ನೌಕರರಿಗೆ ಮಹತ್ವದ ಸೂಚನಾ ಆದೇಶ ಹೊರಡಿಸಿದ ಸರ್ಕಾರ..!
ಕೊರೋನಾ ಹೆಚ್ಚಾಗುತ್ತಿರುವುದಿರಂದ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಬೆಂಗಳೂರು, (ಏ.27): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯ ಬದಲಿಗೆ ಸಹಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೊರೋನಾ ವೈರಸ್‌ನ ವ್ಯಾಪಕವಾಗಿ ಹರಡುತ್ತಿರುವ ಕಾರಣ ಬಯೋಮೆಟ್ರಿಕ್ ಹಾಜರಾತಿ ಬದಲಿಗೆ ನೌಕರರು ಸಹಿ ಮಾಡಲು ಬಿ.ಎಸ್.ರವಿಕುಮಾರ್ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
'ಈ ಇಲಾಖೆಗಳ ಶೇ.100ರಷ್ಟು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು'
ಯಾಕಂದ್ರೆ ಕಚೇರಿಯ ಸಿಬ್ಬಂದಿಗಳು ಒಂದೇ ಬಯೋಮೆಟ್ರಿಕ್‌ನಲ್ಲಿ ಕೈ ಬೆರಳು ಇಡುವುದರಿಂದ ಸೋಂಕು ಹರಡುವ ಸಾಧ್ಯತೆಗಳಿವೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಬಯೋಮೆಟ್ರಿಕ್ ಸ್ಥಗಿತಗೊಳಿಸಲಾಗಿದೆ.
ಇನ್ನು ಕಳೆದ ಮೊದಲ ಅಲೆ ಸಂದರ್ಭದಲ್ಲಿ ಇದೇ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದು ಸರ್ಕಾರಿ ಇಲಾಖೆಗಳಿಗೆ ಮಾತ್ರವಲ್ಲ ಖಾಸಗಿ ಕಂಪನಿಗಳು ಅನ್ವಯವಾಗುತ್ತದೆ.