ಬಜರಂಗದಳದ ಕಾರ್ಯಕರ್ತರು ಯಾವ ಸಮಾಜ ವಿರೋಧಿ ಕೃತ್ಯ ಮಾಡಿದ್ದಾರೆ ಎಂದು ಗಡಿಪಾರು ಆದೇಶ ಹೊರಡಿಸಿರುವ ಮಂಗಳೂರು ಪೊಲೀಸ್‌ ಕಮಿಷನರ್‌ ಉತ್ತರ ಕೊಡಬೇಕು. ಬಜರಂಗದಳದವರು ಕುಕ್ಕರ್‌ನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದಾರಾ, ಅಂತಾರಾಷ್ಟ್ರೀಯ ಲಿಂಕ್‌ ಇಟ್ಟುಕೊಂಡು ಮನೆಯಲ್ಲಿ ಗ್ರೆನೈಡ್‌ ಇಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಉಡುಪಿ(ಜು.23):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ. ಭಾರತ ಮಾತೆಗೆ ಜೈ ಅನ್ನುವವರನ್ನು ಗಡಿಪಾರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ನಾಯಕರು ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟವರ ಮೇಲೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಲ್ಲಿ ಮನೆಯಲ್ಲಿ ಗ್ರೆನೇಡ್‌ ಇಟ್ಟುಕೊಂಡಿದ್ದ ದುಷ್ಕರ್ಮಿಗಳನ್ನು ಉಗ್ರಗಾಮಿಗಳು ಎನ್ನಲು ಗೃಹಸಚಿವರು ಹಿಂದೇಟು ಹಾಕುತ್ತಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದಕರ ಸಂಪರ್ಕ ಇದ್ದರೂ ಅವರನ್ನು ಉಗ್ರಗಾಮಿ ಎಂದು ಕರೆಯಲು ಗೃಹಮಂತ್ರಿ ಸಿದ್ಧರಿಲ್ಲ ಎಂದು ಕೋಟ ತೀವ್ರ ವಾಗ್ದಾಳಿ ನಡೆಸಿದ್ದಾರೆ.

UDUPI: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮ ಬಂಗಾಳ ಮೂಲದ ಗರ್ಭಿಣಿಯ ರಕ್ಷಣೆ

ಬಜರಂಗದಳದ ಕಾರ್ಯಕರ್ತರು ಯಾವ ಸಮಾಜ ವಿರೋಧಿ ಕೃತ್ಯ ಮಾಡಿದ್ದಾರೆ ಎಂದು ಗಡಿಪಾರು ಆದೇಶ ಹೊರಡಿಸಿರುವ ಮಂಗಳೂರು ಪೊಲೀಸ್‌ ಕಮಿಷನರ್‌ ಉತ್ತರ ಕೊಡಬೇಕು. ಬಜರಂಗದಳದವರು ಕುಕ್ಕರ್‌ನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದಾರಾ, ಅಂತಾರಾಷ್ಟ್ರೀಯ ಲಿಂಕ್‌ ಇಟ್ಟುಕೊಂಡು ಮನೆಯಲ್ಲಿ ಗ್ರೆನೈಡ್‌ ಇಟ್ಟುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.