ಜಮೀರ್ ಅನ್ನೋ ಮೂರ್ಖನಿಂದ ನ್ಯಾಯಾಂಗ ನಿಂದನೆ; ಮಾಜಿ ಸಚಿವ ಭಗವಂತ ಖೂಬಾ ಕಿಡಿ
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ನೀಡಿರುವ ತೀರ್ಪು ರಾಜಕೀಯ ಪ್ರೇರಿತ ಎಂದು ನ್ಯಾಯಾಂಗ ನಿಂದನೆ ಮಾಡಿರುವ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಚಾಮರಾಜನಗರ (ಸೆ.28): ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ನೀಡಿರುವ ತೀರ್ಪು ರಾಜಕೀಯ ಪ್ರೇರಿತ ಎಂದು ನ್ಯಾಯಾಂಗ ನಿಂದನೆ ಮಾಡಿರುವ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು, ಸಚಿವ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈಶ್ವರಪ್ಪರನ್ನ ಬಿಜೆಪಿಗೆ ತರಲು ಪ್ರಯತ್ನ? ಸಭೆ ಸೇರಿದ್ದೇಕೆ? ಯತ್ನಾಳ್ ಹೇಳಿದ್ದೇನು?
ಜಮೀರ್ ಅನ್ನೋ ಮೂರ್ಖ ನ್ಯಾಯಾಂಗ ನಿಂದನೆ ಮಾಡಿದ್ದಾನೆ. ಸಂವಿಧಾನ ರಕ್ಷಣೆ, ಪ್ರಜಾಪ್ರಭುತ್ವ, ಕಾನೂನಿನ ಬಗ್ಗೆ ಕಾಂಗ್ರೆಸ್ ನವರು ಬೊಬ್ಬೆ ಹಾಕ್ತಾರೆ. ಆದರೆ ತಮ್ಮ ಅದೇ ಕಾನೂನು ಅವರ ತಪ್ಪು ಎತ್ತಿ ತೋರಿಸಿದಾಗ ನ್ಯಾಯಾಂಗ ನಿಂದನೆ ಮಾಡಲು ಹೇಸುವುದಿಲ್ಲ. ಕಾಂಗ್ರೆಸ್ ಇರೋದೇ ಹಾಗೆ ಬಾಯಲ್ಲಿ ಕಾನೂನು ಸಂವಿಧಾನ ಅಂತಾರೆ ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ತಾರೆ. 2011 ರಲ್ಲಿ ರಾಜ್ಯಪಾಲರನ್ನು ಸಮರ್ಥಿಸಿದ್ದ ಇದೇ ಸಿದ್ದರಾಮಯ್ಯ ಈಗ ರಾಜ್ಯಪಾಲರ ವಿರುದ್ಧ ತಿರುಗಿಬಿದ್ದಿದ್ದಾರೆ. ಅಧಿಕಾರದಲ್ಲಿಲ್ಲದಾಗ ಒಂದು ಮಾತು ಅಧಿಕಾರದಲ್ಲಿದ್ದಾಗ ಇನ್ನೊಂದು ಮಾತು. ಬೇರೆಯವರ ವಿಚಾರದಲ್ಲಿ ಕಾನೂನಿನ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯ. ಇದೀಗ ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರೂ ರಾಜೀನಾಮೆ ನೀಡಿ ತನಿಖೆ ಎದುರಿಸದೆ ನಾನ್ಯಾಕೆ ರಾಜೀನಾಮೆ ಕೊಡಲಿ ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಲಜ್ಜೆಗೆಟ್ಟ ಭಂಡತನ ತೋರಿಸುತ್ತಿದ್ದಾರೆ. ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡೋವರೆಗೂ ನಮ್ಮ ಹೋರಾಟ ಮುಂದುವರಿಯುತ್ತೆ. ಸಿದ್ದರಾಮಯ್ಯ ಸರ್ಕಾರವನ್ನ ಕೆಳಗೆ ಇಳಿಸೇ ಇಳಿಸ್ತೇವೆ. ಅಲ್ಲಿವರೆಗೆ ವಿರಮಿಸುವುದಿಲ್ಲ ಎಂದರು.
ಬೆಂಗಳೂರು ಐಟಿ ಹಬ್ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! ಡಿಕೆ ಶಿವಕುಮಾರ ಕೊಟ್ಟ ಶುಭ ಸುದ್ದಿ ಏನು?
ಮುಡಾ ಹಗರಣ ತನಿಖೆ ಲೋಕಾಯುಕ್ತರಿಂದ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಯುವುದು ಕಷ್ಟ, ಈ ಪ್ರಕರಣವನ್ನು ಸಿಬಿಐ ವಹಿಸಬೇಕು. ಸಿಬಿಐಗೆ ವಹಿಸಿದ್ರೆ ಹಗರಣ ಬಯಲಾಗುತ್ತದೆಂದೇ ಮುಂಚಿತವಾಗಿ ರಾಜ್ಯದಲ್ಲಿ ಸಿಬಿಐ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಸರ್ಕಾರದ ಅನುಮತಿ ಇಲ್ಲದೆ ತನಿಖೆ ಮಾಡುವಂತಿಲ್ಲ ಎಂದು ಮಾಡಿರುವ ಉದ್ದೇಶದ ಹಿಂದಿರುವುದು ಸಿದ್ದರಾಮಯ್ಯರನ್ನ ಪ್ರಕರಣದಿಂದ ರಕ್ಷಣೆ ಮಾಡುವುದಾಗಿದೆ. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.