ಹಿಂದೂ ಸಮಾಜ ಮುಂದೊಂದು ದಿನ ಮಸೀದಿಗಳನ್ನು ಒಡೆದು ಪುಡಿಪುಡಿ ಮಾಡುತ್ತೆ: ಕೆಎಸ್ ಈಶ್ವರಪ್ಪ ಮತ್ತೆ ಪ್ರಚೋದನಕಾರಿ ಮಾತು!

ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದೀರಿ ಮಾರ್ಯಾದೆಯಿಂದ ಹಿಂದೆ ತೆಗೆದುಕೊಳ್ಳಿ. ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಪುಡಿಪುಡಿ ಮಾಡುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಪ್ರಚೋದನಕಾರಿ ನೀಡಿದ್ದಾರೆ.

BJP Former P minister KS Eshwarappas provocative speech on Muslim community at chikkodi rav

ಚಿಕ್ಕೋಡಿ (ಡಿ.31): ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದೀರಿ ಮಾರ್ಯಾದೆಯಿಂದ ಹಿಂದೆ ತೆಗೆದುಕೊಳ್ಳಿ. ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಪುಡಿಪುಡಿ ಮಾಡುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಪ್ರಚೋದನಕಾರಿ ನೀಡಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಶ್ರೀರಾಮಸೇನೆಯಿಂದ ಆಯೋಜನೆ ಮಾಡಿರುವ 'ಮೋದಿ ಗೆಲ್ಲಿಸಿ, ಭಾರತ ಉಳಿಸಿ' ಅಭಿಯಾನ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ ಅವರು, ಮಥುರಾ, ಕಾಶಿ ದೇವಸ್ಥಾನಗಳ ಕಾರ್ಯ ಸರ್ವೆ ಮಾಡುತ್ತೇವೆ. ಕೋರ್ಟ್ ಮುಖಾಂತರ ಸರ್ವೆ ಕಾರ್ಯ ನಡೆಯುತ್ತದೆ. ಕಾಶಿ ವಿಶ್ವನಾಥ ಮಥುರಾದ ಶ್ರೀ ಕೃಷ್ಣ ದೇವಸ್ಥಾನವೂ ಸಹ ಆಯೋಧ್ಯೆ ಭವ್ಯ ಮಂದಿರದಂತೆ ಶೀಘ್ರದಲ್ಲಿ ನಿರ್ಮಾಣ ಆಗುತ್ತದೆ ಎಂದರು.

 

ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ರೀತಿ ಆಡ್ತಿದ್ದಾರೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಮೋದಿ ಸೂರ್ಯ ಇದ್ದಂತೆ: 

ದೇಶದಲ್ಲಿ ಶ್ರೀ ರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನ ವಿರೋಧ ಮಾಡಿದವರ ಹೊಟ್ಟೆಯಲ್ಲಿ ಕಸಿವಿಸಿ ಆಗುತ್ತಿದೆ. ಪ್ರಿಯಾಂಕ ಖರ್ಗೆ ಎನ್ನುವ ಚಿಲ್ಲರೇ ನರೆಂದ್ರ ಮೋದಿ ಬಗ್ಗೆ ಮಾತನಾಡುತ್ತಾನೆ. ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ. ಚಿಲ್ಲರೆಗಳೆಲ್ಲ ಕೆಳಗೆ ನಿಂತು ಮೇಲಿರುವ ಸೂರ್ಯನಿಗೆ ಉಗುಳಿದರೆ ಅದು ಬಿಳುವುದು ಮರಳಿ ಮುಖದ ಮೇಲೆಯೇ. ನರೇಂದ್ರ ಮೋದಿ ನಡೆದರೆ ನಾಯಿಗಳು ಬೊಗಳುತ್ತಿರುತ್ತವೆ. ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.

ವಿಶ್ವಾದ್ಯಂತ ಜೈಶ್ರೀರಾಮ್ ಕೂಗು:

ಪಾಕಿಸ್ತಾನ ಸೇರಿ ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ದೇಶವಷ್ಟೇ ಅಲ್ಲ, ವಿದೇಶದಲ್ಲೂ ಜೈಶ್ರೀರಾಮ್ ಘೋಷಣೆ ಕೇಳುತ್ತಿದೆ. ಪಾಕಿಸ್ತಾನ ದೇಶದವರು ಸಹ ಮೋದಿ ಪ್ರಧಾನಿ ಆಗಿ ಬರಲಿ ಎಂದು ಬಯಸುತ್ತಿದ್ದಾರೆ. ಪರಕೀಯರು ಅಧಿಕಾರ ನಡೆಸಿದರು, ದೇಶವನ್ನ ಲೂಟಿ ಮಾಡಿದರು. ಆದರೂ ಅವರಿಂದ ಭಾರತೀಯ ಸಂಸ್ಕೃತಿ ನಾಶ ಮಾಡಲು ಆಗಲಿಲ್ಲ. ಆದರೆ ಈ ಕಾಂಗ್ರೆಸ್ಸಿನವರು ಅಧಿಕಾರದ ಆಸೆಯಿಂದ ದೇಶ ತುಂಡು ತುಂಡು ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಜನೆವರಿ 22 ರಾಮಮಂದಿರ ಉದ್ಘಾಟನೆ:

ಮುಂದಿನ ಜನೆವರಿ 22ರಂದು ಆಯೋಧ್ಯೆ ಭವ್ಯ ರಾಮಮಂದಿರ ಉದ್ಘಾಟನೆಯಾಗುತ್ತದೆ. ಅಂದು ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ. ಕಾಂಗ್ರೆಸ್ ನಾಯಕರು ಹಿಂದೂಗಳ ನಡುವೆ ಬೆಂಕಿ ಹಚ್ಚಿದರು. ಕಾಂಗ್ರೆಸ್ ನಾಯಕರು ರಾಮ‌ ಮಂದಿರ ಉದ್ಘಾಟನೆಯ ಪಾಸ್ 'ಶೋ ಆಫ್' ಮಾಡಲು ಕೇಳುತ್ತಿದ್ದಾರೆ. ರಾಮನ ಅಸ್ತಿತ್ವ ಪ್ರಶ್ನಿಸಿದವರು, ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ಪ್ರಶ್ನಿಸಿದವರು ಈಗ ಆಯೋಧ್ಯೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಮಗೂ ಪಾಸ್ ಕೊಡಿ ಅಂತಾ ಕೇಳ್ತಿದ್ದಾರೆ. ಮೋದಿ ಕಾಲಾವಧಿಯಲ್ಲಿ ನಮ್ಮ ಸೈನಿಕರು ಸಂತೋಷದಿಂದ ದೇಶ ಕಾಯುತ್ತಿದ್ದಾರೆ ಎಂದರು.

ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದ್ರೆ ರಾಜ್ಯಕ್ಕೂ, ದೇಶಕ್ಕೂ ಒಳ್ಳೆಯದಾಗುತ್ತೆ: ಕೆಎಸ್ ಈಶ್ವರಪ್ಪ

ಸಿದ್ದರಾಮಯ್ಯ ವಿರುದ್ಧ ಗುಡುಗು:

ಸಿದ್ದರಾಮಯ್ಯನವರು ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಖರ್ಚು ಮಾಡುವುದಾಗಿ ಘೋಷಿಸಿದ್ದರು. ಅದರಲ್ಲಿ ಈಗಾಗಲೇ ಒಂದು ಸಾವಿರ ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ ಸೂಚನೆ ನೀಡಿದ್ದಾರೆ. ಇವರ ಅಪ್ಪನ ಮನೆಯಿಂದ ದುಡ್ಡು ತಂದು ಕೊಡ್ತಾರಾ? ಹಮ್ ದೋ ಹಮಾರೆ ದೋ ಎಂದು ಮೋದಿ ಕಾನೂನು ತಂದಿದ್ದಾರೆ. ಮುಸ್ಲಮಾನರು ಹಮ್ ಪಾಂಚ್ ಹಮಾರಾ ಪಚ್ಚಿಸ್ ಎನ್ನುವದು ಮೋದಿ ಕಾಲಾವಧಿಯಲ್ಲಿ ಸಾಧ್ಯವಿಲ್ಲ. ಹಿಜಾಬ್ ಧರಿಸಿ ಬಂದರೇ ಹಿಂದೂ  ಸಮಾಜ‌ದ ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸಿ ಎಚ್ಚರಿಕೆ ನೀಡಿದ್ದಾರೆ.  ಸಿದ್ದರಾಮಯ್ಯ ಕೋರ್ಟ ಆದೇಶ ತಿರಸ್ಕರಿಸಿ ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಲೈಕೆ ರಾಜಕಾರಣದ ಪರಮಾವಧಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂದೂ ಒಗ್ಗಟ್ಟು ಏನೆಂದು ತೋರಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios