ಸಗಣಿ ಬಾಚೋ ತಾಯಂದಿರಿಗೆ 5 ರೂ ಸಬ್ಸಿಡಿ ನೀಡಿದ್ದೇವೆ : ಸಿಟಿ ರವಿ

ಅಮುಲ್ ಮತ್ತು ನಂದಿನಿ ವಿಚಾರ ಬಿಜೆಪಿ ಸರ್ಕಾರ 1 ಲೀಟರ್ ಹಾಲಿಗೆ 5 ರು ಸಬ್ಸಿಡಿ ನೀಡಿದೆ. ಈ ಮೂಲಕ ಸಗಣಿ ಬಾಚೋ ತಾಯಂದಿರಿಗೂ ಸಹ ನಾವು ಸಹಾಯ ಮಾಡಿದ್ದೇವೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರೆ.  

BJP government  give Rs 5 subsidy for 1 liter of milk  says CT Ravi gow

ನವದೆಹಲಿ (ಏ.9): ಬಿಜೆಪಿ ಸರ್ಕಾರ 1 ಲೀಟರ್ ಹಾಲಿಗೆ 5 ರು ಸಬ್ಸಿಡಿ ನೀಡಿದೆ. ಈ ಮೂಲಕ ಸಗಣಿ ಬಾಚೋ ತಾಯಂದಿರಿಗೂ ಸಹ ನಾವು ಸಹಾಯ ಮಾಡಿದ್ದೇವೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರೆ.  ದೆಹಲಿಯಲ್ಲಿ ನಡೆದ ಬಿಜೆಪಿ ಟಿಕೆಟ್ ಚರ್ಚೆ ವಿಚಾರವಾಗಿ 2ನೇ ದಿನ ನಡೆದ ಸಭೆ ಸದ್ಯಕ್ಕೆ ಅಂತ್ಯಗೊಂಡಿದ್ದು, ಸಭೆ ಬಳಿಕ ಹೊರಬಂದ ಸಿಟಿ ರವಿ ಅಮುಲ್ ಮತ್ತು ನಂದಿನಿ ವಿವಾದದ ವಿಚಾರವಾಗಿ ಮಾತನಾಡಿ, ನಾವು 12 ರಾಜ್ಯದಲ್ಲಿ ನಂದಿನಿ ಪ್ರಾಡಕ್ಟ್ ಸೇಲ್ ಮಾಡ್ತಾ ಇದ್ದೇವೆ. ಬಿಜೆಪಿ ಸರ್ಕಾರ 1 ಲೀಟರ್ ಹಾಲಿಗೆ 5 ರೂ ಸಬ್ಸಿಡಿ ನೀಡಿದೆ. ಈ ಮೂಲಕ ಸಗಣಿ ಬಾಚೋ ತಾಯಂದಿರಿಗೂ ಸಹ ನಾವು ಸಹಾಯ ಮಾಡಿದ್ದೇವೆ. ನಂದಿನಿ ಗಟ್ಟಿಗೊಳಿಸೋಕೆ ಏನೂ ಕ್ರಮ ಬೇಕೋ ಅವೆಲ್ಲವನ್ನು ಸಹ ನಾವು ಮಾಡ್ತೇವೆ ಎಂದಿದ್ದಾರೆ.

ಮೋದಿ ಸಫಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,  ಜಗತ್ತಿನ ಅತ್ಯಂತ ಜನಪ್ರಿಯ ವ್ಯಕ್ತಿ ಅಂತ ಗೊತ್ತಿದೆ. ಈಗಾಗ್ಲೇ 2 ವರದಿಗಳು ಸಹ ಈ ಬಗ್ಗೆ ಬಂದಿದೆ. ಮೋದಿ ಶ್ರಮದಿಂದ ಎತ್ತರಕ್ಕೆ ಬೆಳೆದಿದ್ದಾರೆ, ಟೀಕೆಯಿಂದ ಅಲ್ಲ. ಅವರನ್ನ ಟೀಕೆ ಮಾಡಿದ್ರೆ ಎತ್ತರಕ್ಕೆ ಬೆಳೆಯಬಹುದು ಅಂದ್ರೆ ಅದು ತಪ್ಪು ಕಲ್ಪನೆ ಎಂದಿದ್ದಾರೆ.

ಅಮುಲ್ ಜೊತೆ kmf ಮರ್ಜ್ ಮಾಡೋದಿಲ್ಲ: ಎಸ್‌ ಟಿ ಸೋಮಶೇಖರ್
ಅಮುಲ್ ಜೊತೆ kmf ಮರ್ಜ್ ಮಾಡೋದಿಲ್ಲ. ಅಮಿತ್ ಶಾ ಎಲ್ಲೂ ಮರ್ಜ್ ಮಾಡುವ ಬಗ್ಗೆ ಹೇಳಿಲ್ಲ. ಅಮೂಲ್ ಕೂಡ ಉತ್ತಮವಾಗಿ ಇದೆ. ನಮ್ಮ kmf ಕೂಡ ಅಷ್ಟೇ ಉತ್ತಮವಾಗಿ ಇದೆ. ಮರ್ಜ್ ಮಾಡ್ತಾರೆ ಎನ್ನುವ ಗಾಳಿ ಸುದ್ದಿಗೆ ಕಿವಿಗೊಡೊದು ಬೇಕಿಲ್ಲ. ಇದೆಲ್ಲಾ ಸುಳ್ಳು ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. 

ಅಂತೂ ಇಂತು ಅಂತ್ಯಗೊಂಡ ಅಭ್ಯರ್ಥಿ ಆಯ್ಕೆ ಸಭೆ, ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಕರ್ನಾಟಕದಲ್ಲಿ ಹಾಲು ಒಕ್ಕೂಟಗಳು ಗಟ್ಟಿಯಾಗಿ ಬೇರೂರಿವೆ. ಅಮೂಲ್ ಇರಲಿ ಬೇರೆ ಯಾರೇ ಇರಲಿ  ನಂದಿನಿ ಜತೆ ಸ್ಪರ್ಧೆ ಮಾಡಕ್ಕಾಗಲ್ಲ ಎಂದು ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರ ಮಲ್ಲೇಶ್ವರಂ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

Nandini vs Amul:ಹಸುವಿನ ಕೆಚ್ಚಲಿನಿಂದ ಕಾಫಿ ಲೋಟದವರೆಗೆ, ಕೆಎಂಎಫ್‌ ಅಮೃತದ ಪ್ರಕ್ರಿಯೆ ಬಗ್ಗೆ ತಿಳಿಸಿದ ಮಾಜಿ ಎಂಡಿ!

ರಾಜ್ಯದಲ್ಲಿ 15 ಮಿಲ್ಕ್ ಯೂನಿಯನ್ ಕರ್ನಾಟಕದಲ್ಲಿ ಇದೆ. 15 ಮಿಲ್ಕ್ ಯೂನಿಯನ್ ಲಾಭದಲ್ಲಿ ಇದೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಮಕ್ಕಳಿಗೆ ಮಿಲ್ಕ್ ಪೌಡರ್ ನೀಡುವ ತೀರ್ಮಾನ ಮಾಡಿದ್ರು. ಅದಕ್ಕೆ ಸರ್ಕಾರವೇ ಕೆಎಂಎಫ್ ಗೆ ಹಣ ತುಂಬುವ ಕೆಲಸ ಮಾಡಿದೆ. ಇಂದು ಕೆಎಮ್ ಎಫ್ ಕೂಡ ಲಾಭದಲ್ಲಿ ಇದೆ. ಹಿಂದೆ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಕೆಎಂಎಫ್ ಗೆ ಸಲಹೆ ಕೊಟ್ಟಿದ್ರು. ಕರ್ನಾಟಕದಲ್ಲಿ ಗಟ್ಟಿಯಾಗಿ ಬೆಳೆದಿದ್ದು ಮಿಲ್ಕ್ ಯೂನಿಯನ್. ಅಮೂಲ್ ಒನ್ಲಿ ಆನ್ ಲೈನ್ ಬುಕ್ಕಿಂಗ್ ಮಾತ್ರ. ಯಾರೇ ಬಂದ್ರು ಕೆಎಂಎಫ್ ಬ್ರ್ಯಾಂಡ್ ಅಳಿಸೋಕೆ ಆಗಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios