Asianet Suvarna News Asianet Suvarna News

ಬಿಹಾರ ಸಿಎಂ ವಿರುದ್ಧ ಪೋಸ್ಟ್‌ ಹಾಕಿದ್ದ ಬಿಜೆಪಿ ಕಾರ‍್ಯಕರ್ತರೆ ಸೆರೆ

ಇತ್ತೀಚಿಗೆ ನಗರದಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ಮಹಾಘಟಬಂಧನ್‌ ಸಭೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೇಶ್‌ ಕುಮಾರ್‌ ಅವರ ಕುರಿತು ವಿವಾದಾತ್ಮಕ ಫ್ಲೆಕ್ಸ್‌ಗಳನ್ನು ಅಳವಡಿಸಿದ ಪ್ರಕರಣ ಸಂಬಂಧ ಮೂವರು ಬಿಜೆಪಿ ಕಾರ್ಯಕರ್ತರನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಬಂಧಿಸಿದ್ದಾರೆ.

BJP activists arrested for posting against Bihar CM at bengaluru rav
Author
First Published Jul 23, 2023, 5:42 AM IST

ಬೆಂಗಳೂರು (ಜು.23) :  ಇತ್ತೀಚಿಗೆ ನಗರದಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ಮಹಾಘಟಬಂಧನ್‌ ಸಭೆ ವೇಳೆ ಬಿಹಾರ ಮುಖ್ಯಮಂತ್ರಿ ನಿತೇಶ್‌ ಕುಮಾರ್‌ ಅವರ ಕುರಿತು ವಿವಾದಾತ್ಮಕ ಫ್ಲೆಕ್ಸ್‌ಗಳನ್ನು ಅಳವಡಿಸಿದ ಪ್ರಕರಣ ಸಂಬಂಧ ಮೂವರು ಬಿಜೆಪಿ ಕಾರ್ಯಕರ್ತರನ್ನು ಹೈಗ್ರೌಂಡ್‌್ಸ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರ ನಿವಾಸಿಗಳಾದ ಶ್ರೀರಾಮ್‌, ಕೆ.ಮೋಹನ್‌ ಹಾಗೂ ನಂದಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ. ರೇಸ್‌ ಕೋರ್ಸ್‌ ರಸ್ತೆಯಲ್ಲಿ ಮಹಾಘಟಬಂಧನ್‌ ಸಭೆ ನಡೆದ ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ ಬಳಿ ಆರೋಪಿಗಳು ವಿವಾದಾತ್ಮಕ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

ಬಂಧಿತ ಆರೋಪಿಗಳು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರ ವಿರೋಧಿ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೇಶ್‌ ಕುಮಾರ್‌(Bihar CM Nitish kumar) ಅವರನ್ನು ಲೇವಡಿ ಮಾಡಿ ಫ್ಲೆಕ್ಸ್‌ಗಳನ್ನು ಆರೋಪಿಗಳು ಅಳವಡಿಸಿದ್ದರು. ಈ ಕೃತ್ಯಕ್ಕೆ ರಾಜಕೀಯ ನಾಯಕರ ಕುಮ್ಮಕ್ಕು ಸಹ ಇರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.17ರಂದು ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪಕ್ಷವು ಮಹಾಘಟಬಂಧನ್‌ (ಇಂಡಿಯಾ) ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ 26 ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಆ ಹೋಟೆಲ್‌ ಸುತ್ತಮುತ್ತ ಟ್ರೀ ಲೈಟ್‌ ಜಂಕ್ಷನ್‌ನಲ್ಲಿ ಹರೇಕೃಷ್ಣ ರಸ್ತೆಯಲ್ಲಿನ ಕರ್ನಾಟಕ ಫಿಲಂ ಚೇಂಬರ್‌ ಮುಂಭಾಗದ ರಸ್ತೆ ಹಾಗೂ ಚಾಲುಕ್ಯ ಸರ್ಕಲ್‌ನ ಹೈಪಾಯಿಂಟ್‌ ಕಟ್ಟಡದ ಬಳಿ ಸೇರಿದಂತೆ 20 ಕಡೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪೋಟೋ ಬಳಸಿ ‘ಅಸ್ಥಿರ ಪ್ರಧಾನಿ ಅಭ್ಯರ್ಥಿ’ ಎಂದು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಈ ಫ್ಲೆಕ್ಸ್‌ಗಳನ್ನು ಜು.18 ರ ನಸುಕಿನ 3.30ರಿಂದ 5 ಗಂಟೆ ಅವಧಿಯಲ್ಲಿ ಟಾಟಾ ಏಸ್‌ ವಾಹನದಲ್ಲಿ ತಂದು ಹಾಕಿದ್ದರು. ಫ್ಲೆಕ್ಸ್‌ ಅಳವಡಿಕೆಗೆ ಶ್ರೀರಾಮ್‌ ಹಣಕಾಸು ನೆರವು ನೀಡಿದರೆ, ನಂದಕುಮಾರ್‌ ಮಾಲಿಕತ್ವದ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಫ್ಲೆಕ್ಸ್‌ಗಳನ್ನು ಮುದ್ರಿಸಲಾಗಿತ್ತು. ಫ್ಲೆಕ್ಸ್‌ಗಳನ್ನು ಮೋಹನ್‌ಗೆ ಸೇರಿದ ವಾಹನದಲ್ಲಿ ಸಾಗಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಭಾರತ ಮಾತೆಗೆ ಜೈ ಎಂದವರ ಗಡಿಪಾರು: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೋಟ ಕಿಡಿ

Follow Us:
Download App:
  • android
  • ios