರೆ ಹೇಗೆ ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ವರಿಗೆ ಬೇರೇನೂ ವಿಷಯವಿಲ್ಲ.

ಪಾರ್ವತಿ ಸಿದ್ದರಾಮಯ್ಯಗೆ 14 ಸೈಟು ಕೊಟ್ಟ ಮೂಡಾ ನಿಯಮಗಳ ಮಾಹಿತಿ ಬಿಚ್ಚಿಟ್ಟ ಸಿಎಂ ಆಪ್ತ ಎಂ. ಲಕ್ಷ್ಮಣ್!

ಆರ್‌ಎಸ್‌ಎಸ್ ಹೇಳಿದಂತೆ ಮಾತನಾಡುತ್ತಾರೆ. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ನಮ್ಮ ಜಮೀನು ಒತ್ತುವರಿ ಮಾಡಿ ಕೊಂಡಿರುವುದನ್ನು ಅವರೇ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಅಧಿಕಾರಾವಧಿಯಲ್ಲೇ ನೀಡಿದ್ದಾರೆ: ನಿವೇಶನ ನೀಡಿದಾಗ 2021ನೇ ಇಸವಿಯಲ್ಲಿ ಬಿಜೆಪಿ ಅಧಿಕಾರ ದಲ್ಲಿತ್ತು. ಅವರೇ ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೇ ಅಥವಾ 4ನೇ ಹಂತದಲ್ಲಿ ಕೊಡಿ ಎಂದು ನಾವು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಒಪ್ಪಿದಂತೆ ಕೊಡಿ ಎಂದು ಹೇಳಿದ್ದೇವೆ. ಅದರಂತೆ ಅವರು ನಿವೇಶನಗಳನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸೈಟ್ ಫೈಟ್: ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ, ನಾನು ರಿಸೈನ್‌ ಮಾಡಲ್ಲ ಎಂದ ಸಿದ್ದು..!

ಭೂಸ್ವಾಧೀನವಾದ ಜಾಗದಲ್ಲಿಯೇ ಜಮೀನು ಕೊಡಬೇಕೆಂಬ ನಿಯಮವಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, 'ನಾವು ಇಂತಹ ಕಡೆಯೇ ನಿವೇಶನ ಕೊಡಿ ಎಂದು ಕೇಳಿಲ್ಲ. ನಿವೇಶನ ಹಂಚಿಕೆ ಮಾಡಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023ರಲ್ಲಿ ಸಚಿವರು 50:50 ಅನು ಪಾತದಲ್ಲಿ ಜಮೀನು ಕೊಡು ವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರು.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಜಮೀನು 3.18 ಎಕರೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನಮಗೆ ಕೊಟ್ಟಿರು ವುದು 38,264 ಚದರ ಅಡಿ. ಅಂದರೆ ಒಂದು ಎಕರೆಗಿಂತ ಕಡಿಮೆಯಿದೆ. ಪರಿಹಾರ ವಾಗಿ ಕೊಟ್ಟಿ ರುವ ನಿವೇಶನಗಳ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನಮ್ಮ ಜಮೀನಿನ ಮೌರುಕಟ್ಟೆ ಮೌಲ್ಯ 62 ಕೋಟಿಯಿದ್ದು ನಿವೇಶನಗಳ ಬೆಲೆ ಇದಕ್ಕಿಂತ ಕಡಿ ಮೆಯಿದೆ. ಹೀಗಾಗಿ ನಮಗೆ 62 ರು. ಪರಿಹಾರ ನೀಡಲಿ ಎಂದು ಮುಖಮಂತ್ರಿಗಳು ಆಗ್ರಹಿಸಿದರು.

Latest Videos
Follow Us:
Download App:
  • android
  • ios