ಮಾರಮ್ಮಾ ದೇವಸ್ಥಾನದ ಪ್ರಸಾದದಲ್ಲಿ ವಿಷ| ವಿಷ ಪ್ರಸಾದ ಪಕ್ರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್| ವಿಷ ಹಾಕಿದ ಪಾಪಿ ಕೊನೆಗೂ ಸಿಕ್ಕಿ ಬಿದ್ದಳು| ಪ್ರಸಾದದಲ್ಲಿ ವಿಷ ಬೆರೆಸಿದ್ದು ಮ್ಯಾನೇಜರ್ ಪತ್ನಿ ಅಂಬಿಕಾ| ಸಾಲೂರು ಮಠದ ಕಿರಿಯ ಸ್ವಾಮಿಜೀ ಆದೇಶದ ಮೇರೆಗೆ ವಿಷ| ಇಮ್ಮಡಿ ಮಹಾದೇವ್ ಸ್ವಾಮಿಜೀ ಆದೇಶದ ಮೇರೆಗೆ ವಿಷ ಹಾಕಿದ ಅಂಬಿಕಾ  

ಚಾಮರಾಜನಗರ(ಡಿ.18): ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿರುವ ದೇವಸ್ಥಾನದ ಆಡಳಿತ ಮಂಡಳಿ ಮ್ಯಾನೇಜರ್ ಪತ್ನಿ ಅಂಬಿಕಾ, ಸಾಲೂರು ಮಠದ ಕಿರಿಯ ಸ್ವಾಮಿಜೀಯಾಗಿರುವ ಇಮ್ಮಡಿ ಮಹಾದೇವ್ ಸ್ವಾಮಿ ಆದೇಶದ ಮೇರೆಗೆ ಪ್ರಸಾದದಲ್ಲಿ ವಿಷ ಬೆರೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಸಾಲೂರು ಮಠದ ಕಿರಿಯ ಸ್ವಾಮಿಜೀಯಾಗಿರುವ ಇಮ್ಮಡಿ ಮಹಾದೇವ್ ಸ್ವಾಮಿ, ಮಾರಮ್ಮಾ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸುವಂತೆ ತನಗೆ ತಿಳಿಸಿದ್ದರು ಎಂದು ಮ್ಯಾನೇಜರ್ ಮಾದೇಶ್ ಪತ್ನಿ ಅಂಬಿಕಾ ಹೇಳಿಕೆ ನೀಡಿದ್ದಾಳೆ.

ದೇವಸ್ಥಾನದ ಆದಾಯವೆಲ್ಲಾ ತಮ್ಮ ವಶಕ್ಕೆ ಪಡೆದುಕೊಳ್ಳುವ ಹುನ್ನಾರದ ಭಾಗವಾಗಿ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು ಎಂದು ಅಂಬಿಕಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

"