ಅನುದಾನದ ಹಂಚಿಕೆಯಲ್ಲಿ ಬಿಜೆಪಿ ತಾರತಮ್ಯ: ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ!
*ಅನುದಾನದಲ್ಲಿ ಹಂಚಿಕೆಯಲ್ಲಿ ಬಿಜೆಪಿ ಸರ್ಕಾರದಿಂದ ತಾರತಮ್ಯ.
*ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪ.
*ಮುಂದಿನ ದಿನಗಳಲ್ಲಿ ದಾಖಲೆ ಸಹಿತ ವಿಸ್ತೃತವಾಗಿ ವಿವರ: ಯತೀಂದ್ರ
ಮೈಸೂರು (ಜ. 22): ಅನುದಾನದಲ್ಲಿ ಹಂಚಿಕೆಯಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡಿದೆ ಎಂದು ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಆರೋಪಿಸಿದ್ದಾರೆ. "ಲೋಕೋಪಯೋಗಿ ಇಲಾಖೆ ಮುಂದುವರಿದ ಕಾಮಗಾರಿಗೆ ಎಸ್‌ಸಿಪಿ ಅನುದಾನದಲ್ಲಿ 9 ಕೋಟಿ ರೂ. ಮತ್ತು ಹೊಸ ಕಾಮಗಾರಿ 7 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು.ಈ ಪೈಕಿ ಪಿರಿಯಾಪಟ್ಟಣಕ್ಕೆ 6 ಕೋಟಿ ರೂ. ಕೊಡಲಾಗಿದೆ. ಕೇವಲ ಬಿಜೆಪಿ, ಅವರಿಗೆ ಬೇಕಾದ ಜೆಡಿಎಸ್ ಶಾಸಕರಿಗೆ ಮಾತ್ರ ಅನುದಾನ ಸಿಗುತ್ತಿದೆ. ಕಾಂಗ್ರೆಸ್ ಶಾಸಕರನ್ನು ಅಲಕ್ಷ್ಯ ಮಾಡಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಸಹಿತ ವಿಸ್ತೃತವಾಗಿ ವಿವರ ನೀಡುತ್ತೇವೆ" ಎಂದು ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆ ಅನಿವಾರ್ಯ: ಸಚಿವ ಸುನಿಲ್ ಕುಮಾರ್: ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ(Kannada Classical Status) ನೀಡಬೇಕಾದ ಅನುದಾನ ಬಿಡುಗಡೆ ಹಾಗೂ ತುಳು ಭಾಷೆಯನ್ನು(Tulu Language) ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಸಂಬಂಧ ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್(Sunil Kumar) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26ರ ನಂತರ ದೆಹಲಿಗೆ ತೆರಳಲಿದ್ದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ(Department of Kannada & Culture) ಎರಡೂ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ(Central Government) ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದರು.
Electricity Bill: ವಿದ್ಯುತ್ ಬಿಲ್ ಮನ್ನಾ ವಿಚಾರ : ಸಚಿವ ಸುನೀಲ್ ಸ್ಪಷ್ಟನೆ
ಇಂಧನ ಇಲಾಖೆಗೆ(Department of Energy) ಸಂಬಂಧಪಟ್ಟಂತೆ, ಆರ್‌ಡಿಎಸ್‌ಎಸ್ ಯೋಜನೆಗೆ ಎಲ್ಲ ರಾಜ್ಯಗಳಿಗೂ ಕೇಂದ್ರ ಅನುದಾನ(Grants) ಕೊಡುತ್ತಿದೆ. ಹಾಗಾಗಿ, ರಾಜ್ಯಕ್ಕೂ ಅನುದಾನ ಕೊಡಬೇಕೆಂದು ಮನವಿ ಮಾಡುತ್ತೇನೆ. ಇದೇ ವೇಳೆ, ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನಕ್ಕೆ ನೀಡಬೇಕಾದ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ. ಅನುದಾನ ನಿರೀಕ್ಷಿತ ಮಟ್ಟದಲ್ಲಿ ಆಗಬೇಕು. ಅದೇ ರೀತಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.