Nandini vs Amul:ಹಸುವಿನ ಕೆಚ್ಚಲಿನಿಂದ ಕಾಫಿ ಲೋಟದವರೆಗೆ, ಕೆಎಂಎಫ್ ಅಮೃತದ ಪ್ರಕ್ರಿಯೆ ಬಗ್ಗೆ ತಿಳಿಸಿದ ಮಾಜಿ ಎಂಡಿ!
ನಂದಿನಿ ಬಗ್ಗೆ - ಸಹಕಾರಿ ಬ್ರಾಂಡ್ ಅಮುಲ್ ಹಾಲು ನೇರ ಬೆಂಗಳೂರು ಮಾರುಕಟ್ಟೆಗೆ ಬರುವ ವಿವಾದದ ಬಗ್ಗೆ ಕೆಲವು ವಿಷಯಗಳು ಇಲ್ಲಿ ಹೇಳಬೇಕೆನ್ನಿಸಿದೆ ಎಂದು ಮಾಜಿ KMF MD ಪ್ರೇಮನಾಥ್ ಫೇಸ್ ಬುಕ್ ನಲ್ಲಿ ಬರೆದು ಹಾಕಿರೋದು ಸಖತ್ ವೈರಲ್ ಆಗಿದೆ. ಅಮುಲ್ - ನಂದಿನಿ ಬಗ್ಗೆ, ಮುಖ್ಯ ವಿಷಯ ಬಿಟ್ಟು ಹಲವಾರು ಮಾತುಗಳು / ರಾಜಕೀಯ ಬಣ್ಣ ವನ್ನೂ ಪಡೆದು ,,ಯಾವು ಯಾವುದೊ ದೃಷಿಕೋನ ಪಡೆದು ನಿಜಸ್ಥಿತಿ /ವಾಸ್ತವ ಸಂಗತಿಗಳ ಪೂರ್ತಿ ಹೊರಬರದೆ ,ಸ್ವಲ್ಪ ತಿಳಿದವರೂ ವಿವರಿಸಿ ಹೇಳಲು ಮುಜುಗರ ವಾಗುತ್ತಿದೆ. ವಿಶಾಲ ಸಾಗರದ ಆಳ ದಲ್ಲಿ ಏನೇನು ಹುದುಗಿದೆ ಎಂಬುದು ಒಳ ಹೊಕ್ಕಿ ನೋಡಿದರೂ ಹಲವರಿಗೆ ಸಿಗುವುದು ಹಿಡಿಯಷ್ಟು ಮಾತ್ರ ! ಪರಿಸ್ಥಿತಿ ಹೀಗಿದ್ದಾಗ ವೈಯುಕ್ತಿಕವಾಗಿ ಹಿಂದೆ ಕಾರ್ಯ ನಿರ್ವಹಿಸಿದ ಅನುಭವದಲ್ಲಿ , ಪ್ರತಿಕ್ರಿಯಿಸಿ ವಾಸ್ತವ ಸಂಗತಿ ಹೇಳುವುದು ಅಗತ್ಯವೆನಿಸಿದರೂ ,ಎಲ್ಲರಿಗೂ ತೃಪ್ತಿ ಆಗುವಂತೆ ಹೇಳುವುದು ಸಾಧ್ಯವೂ ಇಲ್ಲ ಎಂದು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಮಾಜಿ KMF MD ಪ್ರೇಮನಾಥ್ ಬರೆದುಕೊಂಡಿದ್ದಾರೆ.
ಸಂಕ್ಷಿಪ್ತವಾಗಿ ಮುಖ್ಯ ವಿವರಗಳ ಹೇಳಬೇಕೆಂದರೆ....
1) ಇಲ್ಲಿ ಅಮುಲ್ ಹಾಲು ಮಾರಾಟ ಪ್ರಯತ್ನ ಹೊಸದಲ್ಲ ..ಆದರೆ ಕಾಲಕಾಲಕ್ಕೆ ಇದು ಬೇಡ ಅಂದು ನಾವು ಮನವಿ ಮಾಡಿ ನಿಲ್ಲಿಸಿದ್ದೆವು .. ಅವರು ನಂದಿನಿಯೊಂದಿಗೆ ಇದ್ದ ಸಹಕಾರ ಬಾಂದವ್ಯದಲ್ಲಿ ಈ ಪ್ರಯತ್ನ ಮುಂದುವರಿಸಲಿಲ್ಲ. !
2) ಇಲ್ಲಿ ಮುಖ್ಯವಾಗಿರೋದು ಆಯಾ ರಾಜ್ಯದ ರೈತರ ಹಿತಾಸಕ್ತಿ ವಿಷಯ ಮಾತ್ರ . ದಿನವೂ ಈಗ ಸಾವಿರಾರು / ಮುಂದೆ ಲಕ್ಷಾಂತರ ಲೀಟರ್ ಹಾಲು ಅಮುಲ್ ನಿಂದ ಮಾರಾಟಕ್ಕೆ ಬಂದರೆ ಈಗಲೇ 73 ಲಕ್ಷ ಲೀಟರ್ ಗೂ ಹೆಚ್ಚು ಹಾಲು ಕೊಡುವ ನಮ್ಮ ರೈತರು / ಡೈರಿಗಳು ನಂದಿನಿ ಸಂಸ್ಥೆ ಈ ಉಳಿಕೆಯಾಗುವ ಹೆಚ್ಚುವರಿ ಹಾಲು ಮಾರಲು ಎಲ್ಲಿಗೆ ಹೋಗಬೇಕು ?
ಅಮುಲ್ ಎಲ್ಲಾ ಉತ್ಪನ್ನಗಳು ಇಲ್ಲಿ ಮೊದಲಿನಿಂದ ಮುಕ್ತವಾಗಿ ಮಾರಾಟವಾಗುತ್ತಿದೆ . ಅದಕ್ಕೆ ಯಾವ ವಿರೋಧವೂ ಇಲ್ಲ ...ಆದರೆ ಈಗ ನೇರವಾಗಿ ಹೊಸದಾಗಿ ಪಾಲಿಥಿನ್ ಪ್ಯಾಕ್ ನಲ್ಲಿ ಹಾಲು ಮಾರಾಟ ಮಾಡಲು ಬರುತ್ತಿದೆ ..
ನಂದಿನಿ ತರಹ 1975 ರಿಂದ ಹಳ್ಳಿ ಸುತ್ತಾಡಿ ಕಷ್ಟಪಟ್ಟು ಬೆವರು ಸುರಿಸಿ ಸಾವಿರಾರು ಹಾಲು ಶೇಖರಣೆ ಸಂಘ ಸ್ಥಾಪಿಸಿ ಕಷ್ಟಪಟ್ಟು ದಿನಕ್ಕೆರಡು ಬಾರಿ ಲಾರಿ ಕಳಿಸಿ ಹಾಲು ಶೇಖರಣೆ ಮಾಡಿ / ಇಲ್ಲಿ ಡೇರಿ ಸ್ಥಾಪಿಸಿ ಅದು ಹಾಲು ಸಂಸ್ಕರಣೆ ಮಾಡುವುದಿಲ್ಲ.
(ಬದಲು ಹೊರರಾಜ್ಯದಲ್ಲಿ ಮಾಡುತ್ತದೆ ) ಈ ಸದ್ಯಕ್ಕೆ ಅದಕ್ಕೆ ಸಹಕಾರಿ ನಿಯಮಗಳಲ್ಲಿ ಅವಕಾಶವೂ ಇಲ್ಲ
KMF
3)ಅಮುಲ್ ನ ಹತ್ತಾರು /ನೂರಾರು ಬಗೆಯ/ಪ್ಯಾಕ್ ಗಳ ಉತ್ಪನ್ನಗಳ ಮಾರಾಟಕ್ಕೆ kmf ನಂದಿನಿ ಆಗಲಿ / ಸರ್ಕಾರವಾಗಲಿ & ನಮ್ಮ ವಿಶಾಲ ಹೃದಯದ ಧಾರಾಳಿ ಕನ್ನಡಿಗರಾಗಲಿ ಎಂದೂ ವಿರೋಧವನ್ನೇ ಹಿಂದೆಯೂ / ಇಂದೂ ಮಾಡಿಲ್ಲ
ಹಿಂದೆ ಸರ್ಕಾರದ ನಮ್ಮ ನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ಇನ್ನೂ ಮುಂದಕ್ಕೆ ಹೋಗಿ ನಗರದ ಮಲ್ಲೇಶ್ವರ ಮತ್ತಿತರ ಆಯ್ದ ಬಸ್ ನಿಲ್ದಾಣಗಳಲ್ಲಿ ನಂದಿನಿ ಬದಲು ಅಮುಲ್ parlour ಸ್ಥಾಪನೆಗೆ ಒಳ್ಳೆಯ ಜಾಗಗಳನ್ನ ಕೊಟ್ಟಿದ್ದರು .
4)ಸಮೃದ್ಧ -ನಂದಿನಿಯೂ ಕೊರತೆ ಇರುವ ರಾಜ್ಯಗಳಲ್ಲಿ ಮಾತ್ರ ಆ ಹಾಲು ಮಂಡಳಿಗಳ ಮೌಖಿಕ ಸಹಮತಿಯೊಂದಿಗೆ. ಸೌಹಾರ್ದತೆಯಲ್ಲಿ ಹಾಲು ಮಾರಾಟ ಮಾಡುತ್ತಿದೆ
5)ಹಾಲು ಸಮೃದ್ಧಿ ಇದ್ದರೂ ನಂದಿನಿ ಯು ಗುಜರಾತ್ / ಅಮುಲ್ ಮೂಲ ಕ್ಷೇತ್ರದ ನಗರಗಳಿಗೆ ಮಾರಾಟಕ್ಕೆ ಹೋಗಿಲ್ಲ !
6)ದಶಕಗಳಿಂದ ಅಮುಲ್ ಮತ್ತು ನಂದಿನಿ ಪರಸ್ಪರ ಸಹಕಾರ ತತ್ವ ಅಳವಡಿಸಿಕೊಂಡೆ ಒಬ್ಬೊರಿಗೊಬ್ಬರು ಪೂರಕವಾಗಿ ಮೂಲಕ್ಕೆ /ಬುಡಕ್ಕೆ ಕೈ ಹಾಕದೆ ಇಲ್ಲಿವರೆಗೆ ಸೋದರತ್ವದ ಹೊಂದಾಣಿಕೆಯಲ್ಲಿ ವ್ಯವಹರಿಸುತ್ತಿವೆ
ಅಮುಲ್ ಗೆ ಬೆಂಗಳೂರು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಾರಲು ಉತ್ತಮ-ಗುಣ ಮಟ್ಟದಲ್ಲಿ -ಅಮುಲ್ icecream ಅನ್ನು ಪ್ರತಿದಿನವೂ ಸಾವಿರಾರು ಲೀಟರ್ ನಷ್ಟು ನಮ್ಮದೇ ಶುದ್ಧ ನಂದಿನಿ ಹಾಲನ್ನೇ ಬಳಸಿ kmf ದಶಕಗಳಿಂದ ಒದಗಿಸುತ್ತಿದೆ .
ಇಲ್ಲಿ ಐಸ್ ಕ್ರೀಮ್ ನ -ಸಾಗಾಣಿಕೆ ವೆಚ್ಚ ತಗ್ಗಿಸಲು ಅಮುಲ್ ಹೀಗೆ-ಇಲ್ಲೇ ನಂದಿನಿ ಘಟಕದಲ್ಲಿ ಉತ್ಪಾದನೆ ಮಾಡಿದಾಗ ,ಹೆಚ್ಚುವರಿ ಸಾಗಾಣಿಕೆ ವೆಚ್ಚದಲ್ಲಿ ದಿನವೂ ದೊಡ್ಡ ಪ್ರಮಾಣದ ಹಾಲು ಯಾಕೆ ಬರಬೇಕು ?
KMF
7)ಇತರ ಹತ್ತಾರು ಖಾಸಗಿ ಹಾಲು ಬ್ರಾಂಡುಗಳು ಮಾರಾಟಕ್ಕೆ ಬಂದ್ದಿದ್ದರೂ ಅವು ಸೋದರ ಸಂಸ್ಥೆಗಳಲ್ಲ .. ಮತ್ತು ವಹಿವಾಟಿನಲ್ಲಿ ದೊಡ್ಡ ಬ್ರಾಂಡ್ ಗಳಲ್ಲ ..ಗಣ್ಯವಾಗುವುದಿಲ್ಲ .
8) ಇದರಲ್ಲಿ ರಾಜಕೀಯ ವಿಷಯ ಇಲ್ಲ & ಇದು ವಿಲೀನದ ಪ್ರಯತ್ನದ ಭಾಗ ಅಲ್ಲ ..
9)ವ್ಯಾವಹಾರಿಕ ತತ್ವ / ಈವರೆಗೆ ಒಪ್ಪಿಕೊಂಡ ನಿಯಮ ಗಳ ಸ್ಪರ್ಧೆ /ಇತ್ಯಾದಿ ಬೇರೆಯ ಸಣ್ಣ ಬ್ರಾಂಡ್ ಗಳು /ಇತರರು ಮಾಡಿದರೆ ಸಹಿಸಿ ಕೊಂಡರೂ ..)emotional bondage ಇರುವ ಸಹಕಾರ ರಂಗದ ನಾವುಗಳೇ ಸೋದರ ಸಂಸ್ಥೆಗಳು ಅಮುಲ್ / ನಂದಿನಿ ಸಣ್ಣ ವ್ಯತ್ಯಾಸ ಮಾಡಿದರೂ ಯಾರೂ ಸಣ್ಣದಾಗಿ ಪರಿಗಣಿಸುವುದಿಲ್ಲ !ಅದು ದೊಡ್ಡದಾಗಿ ಕಾಣುವುದು ಸಹಜ ..
10) ವಿಶ್ವ ಮಾನವತೆ / ಜಗವೆಲ್ಲಾ ಒಂದೇ ಅಂದರೂ ಪ್ರಕೃತಿ ಕೊಡುಗೆಯಾದ ನೀರಿನ / ಜಾಗದ / ಭಾಷೆ / ವಿಷಯ ಬಂದರೆ
ಪಕ್ಕದ ಜಿಲ್ಲೆಯಾಗಲಿ /ರಾಜ್ಯವಾಗಲಿ / ದೇಶವಾಗಲಿ ಯಾವುದೇ ದೇಶದ / ಆಯಾ ಪ್ರದೇಶದ ಜನತೆಗೆ / ಅಭಿಮಾನಿಗಳಿಗೆ ನೋವು / ಸಿಟ್ಟು / ಪ್ರತಿಭಟನೆ ಸಹಜ ..
ಭಾವನಾತ್ಮಕವಾಗಿ ಆ ತರಹದ ಬೇಡದ ಕೃತ್ಯ ಗಳಂತೆಯೇ ನೋಡಲಾಗುತ್ತದೆ
KMF
11)ಈಗ ಅಮುಲ್ ಪರ ವಾದ ಮಂಡಿಸುವವರಿಗೆ / ಕನ್ನಡಿಗರಿಗೆ ನಂದಿನಿಯಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಸ್ವಲ್ಪ ವ್ಯತ್ಯಾಸಗಳೂ ಕಾರಣ ವಾಗಿವೆ .
ಈ ವರ್ಷ ಹಾಲು /ಉತ್ಪನ್ನಗಳ/ಕೊರತೆ ,/ ಇನ್ನಿತರ ಸ್ಥಳೀಯ ವ್ಯತ್ಯಾಸಗಳೂ ಹೆಚ್ಚಾಗಿ ಭಾದಿಸುತ್ತಿವೆ ..ನಿಜ - ಸಹಜ !
ತಾತ್ಕಾಲಿಕವಾಗಿ ನಂದಿನಿ ಯಲ್ಲಾಗಲಿ ಈ ವರ್ಷ ಸ್ವಲ್ಪ ಏನೋ ಕೊರತೆ /ವ್ಯತ್ಯಾಸ ವಾಗಿದ್ದರೂ ಅದನ್ನೇ ವರ್ಷ ಪೂರ್ತಿ ಜೊತೆಯಿರುವ /ಪೊರೆಯುವ ನಿಷ್ಠಾವಂತ ನಂದಿನಿಗೆ ವಿರೋಧ / ಕೇಡು ಬಯಸಲಾಗದು !
ಇಲ್ಲೂ ಪರಭಾಷಿಕರಿಗಿಂತ ನಮ್ಮ್ ಹಲವು ವಿಶಾಲ ಕನ್ನಡದವರೇ ,ರಾಜ್ಯಕ್ಕಿಂತ ಬ್ರಾಂಡ್ ( ರಾಷ್ಟ್ರೀಯ ) ಮೋಹದಲ್ಲಿ ಸ್ವಲ್ಪ ಹೆಚ್ಚು ಮನ್ನಣೆ ಜಾಸ್ತಿ ನೀಡುವವರು .
ಅಮುಲ್ ಹಾಲು ಬಣ್ಣ ..ಸ್ವಲ್ಪ ಜಾಸ್ತಿ ಬಿಳಿಬಣ್ಣ ಬೇರೆ !!!
(ಸಹಜವಾಗಿ ಗುಜರಾತ್ ನಲ್ಲಿ ಎಮ್ಮೆ ಹಾಲಿನ ಪ್ರಮಾಣ ತುಂಬಾ ಜಾಸ್ತಿ ಇರುವ ಕಾರಣ) -ಇಲ್ಲಿ ನಂದಿನಿ ಹಸುವಿನ ಹಾಲು.
KMF
ಈ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆಯಲು .. ರಾಜ್ಯದ ರೈತರು / ಗ್ರಾಹಕರು / ಹಿಂದಿನಿಂದಲೂ ಸಂಸ್ಥೆಗೆ ನಿಷ್ಠೆಯಿಂದ ದುಡಿದ ಸಿಬ್ಬಂದಿ ಅಧಿಕಾರಿಗಳು / ನಿಷ್ಠ ರೈತರ ಆಡಳಿತ ಮಂಡಳಿಗಳು / ಅಧ್ಯಕ್ಷರು /ಮುಖ್ಯ ಕಾರಣ .ನಮ್ಮ ವಿವಿಧ ಸರ್ಕಾರ ಗಳು ಪೂರ್ಣ ಉತ್ತೇಜನ ನೀಡಿ ಬೆಂಬಲಿಸಿವೆ . ಮೇಲಾಗಿ ನಾಡಿನ ಪ್ರಸಿದ್ಧ ಕನ್ನಡಿಗರ ಆರಾಧ್ಯ ದೈವ ನನ್ನ ಆಪ್ತರಾದ ಡಾ || ರಾಜಕುಮಾರ್ ರವರು / ಆಪ್ತ ಸ್ನೇಹಿತರು -ಸೂಪರ್ ಸ್ಟಾರ್ ಗಳಾದ , ಉಪೇಂದ್ರ , ಪುನೀತ್ ರಾಜಕುಮಾರ್-ಉಚಿತ ಪ್ರಚಾರ ಮಾಡಿ ನಂದಿನಿಗೆ ಭಾರಿ ಬೆಂಬಲ ನೀಡಿ ಸಹಾಯ ಮಾಡಿದ್ದಾರೆ.
ಈಗ ಎಲ್ಲಾ ಕ್ಷೇತ್ರದಲ್ಲೂ /ಸಂಸ್ಥೆಗಳಲ್ಲೂ / ರಾಜಕೀಯ ರಂಗದಲ್ಲೂ / ಪ್ರದೇಶಗಳಲ್ಲೂ /ಮನೆಗಳಲ್ಲೂ / ಮನುಜರಲ್ಲೂ ಸ್ವಲ್ಪ ಮಟ್ಟಿಗೆ ಚಿಕ್ಕದಾಗಿಯೂ /ದೊಡ್ಡದಾಗಿಯೂ ಮೌಲ್ಯಗಳು ವ್ಯತ್ಯಾಸ /ಇಳಿಕೆ ಕಾಣುತ್ತಿದೆ
ಈ ಕ್ಷೇತ್ರದಲ್ಲಿ ಹಿಂದೆ ನಂದಿನಿ ಗಿಂತಮೇಲಿದ್ದ ,ಮೆರೆದಿದ್ದ ಪಕ್ಕದ ರಾಜ್ಯಗಳ ಪ್ರಸಿದ್ಧ ಹಾಲಿನ ಬ್ರ್ಯಾಂಡು ಗಳು ಈಗಾಗಲೇ ಕುಸಿತ ಕಂಡಿವೆ .ಇತ್ತೀಚಿಗೆ ಅಗ್ರ ಮಹಾಮಂಡಳಿಯ ವಾತಾವರಣದಲ್ಲೂ ಕೆಲ ಬದಲಾವಣೆಗಳೂ ಕೇಳಿ ಬರುತ್ತಿವೆ .
ಏನೇ ಆದರೂ ,ಇಲ್ಲಿ ನಂದಿನಿಯಲ್ಲಿಯೂ ನಿಷ್ಠಾವಂತ ರೈತರು ಮತ್ತು ಈ ಪರಿಯ ಭಾರಿ ವಾತ್ಸಲ್ಯ ಪ್ರೀತಿ ಭಾಂದವ್ಯ ತೋರುತ್ತಿರುವ ನಂದಿನಿ ಯ ಹೆಮ್ಮೆಯ ಅಪೂರ್ವ ಗ್ರಾಹಕರೂ ,ಅಕಸ್ಮಾತ್ ಕೊರತೆ ಇತ್ಯಾದಿ ವ್ಯತ್ಯಾಸಗಳಾಗಿ ನಂದಿನಿ ಕೈ ಬಿಟ್ಟಲ್ಲಿ ನಂದಿನಿಯೂ ಮುಂದೆ ಬೇಗ ಸೊರಗಬಹುದು ..
KMF
ದಯವಿಟ್ಟು ಇದಕ್ಕೆ ಗ್ರಾಹಕರು /ರೈತರು / ಸಿಬ್ಬಂದಿ ಅವಕಾಶ ನೀಡಬಾರದು ! ಹಾಗಾಗದಿರಲಿ 🙏ಈಗಲೂ ಅಮುಲ್ ತನ್ನ ಎಲ್ಲಾ ಉತ್ಪನ್ನ ಗಳ ನಿರ್ವಿಘ್ನವಾಗಿ. ಮಾರುತ್ತಿದೆ /ಮಾರಲು ಮುಕ್ತ ಅವಕಾಶವಿದೆ .ಅವನ್ನೆಲ್ಲಾ ನಂದಿನಿ -/ ರಾಜ್ಯ -ಕಿಂಚಿತ್ತೂ ವಿರೋಧಿಸದೆ -ಸಹಕರಿಸಿ -ಸ್ವಾಗತಿಸಿದೆ .ನಮ್ಮ ಭಾರಿ ವಿಶಾಲ ಹೃದಯದ ಕನ್ನಡಿಗರು-ಸಹ ರತ್ನ ಗಂಬಳಿ ಹಾಕಿ ಸ್ವಾಗತಿಸಿ ಅಪ್ಪಿಕೊಂಡಿದ್ದಾರೆ !ಮುಂದೆಯೂ ಹೆಚ್ಚಾಗಲಿದೆ .
ಆದರೆ ಅಮುಲ್ ನಮ್ಮ ರೈತರ ಮೂಲ -ದೈನಂದಿನ ಆದಾಯದ ಹಾಲಿನ ವಹಿವಾಟು -ಶುದ್ಧ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ಮಾತ್ರ ಬರದೆ ಎಂದಿನ ಸಹಕಾರ ತೋರಲಿ ಎಂದಷ್ಟೇ ಈಗಿನ ನಂದಿನಿ ರೈತ ಪ್ರೇಮಿಗಳ / ಕನ್ನಡಿಗರ /ನಮ್ಮ ಮನವಿ - ಅಷ್ಟೇ . ಕಷ್ಟ ಪಡುವ ಹಾಲು ಉತ್ಪಾದಕ ರೈತರು / ಉಚಿತವಾಗಿ ಪ್ರಚಾರ ಮಾಡಿ ಬೆಂಬಲಿಸಿದವರ ಚಿತ್ರಗಳನ್ನು ಹಂಚಿಕೊಂಡಿದ್ದು ಇಲ್ಲಿವೆ. ದಯವಿಟ್ಟು ನಮ್ಮ ರೈತರಿಗಾಗಿ -ನಮ್ಮ ನಂದಿನಿಯ ಉಳಿಸಿ ಬೆಳೆಸೋಣ .🙏