ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರಗೆ ವಂಚನೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ!

ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ ಅವರಿಗೆ ಹಳೆಯ ವಂಚನೆ ಪ್ರಕರಣದ ವಿಚಾರಣೆ ಮತ್ತೆ ಶುರುವಾಗಿದೆ. ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ಕೋಟಿಗಟ್ಟಲೆ ಹಣ ವಂಚಿಸಿದ ಆರೋಪದ ಮೇಲೆ ಚೈತ್ರಾ ವಿರುದ್ಧ ಕೇಸ್ ದಾಖಲಾಗಿದ್ದು, ಫೆಬ್ರವರಿ 21 ರಂದು ಮುಂದಿನ ವಿಚಾರಣೆ ನಡೆಯಲಿದೆ.

bigg boss kannada 11 fame chaithra kundapura faces legal issue again in cheating case rav

Bigg Boss Kannada 11 Chaithra Kundapura : ಬಿಗ್‌ಬಾಸ್ ಮನೆಯಲ್ಲಿ 'ಫೈರ್ ಬ್ರಾಂಡ್' ಎಂದೇ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ತನ್ನದೇ ಎಡವಟ್ಟುಗಳಿಂದ ಈ ವಾರ ಎಲಿಮಿನೇಟ್ ಆಗಿದ್ದಾರೆ. ಇತ್ತ ಬಿಗ್ ಬಾಸ್‌ ಮನೆಯಿಂದ ಹೊರಬಿದ್ದ ಬೆನ್ನಲ್ಲೇ ಚೈತ್ರಾ ಕುಂದಾಪುರಗೆ ಹಳೇ ಪ್ರಕರಣದ ಶನಿ ಹೆಗಲೇರಿ ಕುಳಿತಿದೆ.

ಹೌದು, ಎಂಎಲ್‌ಎ ಟಿಕೆಟ್ ಕೊಡಿಸುದಾಗಿ ನಂಬಿಸಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಇದೀಗ ಚೈತ್ರಾ ಕುಂದಾಪುರಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ.

ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ ವಂಚಸಿದ್ದ ಚೈತ್ರಾ ಕುಂದಾಪುರ ಮತ್ತವರ ಗ್ಯಾಂಗ್. ಆ ಕೇಸ್ ಸಂಬಂಧ 1ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಕೋರ್ಟ್ ವಿಚಾರಣೆಗೆ ಗೈರಾಗಿರುವ ಚೈತ್ರಾ ಕುಂದಾಪುರ.ಇತ್ತ ಕೋರ್ಟ್ ಗೆ ಹಾಜರಾದ ಇನ್ನೋರ್ವ ಆರೋಪಿ ಅಭಿನವ ಹಾಲಶ್ರೀ ಸ್ವಾಮಿಜಿ. ಆರೋಪಿ ನಂ.6 6 ಧನರಾಜ್ ಕೂಡ ಕೋರ್ಟ್ ಗೆ ಹಾಜರಾಗಿದ್ದಾರೆ. ಆದರೆ ಚೈತ್ರಾ ಕುಂದಾಪುರ ವಿಚಾರಣಗೆ ಗೈರಾದ ಹಿನ್ನಲೆ ಕೋರ್ಟ್ ಮುಂದಿನ ವಿಚಾರಣೆಯನ್ನ ಫೆ.21ಕ್ಕೆ ಮುಂದೂಡಿದೆ.

 

ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್; ಕೊನೆಯ ಮಾತುಗಳು ಏನಾಗಿತ್ತು ನೋಡಿ!

ಏನಿದು ಪ್ರಕರಣ?

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಉಡುಪಿಯ ಬೈಂದೂರಿನ ಉದ್ಯಮಿ ಗೋವಿಂದ ಪೂಜಾರಿಗೆಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದ ಚೈತ್ರಾ ಕುಂದಾಪುರ ಗ್ಯಾಂಗ್. ಟಿಕೆಟ್ ಸಿಗದೇ, ಹಣ ವಾಪಸ್ ಕೇಳಿದ್ದಕ್ಕೆ  ಜಡ್ಜ್‌ಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರಿಸುತ್ತೇವೆ ಎಂದು ಉದ್ಯಮಿಗೆ ಬೆದರಿಕೆ ಹಾಕಿದ್ದ ಉದ್ಯಮಿ ಆರೋಪಿಸಿದ್ದರು.

ಇದನ್ನೂ ಓದಿ: ಕಿಚ್ಚ ಸುದೀಪ್‌, ಬಿಗ್ ಬಾಸ್ ವೀಕ್ಷಕರನ್ನು ಬಕ್ರಾ ಮಾಡ್ತಿದ್ದಾರಾ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಜೋಡಿ?

ಉದ್ಯಮಿಗೆಮೋಸ ಮಾಡುವ ಉದ್ದೇಶದಿಂದೇ ಚೈತ್ರಾ ಕುಂದಾಪುರ ಮೂವರನ್ನು ಕೇಂದ್ರ ನಾಯಕರು ಎಂದು ನಕಲಿ ವ್ಯಕ್ತಿಗಳನ್ನ ಸೃಷ್ಟಿಸಿದ್ದರು. ಮೋಸಕ್ಕೆ ಒಳಗಾಗಿದ್ದ ಉದ್ಯಮಿ ಚೈತ್ರಾ ಕುಂದಾಪುರ ವಿರುದ್ಧ ಬಂಡೆಪಾಳ್ಯ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಗಂಭೀರವಾಗಿದ್ದರಿಂದ ಅದನ್ನ ಸಿಸಿಬಿಗೆ (CCB) ವರ್ಗಾವಣೆ ಮಾಡಲಾಗಿತ್ತು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಸೇರಿದಂತೆ ಸಹಚರರನ್ನ ಬಂಧಿಸಿ ಜೈಲಿಗೆಹಾಕಲಾಗಿತ್ತು. ಅದೇ ಪ್ರಕರಣ ವಿಚಾರಣೆ ನಡೆಯುತ್ತಿರುವಾಗಲೇ ಬಿಗ್ ಬಾಸ್ ಸೇರಿಕೊಂಡಿದ್ದ ಚೈತ್ರಾ ಕುಂದಾಪುರ ಇದೀಗ ಬಿಗ್‌ಬಾಸ್ ಮನೆಯಿಂದ ಹೊರಬಿಳುತ್ತಿದ್ದಂತೆ ಮತ್ತೆ ಹಳೇ ಸಂಕಷ್ಟ ಎದುರಾಗಿದೆ. ಮುಂದಿನ ತಿಂಗಳು ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದೆ.

Latest Videos
Follow Us:
Download App:
  • android
  • ios