ಶಾಲೆಗಳಿಗೆ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ; ಬಿಕೆ ಹರಿಪ್ರಸಾದ್ ಗಂಭೀರ ಆರೋಪ
ಬೆಂಗಳೂರು ನಗರ, ಗ್ರಾಮಾಂತರ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಡಿ.3): ಬೆಂಗಳೂರು ನಗರ, ಗ್ರಾಮಾಂತರ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವಾಗ ಸೋಲುತ್ತದೆಯೋ ಅಥವಾ ಮುಂದೆ ಸೋಲಲಿದೆ ಎಂದು ಗೊತ್ತಾಗುತ್ತದೋ.. ಆಗ ಹೀಗೆಲ್ಲಾ ಆಗುತ್ತದೆ. ಬಿಜೆಪಿ ಸೋಲುತ್ತದೆ ಎಂದು ಗೊತ್ತಾದಾಗ ಏನಾದರೂ ಒಂದು ಆಗುತ್ತದೆ. ಗೋಧ್ರಾ ಹತ್ಯಾಕಾಂಡ, ಪುಲ್ವಾಮಾದಂತಹ ಘಟನೆಗಳು ನಡೆಯುತ್ತವೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವುದು ಸಹ ಇದರ ಭಾಗವೇ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ; ನಾವು ಸುಮ್ಮನೆ ಕೂರೊಲ್ಲ; ದುಷ್ಕರ್ಮಿಗಳನ್ನ ಪತ್ತೆ ಹಚ್ತೇವೆ: ಡಿಕೆಶಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 25 ಪ್ರಕರಣಗಳು ಇದ್ದವು. ಅದನ್ನು ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ ಪ್ರಶ್ನಿಸಿದರು.
ಬಾಂಬ್ ಬೆದರಿಕೆ ಉಗ್ರರ ಕೆಲಸದಂತಿದೆ: ಆರ್ ಅಶೋಕ್
ಬೆಂಗಳೂರು: ನಗರದ ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್‌ನ ಸಂದೇಶ ನೋಡಿದರೆ ಇದೊಂದು ಭಯೋತ್ಪಾದಕರ ಕೆಲಸದಂತೆ ಕಾಣುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬಾಂಬ್ ಬೆದರಿಕೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಶುಕ್ರವಾರ ಬಸವೇಶ್ವರನಗರದ ನ್ಯಾಫಲ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಾಂಬ್ ಬೆದರಿಕೆ ಇ-ಮೇಲ್‌ನಲ್ಲಿ ಮುಸ್ಲಿಂ, ಅಲ್ಲಾಹು, ದೇವಸ್ಥಾನ, ಮುಂಬೈ ಹೋಟೆಲ್ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರನ್ನು ಭಯ ಬೀಳಿಸುವ ಹಾಗೂ ದೇಶಕ್ಕೆ ಬೆದರಿಕೆ ಹಾಕುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ’ ಎಂದರು.
ಶಾಲೆಗಳಿಗೆ ಬಾಂಬ್ ಬೆದರಿಕೆ - ವೀಕ್ ಲೀಡರ್ ಶಿಪ್ ಕಾರಣ: ಗೋವಿಂದ ಕಾರಜೋಳ
ಮಕ್ಕಳ ಜೀವ ಮುಖ್ಯ. ಪೋಷಕರು ಬಹಳ ಆತಂಕದಲ್ಲಿದ್ದಾರೆ. ಈ ಬೆದರಿಕೆ ಹಿಂದೆ ಭಯೋತ್ಪಾದನೆ ಹಿನ್ನೆಲೆಯುಳ್ಳವರ ಕೈವಾಡ ಇರುವಂತಿದೆ. ಬೆಂಗಳೂರು ನಗರದಲ್ಲಿ ಪದೇ ಪದೇ ಈ ರೀತಿ ಆದರೆ ಬೆಂಗಳೂರು ಬ್ರಾಂಡ್‌ಗೆ ತೊಂದರೆಯಾಗುತ್ತದೆ. ಇದರ ಹಿಂದೆ ದೊಡ್ಡ ಜಾಲ ಇರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.