*   ಪ್ರಿಯಾಂಕ್‌ ಖರ್ಗೆ ಆರೋಪಕ್ಕೆ ಆಯುಕ್ತರ ಸ್ಪಷ್ಟನೆ*   ಪ್ರಿಯಾಂಕ್‌ ಸವಾಲು ಹಾಕು​ವುದು ಶೋಭೆ ತರಲ್ಲ: ನಾ​ರಾ​ಯ​ಣ​ಸ್ವಾ​ಮಿ*   ತಪ್ಪಿ​ತ​ಸ್ಥ​ರೆಂದು ಸಾಬೀ​ತಾ​ದರೆ ಯಾವುದೇ ಪಕ್ಷ​ದ​ವರೆ ಆಗಿ​ರಲಿ ಮುಲಾ​ಜಿ​ಲ್ಲದೆ ಕ್ರಮ

ಬೆಂಗಳೂರು(ನ.19): ಬಿಟ್‌ ಕಾಯಿನ್‌ ಪ್ರಕರಣದ ಆರೋಪಿ ರಾಬಿನ್‌ ಖಂಡೇವಾಲಾ ವ್ಯಾಲೆಟ್‌ನಿಂದ ಪೊಲೀಸರ ವ್ಯಾಲೆಟ್‌ಗೆ ವರ್ಗಾವಣೆ ಆಗಿರುವ 0.8 ಬಿಟ್‌ ಕಾಯಿನ್‌ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ.

ಬಿಟ್‌ ಕಾಯಿನ್‌ ಪ್ರಕರಣ ಸಂಬಂಧ ಆರೋಪಿ ರಾಬಿನ್‌ ಖಂಡೇವಾಲಾ(Robin Khandewala) ವ್ಯಾಲೆಟ್‌ನಿಂದ ಸರ್ಕಾರದ ಪಂಚರ ಸಮಕ್ಷಮದಲ್ಲಿ ಪೊಲೀಸ್‌ ವ್ಯಾಲೆಟ್‌ಗೆ ಬಿಟ್‌ ಕಾಯಿನ್‌ ವರ್ಗಾಯಿಸಲಾಯಿತು. ಈ ಬಗ್ಗೆ ಪಂಚನಾಮೆ ಸಹ ಆಗಿದ್ದು, ನ್ಯಾಯಾಲಯಕ್ಕೆ(Court) ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೂಡ ಲಗತ್ತಿಸಲಾಗಿದೆ ಎಂದು ಆಯುಕ್ತ ಕಮಲ್‌ ಪಂತ್‌(Kamal Pant) ವಿವರಣೆ ನೀಡಿದ್ದಾರೆ.

ಭಾರತದಲ್ಲಿ(India) ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ ವ್ಯವಹಾರ(Exchange Business) ನಡೆಸುವ ಕೆಲವೇ ಸಂಸ್ಥೆಗಳಲ್ಲಿ ಯುನೋ ಬಿಟ್‌ ಕಾಯಿನ್‌ ಕಂಪನಿ ಕೂಡಾ ಒಂದಾಗಿದ್ದು, ಅದೂ ಬೆಂಗಳೂರಿನಿಂದಲೇ ವಹಿವಾಟು ನಡೆಸುತ್ತಿದೆ. ಈ ಪ್ರಕರಣದಲ್ಲಿ ಆ ಕಂಪನಿ ಸಂತ್ರಸ್ತ ಕಂಪನಿಯಾಗಿದೆಯೇ ಹೊರತು ಆರೋಪಿಯಲ್ಲ. ತನಿಖೆಗೆ ತಾಂತ್ರಿಕ ನೆರವನ್ನು ಯುನೋ ಕಂಪನಿ ನೀಡಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Bitcoin Scam: ಕಾಂಗ್ರೆಸ್‌-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ..!

ಬಿಟ್‌ ಕಾಯಿನ್‌ ಹಗರಣ ಸಂಬಂಧ ಆರೋಪಿ ರಾಬಿನ್‌ ಖಂಡೇವಾಲಾ ವ್ಯಾಲೆಟ್‌ನಿಂದ ಜಪ್ತಿಯಾದ ಬಿಟ್‌ ಕಾಯಿನ್‌ ನಾಪತ್ತೆಯಾಗಿದೆ ಎಂದು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದರು. ಈ ಆರೋಪಕ್ಕೆ ಪೊಲೀಸ್‌ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಬಿಟ್ ಕಾಯಿನ್(Bitcoin) ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ(Bengaluru Police Commissioner's Office) ಇಂಟರ್‌ಪೊಲ್‌ನ(Interpol) ನೆರವು ಕೇಳಿದ್ದರ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಇದರಲ್ಲಿ ದೂರಿನ ಸಾರಾಂಶವನ್ನ ಏಕೆ ಉಲ್ಲೇಖಿಸಿಲ್ಲ? ಅಂತ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಅವರು ಪ್ರಶ್ನಿಸಿದ್ದರು. 

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ(Twitter) ನವೆಂಬರ್ 13 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನ ಉಲ್ಲೇಖಿಸಿರುವ ಪ್ರಿಯಾಂಕ ಖರ್ಗೆ(Priyank Kharge), ಕ್ರೈಂ ನಂ 3/2020 ರ ಪ್ರಕರಣ ಸಂಬಂಧ 28 ಏಪ್ರಿಲ್ 2021 ರಂದು ಬೆಂಗಳೂರು ಪೊಲೀಸ್ ಕಮಿಷನರ್ ಇಂಟರ್ ಪೊಲ್ ಗೆ ಪತ್ರ ಬರೆಯಲಾಗಿದೆ. ಆದರೆ, ಇದರಲ್ಲಿ ದೂರಿನ ಸಾರಾಂಶ ಉಲ್ಲೇಖಿಸಿಲ್ಲ ಏಕೆ..? ಅಂತ ಪ್ರಶ್ನೆ ಮಾಡಿದ್ದರು. 

ಪ್ರಿಯಾಂಕ್‌ ಸವಾಲು ಹಾಕು​ವುದು ಶೋಭೆ ತರಲ್ಲ: ಸಚಿವ ಎ.ನಾ​ರಾ​ಯ​ಣ​ಸ್ವಾ​ಮಿ

ರಾಮನಗರ: ಬಿಟ್‌ ಕಾಯಿನ್‌ ಪ್ರಕ​ರ​ಣದ ವಿಚಾ​ರ​ವಾಗಿ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ತಳ​ಬುಡ ಇಲ್ಲದೇ ಮಾತ​ನಾ​ಡು​ತ್ತಿ​ದ್ದಾರೆ. ಆತ ಒಬ್ಬ ವಿರೋಧ ಪಕ್ಷದವನ ಮಗನಾಗಿ, ರಾಜ್ಯದ ಮಾಜಿ ಸಚಿ​ವ​ನಾಗಿ ಗೌರವಯುತವಾಗಿ ಹೇಗೆ ಮಾತನಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಸಾಮಾ​ಜಿಕ ಮತ್ತು ಸಬ​ಲೀ​ಕ​ರಣ ರಾಜ್ಯ ಖಾತೆ ಸಚಿವ ಎ.ನಾ​ರಾ​ಯ​ಣ​ಸ್ವಾಮಿ ಕಿಡಿ​ಕಾ​ರಿ​ದ​ರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ಬೇರೆ ಜನ​ಪ್ರ​ತಿ​ನಿ​ಧಿ​ಗ​ಳಿಗೆ ಸವಾಲು ಹಾಕು​ವುದು ಪ್ರಿಯಾಂಕ ಖರ್ಗೆಗೆ ಶೋಭೆ ತರು​ವು​ದಿ​ಲ್ಲ. ಆತ ಅನ​ಗತ್ಯ ಮಾತು​ಗ​ಳನ್ನು ನಿಲ್ಲಿಸಿ ರಾಜ್ಯದ ಅಭಿ​ವೃದ್ಧಿ ಬಗ್ಗೆ ಮಾತ​ನಾ​ಡಲೆಂದು ಮನವಿ ಮಾಡು​ತ್ತೇನೆ ಎಂದರು.

Bitcoin scam;ಇಲ್ಲದ 'ಬಿಟ್‌' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!

ಬಿಟ್‌ ಕಾಯಿನ್‌ ಕುರಿ​ತಾಗಿ ಕೇಂದ್ರ​ದ​ಲ್ಲಿಯೇ ಚರ್ಚೆ​ಗಳು ನಡೆ​ಯು​ತ್ತಿವೆ. ಅದನ್ನು ಅಕೌಂಟ​ಬಿ​ಲಿಟಿ ಮಾಡ​ಬೇಕ ಬೇಡವ ಅಥವಾ ಆದಾಯ ತೆರಿಗೆ ಪರ​ಧಿಗೆ ಸೇರಿ​ಸ​ಬೇಕಾ ಬೇಡವೆ ಎಂಬು​ದರ ಬಗ್ಗೆ ವರದಿ ಸಿದ್ಧ​ವಾ​ಗು​ತ್ತಿದೆ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು.

ಮಾಜಿ ಸಿಎಂ ಸಿದ್ದ​ರಾ​ಮ​ಯ್ಯ​ರ​ವರು ಬಿಟ್‌ ಕಾಯಿನ್‌ ಬಗ್ಗೆ ಯಾವುದೇ ದಾಖ​ಲೆ​ಗ​ಳು ಇಲ್ಲ​ವೆಂದು ಒಪ್ಪಿ​ಕೊಂಡಿ​ದ್ದಾರೆ. ಇದೀಗ ಮತ್ತೆ ಬಿಟ್‌ ಕಾಯಿನ್‌ ಬಗ್ಗೆ ಮಾತ​ನಾ​ಡು​ತ್ತಿ​ರುವುದು ಏಕೆಂದು ಅರ್ಥ​ವಾ​ಗು​ತ್ತಿಲ್ಲ. ರಾಜ​ಕಾ​ರ​ಣ​ಕ್ಕಾಗಿ ರಾಜ​ಕಾ​ರಣ ಮಾಡುವುದನ್ನು ಕಾಂಗ್ರೆಸ್‌ ನಾಯ​ಕರು ಬಿಡ​ಬೇಕು ಎಂದು ಹೇಳಿ​ದ​ರು.

ವಿರೋಧ ಪಕ್ಷ​ದ​ವರು ತಮ್ಮ ಬಳಿ ಯಾವುದೇ ದಾಖ​ಲೆ​ಗ​ಳಿದ್ದರು ನೀಡಲಿ, ತನಿಖೆ ನಡೆ​ಸ​ಲಾ​ಗು​ವುದು. ತಪ್ಪಿ​ತ​ಸ್ಥ​ರೆಂದು ಸಾಬೀ​ತಾ​ದರೆ ಯಾವುದೇ ಪಕ್ಷ​ದ​ವರೆ ಆಗಿ​ರಲಿ ಮುಲಾ​ಜಿ​ಲ್ಲದೆ ಕ್ರಮ ವಹಿ​ಸ​ಲಾ​ಗು​ವುದು. ಯಾರನ್ನೂ ರಕ್ಷಣೆ ಮಾಡುವ ವಿಚಾ​ರವೇ ಇಲ್ಲದೆಂದು ಮುಖ್ಯ​ಮಂತ್ರಿ​ಗ​ಳೇ ಸ್ಪಷ್ಟಪಡಿ​ಸಿ​ದ್ದಾರೆ ಎಂದು ನಾರಾ​ಯ​ಣ​ಸ್ವಾಮಿ ತಿಳಿ​ಸಿ​ದ​ರು.