ಬಿಗ್‌ ಬಾಸ್‌ ಸ್ಪರ್ಧಿ ಜಗದೀಶ್‌ ಮೇಲೆ ಮತ್ತೊಮ್ಮೆ ಹಲ್ಲೆಯಾಗಿದ್ದು, ಮೂಗಿನಿಂದ ರಕ್ತ ಸುರಿಯುವಂತೆ ಥಳಿಸಲಾಗಿದೆ. ಸಹಕಾರ ನಗರದಲ್ಲಿ ನಡೆದ ಈ ಘಟನೆ ಅಣ್ಣಮ್ಮ ಕೂರಿಸುವ ವಿಚಾರಕ್ಕೆ ಸಂಬಂಧಿಸಿದೆ ಎನ್ನಲಾಗಿದ್ದು, ನೂರಾರು ಜನರು ಹಲ್ಲೆ ನಡೆಸಿದ್ದಾರೆ.

ಬೆಂಗಳೂರು (ಜ.24): ಕಳೆದ ಕೆಲವೊಂದು ದಿನಗಳಿಂದ ಬಿಗ್‌ ಬಾಸ್‌ ಕನ್ನಡದ 11ನೇ ಆವೃತ್ತಿಯ ಸ್ಪರ್ಧಿ ಲಾಯರ್‌ ಜಗದೀಶ್‌ ಅವರ ಆಟಾಟೋಪಗಳು ಸುದ್ದಿಯಾಗುತ್ತಲೇ ಇವೆ. ಮೊದಲಿಗೆ ಪಾಸ್‌ಪೋರ್ಟ್‌ ಆಫೀಶ್‌ ಎದುರು ಅಲ್ಲಿನ ಸೆಕ್ಯುರಿಟಿ ಗಾರ್ಡ್‌ಗೆ ಹೊಟ್ಟೆಯಿಂದ ದೂಡಿದಲ್ಲದೆ, ಹೊಡೆಯುವ ಪ್ರಯತ್ನವನ್ನೂ ಮಾಡಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಆ ಬಳಿಕ ಗುರುವಾರ ಅಣ್ಣಮ್ಮ ಕೂರಿಸೋ ವಿಚಾರದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಜಗದೀಶ್‌ಗೆ ಅವರೆಲ್ಲರೂ ಸೇರಿಕೊಂಡು ಸರಿಯಾಗಿ ಥಳಿಸಿದ್ದರು. ಈಗ ಮತ್ತೊಮ್ಮೆ ಜಗದೀಶ್‌ ಮೇಲೆ ಹಲ್ಲೆಯಾಗಿದೆ. ಈ ಬಾರಿ ಹಲ್ಲೆ ಎಷ್ಟು ಗಂಭೀರ ಪ್ರಮಾಣದಲ್ಲಿ ಆಗಿದೆಯೆಂದರೆ, ಅವರ ಮೂಗಿನಿಂದ ರಕ್ತ ಸುರಿಯಲು ಆರಂಭಿಸಿದೆ.

ಶುಕ್ರವಾರ ಮತ್ತೆ ಪುಂಡರಿಂದ ಜಗದೀಶ್‌ ಮೇಲೆ ದಾಳಿಯಾಗಿದ್ದು, ಮೂಗಿನಿಂದ ರಕ್ತ ಬರುವಷ್ಟು ರೀತಿಯಲ್ಲಿ ಥಳಿಸಿದ್ದಾರೆ. ಸಹಕಾರ ನಗರದ ಜಗದೀಶ್ ಮನೆ ಬಳಿಯೇ ಘಟನೆ ನಡೆದಿದ. ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿರಬಹುದು ಎನ್ನಲಾಗಿದೆ. ಈ ಬಾರಿ ಅವರ ಮೇಲೆ ನೂರಾರು ಮಂದಿ ಹಲ್ಲೆ ಮಾಡಿದ್ದಾರೆ.

ಕೊಡಗೆಹಳ್ಳಿ ಪೊಲೀಸರ ಜೊತೆ ಜೀಪ್ ನಲ್ಲಿ ಹೋಗುತ್ತಿರುವುದನ್ನು ಫೇಸ್‌ಬುಕ್‌ ಲೈವ್‌ ಮೂಲಕ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂದು ವಕೀಲ ಜಗದೀಶ್‌ಪ್ರಶ್ನೆ ಮಾಡಿದ್ದಾರೆ. ಪೊಲೀಸ್ ಜೀಪ್‌ನಲ್ಲಿ ತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

2025ರಲ್ಲಿ ಮೊದಲ ಸಲ ಮನಸ್ಸಿಗೆ ಖುಷಿ ಕೊಟ್ಟಿರೋ ವೀಡಿಯೋ.. ಎಂದ ನೆಟ್ಟಿಗ!

ನಿನ್ನೆಯು ಅಣ್ಣಮ್ಮ‌ಕೂರಿಸೋ ವಿಚಾರದಲ್ಲಿ, ಕಾರ್ ಪಾರ್ಕಿಂಗ್ ಬಗ್ಗೆ ಜಗದೀಶ್‌ ಗಲಾಟೆ ಮಾಡಿಕೊಂಡಿದ್ದರು. ಅಲ್ಲದೇ ಡ್ರಗ್ಸ್ ವಿರುದ್ಧ ಧ್ವನಿ ಮಾಡಿದ್ದಕ್ಕೂ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವೆಡೆ ವಕೀಲ ಜಗದೀಶ್‌ ಕೂಡ ಕೈ ಮಾಡಿದ್ದಾರೆ ಅನ್ನೋ ಆರೋಪಗಳಿವೆ.

ಡಿಬಾಸ್ ಬಾಯ್ಸ್ ನೀವೊಬ್ಬರೇ ಗಂಡ್ಸಾ? ನಾವೇನು ಬಳೆ ತೊಟ್ಟುಕೊಂಡಿದ್ದೀವಾ? ವಕೀಲ ಜಗದೀಶ್!

ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿರುವ ಜಗದೀಶ್‌, ‘ಸಿಎಂ ಸಿದ್ದರಾಮಯ್ಯ ಇದೇನಾ ಕರ್ನಾಟಕ, ಸಿಎಂ ಸಿದ್ದರಾಮಯ್ಯ ಏನಯ್ಯ ಮಾಡ್ತಿದ್ದೀಯಾ? ನೋಡಿ ಸಮಾಜಕ್ಕೆ ಧ್ವನಿ ಆಗಿದ್ದವರ ಮೇಲೆ 200 ಜನ ಅಟ್ಯಾಕ್ ಮಾಡಿದ್ದಾರೆ. ನನ್ನ ಕಾರು ಜಖಂ ಆಗಿದೆ. ಇದೇನಾ ಕರ್ನಾಟಕ? ಇದು ಟೆರರಿಸ್ಟ್ ರಾಜ್ಯ ಆಗಿದೆ? ಎಲ್ಲಿ ಹೋಯ್ತು ಲಾ ಆ್ಯಂಡ್ ಆರ್ಡರ್​?’ ಎಂದಿದ್ದಾರೆ.

ಇಂತಹ ನಾಚಿಗೆಗೇಡಿನ ಸಮಾಜದಲ್ಲಿ ನಾವು ಬದುಕಬೇಕು, ನಮ್ಮ ಮಕ್ಕಳು ಬದುಕಬೇಕು ಅನ್ನೋದೆ ಬೇಸರ. ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಯತ್ನ ಮಾಡಿದ್ದಾರೆ. ನನ್ನ ಮಗನ ಮೇಲೂ ಅಟ್ಯಾಕ್ ಆಗಿದೆ ಎಂದು ಜಗದೀಶ್ ಹೇಳಿದ್ದಾರೆ. ‘ನನ್ನ ಗನ್ ಮ್ಯಾನ್‌ಗೆ ಮಚ್ಚು ದೊಣ್ಣೆಯಿಂದ ಹೊಡೆದಿದ್ದಾರೆ. ನನಗೆ ರಕ್ತ ಬರುವಂತೆ ಹೊಡೆದಿದ್ದಾರೆ ನಾನು ಸತ್ತರೂ ಪರವಾಗಿಲ್ಲ ಆದ್ರೆ ನಾನು ಇದನ್ನು ವಿರೋಧಿಸುತ್ತೇನೆ ಎಂದಿದ್ದಾರೆ.