* ಎಲ್ಲಂದರಲ್ಲಿ ಸತ್ತು ಬಿದ್ದ ಕೋಳಿಗಳ ರಾಶಿ ರಾಶಿ* ಕೋಳಿ ಫಾರಂ ಸುತ್ತ ಓಡಾಡುತ್ತಿರುವ ನರಭಕ್ಷಕ ನಾಯಿಗಳು* ಗಬ್ಬು ವಾಸನೆಗೆ ಮುಗು ಮುಚ್ಚಿಕೊಂಡು ಓಡಾಡುತ್ತಿರುವ ಜನ

ಬೀದರ್ (ಏ.21): ಕೋಳಿ ಫಾರಂನ (poultry farm ) ಅವ್ಯವಸ್ಥೆಯ ಆಗರದಿಂದ ಆ ಊರಿನ ಮಂದಿ ನರಕಯಾತನೆ ಅನುಭವಿಸುವಂತಾಗಿದೆ. ಸತ್ತ ಕೋಳಿಗಳನ್ನ, ಕೋಳಿ ಫಾರಂನ ಗಲೀಜು ಅಲ್ಲಂದರಲ್ಲಿ ಬಿಸಾಡೋದರಿಂದ ಗಬ್ಬು ವಾಸನೆ ಬರುತ್ತಿದ್ದು ಜನರಿಗೆ ಡೆಂಗ್ಯೂ, ಮಲೆರೀಯಾ ಅಂತಹ ಮಾರಣಾಂತಿಕ ರೋಗಿಗಳ ಭೀತಿ ಕಾಡುತ್ತಿದ್ದರೆ, ಕೋಳಿ ಫಾರಂ ಸುತ್ತಲಿನ ನಾಯಿಗಳ ಕಾಟಕ್ಕೆ ಜನ ಹೈರಾಣಾಗಿ ಹೋಗಿದ್ದು ಆ ತಾಂಡಾ ಜನ ಊರು ಬಿಡುವಂತಾಗಿದೆ,. ಹಾಗಾದರೇ ಆ ಊರಿನ ಜನರಿಗೆ ಆಗುತ್ತಿರುವ ತೊಂದರೆಯಾದರೂ ಎಂತದ್ದು ಅಂತೀರಾ ಈ ಸ್ಟೋರಿ ಓದಿ.

ಹೌದು ಬೀದರ್​ (Bidar) ಜಿಲ್ಲೆ ಭಾಲ್ಕಿ (Bhalki) ತಾಲೂಕಿನ ನೀಲಂನಳ್ಳಿ (Neelanalli) ತಾಂಡಾದ ಬಳಿಯ ಬೀದರ್​- ಹುಮನಾಬಾದ್ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಪಕ್ಕದಲ್ಲಿ​ ಇರುವ ನಾಲ್ಕು ಕೋಳಿ ಫಾರಂಗಳ ಅವ್ಯವಸ್ಥೆಯಿಂದ ನೀಲಂನಳ್ಳಿ ಮತ್ತು ಭವಾನಿ ತಾಂಡಾದ ಜನ ನರಕಯಾತನೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೋಳಿ ಫಾರಂನಲ್ಲಿ ಸಾವನಪ್ಪುತ್ತಿರುವ ಕೋಳಿಗಳ ಶವಗಳನ್ನ ಬೇಕಾಬಿಟ್ಟಿಯಾಗಿ ಫಾರಂನ ಸುತ್ತಲು ಬಿಸಾಕುತ್ತಿರೋದರಿಂದ ನೀಲಂನಳ್ಳಿ ಮತ್ತು ಭವಾನಿ ತಾಂಡಾದಲ್ಲಿ ಗುಬ್ಬು ವಾಸನೆ ಆವರಿಸಿಕೊಂಡಿದ್ದರೇ ಮತ್ತೊಂದು ಕಡೆ ನೋಣಗಳು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇನ್ನು ಈ ಸತ್ತ ಕೋಳಿಗಳ ಮಾಂಸ ತಿನ್ನಲು ಹಪಹಪಿಸುತ್ತಿರುವ ಬೀದಿ ನಾಯಿಗಳು ಇಲ್ಲಿ ಓಡಾಡುವ ಜನ-ಜಾನುವಾರುಗಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ,. ಇದರಿಂದ ಈಗಾಗಲೇ ಹತ್ತಾರು ಜನ ಗಾಯಗೊಂಡಿದ್ದರೇ, ಕೆಲ ಜಾನುವಾರುಗಳು ಸಾವನಪ್ಪಿವೆ ಈ ಕೋಳಿ ಫಾರಂ ನರಕದಿಂದ ಪಾರು ಮಾಡುವಂತೆ ಜನ ಕೇಳಿಕೊಳ್ಳುತ್ತಿದ್ದಾರೆ.

ಸುತ್ತಲು ಗಬ್ಬು ವಾಸನೆಯಿಂದ ನೀಲಂನಳ್ಳಿ ಭವಾನಿ ತಾಂಡಾದ ಮಂದಿ ಸಾಂಕ್ರಮಿಕ ರೋಗಗಳ ಭೀತಿಯಲ್ಲಿದ್ದರೇ, ಮತ್ತೊಂದು ಕಡೆ ರಾತ್ರಿ ಸಮಯದಲ್ಲಿ ಇಲ್ಲಿನ ರಸ್ತೆಗಳಲ್ಲಿ ಓಡಾಡುವ ಹತ್ತಾರು ಜನರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ,. ಬೀದಿ ನಾಯಿಗಳ ದಾಳಿಯಿಂದ ಕೆಲ ಜಾನುವಾರುಗಳು ಸಾವನಪ್ಪಿವೆ,. ಇನ್ನು ಇಲ್ಲಿ ಬಿಸಾಕಿರುವ ಕೋಳಿಗಳನ್ನ ತಿಂದು ಕೆಲ ಜಾನುವಾರುಗಳು ಅಸ್ತವೆಸ್ತಗೊಂಡಿವೆ,. ಯಾರಿಗೆ ಹೇಳಿದ್ದರೂ ನಮಗೆ ಈ ನರಕದಿಂದ ಪಾರು ಮಾಡುತ್ತಿಲ್ಲ ಎನ್ತುತಾರೆ ಇಲ್ಲಿನ ಜನ

ಬೀದರ್‌ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಹೈಟೆಕ್ ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗುವ ವಿದ್ಯಾರ್ಥಿಗಳಿಗಾಗಿ

ಒಟ್ಟಿನಲ್ಲಿ ಕೋಳಿ ಫಾರಂನ ಅವ್ಯವಸ್ಥೆ ಆಗರದಿಂದ ನಿಲ್ಲಂನಳ್ಳಿ ಮತ್ತು ಭವಾನಿ ತಾಂಡ ಮಂದಿ ಕಂಗಾಲಾಗಿದ್ದಾರೆ,. ಸತ್ತ ಕೋಳಿಗಳನ್ನ ತಿನ್ನುತ್ತಿರುವ ಇಲ್ಲಿನ ನಾಯಿಗಳು ರಾತ್ರಿ ವೇಳೆ ನರಬಕ್ಷರಂತೆ ಕಾಡುತ್ತಿವೆ,. ಜಾನುವಾರುಗಳ ಸಾವು- ನೋವಿನಿಂದ ರೋಸಿ ಹೋಗಿದ್ದಾರೆ,.. ಇವರ ಸಂಕಷ್ಟಕ್ಕೆ ಅಧಿಕಾರಿಗಳು ಮುಕ್ತಿ ಸಿಗುವಂತೆ ಮಾಡುತ್ತಾರಾ ಕಾದು ನೋಡಬೇಕಾಗಿದೆ.