Asianet Suvarna News Asianet Suvarna News

ಶಿವಮೊಗ್ಗ: ಅಪ್ರಾಪ್ತನಿಂದ ಬೈಕ್‌ ಚಾಲನೆ; ತಂದೆಗೆ ₹25 ಸಾವಿರ ದಂಡ ವಿಧಿಸಿದ ಕೋರ್ಟ್

ಅಪ್ರಾಪ್ತ ಪುತ್ರನಿಗೆ ಮೋಟಾರ್ ಬೈಕ್ ಓಡಿಸಲು ಅವಕಾಶ ನೀಡಿದ ತಂದೆಗೆ ನಗರದ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ. 17 ವರ್ಷದ ಬಾಲಕನ ತಂದೆ ಓಂಪ್ರಕಾಶ್ ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯದ 4ನೇ ಎಸಿಜೆ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Bike riding by minor son The court fined the father 25000 at shivamogga rav
Author
First Published Sep 8, 2023, 11:22 AM IST

ಶಿವಮೊಗ್ಗ (ಸೆ.8): ಅಪ್ರಾಪ್ತ ಪುತ್ರನಿಗೆ ಮೋಟಾರ್ ಬೈಕ್ ಓಡಿಸಲು ಅವಕಾಶ ನೀಡಿದ ತಂದೆಗೆ ನಗರದ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ. 17 ವರ್ಷದ ಬಾಲಕನ ತಂದೆ ಓಂಪ್ರಕಾಶ್ ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯದ 4ನೇ ಎಸಿಜೆ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2023ರ ಆ.12ರಂದು ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಶ್ಚಿಮ ಠಾಣೆ ಪಿಎಸ್‌ಐ ತಿರುಮಲೇಶ್  ವಾಹನಗಳ ತಪಾಸಣೆ ವೇಳೆ ಅಪ್ರಾಪ್ತ ಬೈಕ್‌ ಚಲಾಯಿಸುತ್ತಿದ್ದ. ಈ ವೇಳೆ ಅಪ್ರಾಪ್ತನೊಬ್ಬ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ.ಬೈಕ್ ತಡೆದು ಪರಿಶೀಲಿಸಿದಾಗ ಚಾಲನಾ ಪರವಾನಗಿ ಇಲ್ಲದೆ ಬೈಕ್ ಓಡಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ.  ಇನ್ನಷ್ಟು ತನಿಖೆ ಮಾಡಿದಾಗ ಈತ ಅಪ್ರಾಪ್ತ ಎಂದು ಗೊತ್ತಾಯಿತು. ಅಪ್ರಾಪ್ತನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ಆತನ ತಂದೆ ವಿರುದ್ಧ ಪಶ್ಚಿಮ ಸಂಚಾರ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಷಣ ಪಟ್ಟಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು. ಕಾನೂನಿನ ಪ್ರಕಾರ ಅಪ್ರಾಪ್ತರಿಗೆ ದ್ವಿಚಕ್ರ ವಾಹನ  ಚಾಲನೆ ಮಾಡಲು ಅವಕಾಶ ನೀಡಿರುವು ತಪ್ಪು. ಹೀಗಾಗಿ ವಾಹನ ಮಾಲೀಕರೂ ಆದ ಅಪ್ರಾಪ್ತನ ತಂದೆ ಕ್ಲಾರ್ಕ್ ಪೇಟೆಯ ಓಂ ಪ್ರಕಾಶ್ ಗೆ ದಂಡ ವಿಧಿಸಿದ್ದಾರೆ.

ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ಕೋರ್ಟ್!

ಪಾಲಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಮ್ಮ ವಾಹನ (ಬೈಕ್‌ಗಳನ್ನು) ಚಾಲನೆಗಾಗಿ ನೀಡಿದರೆ ಅಂತಹ ಬಾಲಕರ ತಂದೆ-ತಾಯಿಗೆ 25 ಸಾವಿರ ರು. ದಂಡ ಹಾಗೂ ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆಯಾಗುತ್ತದೆ. ಪೋಷಕರು ಈ ಬಗಗೆ ತಿಳಿದು ಅಪ್ರಾಪ್ತರ ಕೈಗೆ ಬೈಕ್ ಚಾಲನೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. 

Follow Us:
Download App:
  • android
  • ios