ಬೀದರ್ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಹೈಟೆಕ್ ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗೆ ರೆಡಿಯಾಗುವ ವಿದ್ಯಾರ್ಥಿಗಳಿಗಾಗಿ
* ಗಡಿ ಜಿಲ್ಲೆಯ ಬರದ ನಾಡಿನಲ್ಲಿದೆ ಹೈಟೆಕ್ ಡಿಜಿಟಲ್ ಲೈಬ್ರರಿ...
* ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಿದ PDO
* ಕಲ್ಯಾಣ ಕರ್ನಾಟಕ ಭಾಗದ ಯಾವ ಜಿಲ್ಲೆಯಲ್ಲಿಯೂ ಇಲ್ಲ ಇಂಥಹ ಹೈಟೆಕ್ ಗ್ರಂಥಾಲಯ
* ಪಂಚಾಯತ್ ಸದಸ್ಯರು, ಪಿಡಿಒ ಕಾಳಜಿಯಿಂದ ನಿರ್ಮಾಣವಾದ ಹೈಟೆಕ್ ಲೈಬ್ರರಿ.
ವರದಿ-ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬೀದರ್,..
ಬೀದರ್, (ಏ.17): ಹಿಂದೂಳಿದ ತಾಲೂಕಿನ ಆ ಪುಟ್ಟ ಗ್ರಾಮದಲ್ಲಿ ಹೈಟೆಕ್ ಲೈಬ್ರರಿ ನಿರ್ಮಾಣವಾಗಿದೆ,. ಮಕ್ಕಳ ಓದಿಗೆ, ಸ್ಪರ್ಧಾತ್ಮ ಪರೀಕ್ಷೆಗೆ ತಯ್ಯಾರಾಗುವ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನ ಇಲ್ಲಿ ಕಲ್ಪಿಸಿಕೊಡಲಾಗಿದೆ. ಪುಟ್ಟ ಗ್ರಾಮದಲ್ಲಿನ ಈ ಗ್ರಂಥಾಲಯ ಜಿಲ್ಲಾ ಕೇಂದ್ರದ ಗ್ರಂಥಾಲಯವನ್ನ ಮಿರಿಸುವಂತಿದ್ದು, ವಿದ್ಯಾರ್ಥಿಗಳಿಗಂತಾನೆ ಹೈಟೆಕ್ ಲೈಬ್ರರಿ ರೆಡಿಯಾಗಿದೆ.
ಬೀದರ್ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹಿಂದೂಳಿದ ಜಿಲ್ಲೆಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಔರಾದ್ ತಾಲೂಕು ಇನ್ನೂ ಹಿಂದೂಳಿದ ತಾಲೂಕಾಗಿದ್ದು ಮಕ್ಕಳ ಓದಿಗೆ ಬೇಕಾದಂತಹ ವಾತಾವರಣ ಇಲ್ಲಿಲ್ಲ. ಇದನ್ನೆಲ್ಲ ಮನಗಂಡ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮ ಪಂಚಾಯತ್ ಪಿಡಿಓ ಸಂತೋಷ್ ಪಾಟೀಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸೇರಿಕೊಂಡು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮದ ಸ್ಫರ್ಧಾತ್ಮ ಪರೀಕ್ಷೆಗೆ ತಯಾರಾಗುವ ಮಕ್ಕಳಿಗೆ ಓದಿಗೆ ಅನೂಕುಲ ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಲಾಗಿದೆ. ನಾಲ್ಕು ಕಂಪ್ಯೂಟರ್ ಗಳಿವೆ ಅದಕ್ಕೆ ಹೈಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಕೂಡಾ ಕೊಡಲಾಗಿದೆ. ಜೊತೆಗೆ ಯುಪಿಎಸ್, ಕೆಎಎಸ್, ಎಸ್ಡಿಎ, ಎಫ್ಡಿಎ, ಪಿಡಿಓ ಹೀಗೆ ಎಲ್ಲಾ ಪರೀಕ್ಷೆಗೂ ಅನೂಕುಲವಾಗುವಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನ ಇಲ್ಲಿ ಖರೀಧಿಸಿ ತಂದು ಇಡಲಾಗಿದೆ. ತಂಪಾದ ಗಾಳಿ ಮನಸ್ಸಿಗೆ ಮುದಕೊಡುವಂತಾ ವಾತಾವರಣವನ್ನ ಇಲ್ಲಿ ನಿರ್ಮಾಣ ಮಾಡಿದ್ದು ಮಕ್ಕಳು ಖುಷಿಖಷಿಯಿಂದ ಇಲ್ಲಿಗೆ ಬಂದು ಓದಿಕೊಳ್ಳುತ್ತಿದ್ದಾರೆ.
ಇನ್ನೂ ಗುಡಪಳ್ಳಿ ಗ್ರಾಮ ಪಂಚಾಯತ್ ಕಟ್ಟಡವೂ ಕೂಡಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲಿಯೂ ಕೂಡಾ ಇಷ್ಟೊಂದು ಸುಂದರವಾದ ಕಟ್ಟಡ ವಿಲ್ಲ, ಪಂಚಾಯತ್ ಕಟ್ಟಡದ ಮುಂಬಾಗದಲ್ಲಿಯೇ ಸುಂದರವಾದ ಉದ್ಯಾನವನವನ್ನ ಕೂಡಾ ಇಲ್ಲಿ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿಯೇ ಡಿಜಿಟಲ್ ಲೈಬ್ರರಿ ಕೂಡಾ ನಿರ್ಮಾಣ ಮಾಡಲಾಗಿದೆ.
ಇನ್ನೂ ಈ ಗ್ರಂಥಾಲಯದಲ್ಲಿ ಬಿಎಡ್, ಡಿಎಡ್, ಎಸ್ ಡಿಸಿ, ಎಫ್ ಡಿಎ ಯಿಂದ ಹಿಡಿದ ಕೇಂದ್ರ ರಾಜ್ಯ ಸರಕಾರ ನಡೆಸುವ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಯ ಎಲ್ಲಾ ಪುಸ್ತಕಗಳು ಇಲ್ಲಿ ಲಭ್ಯವಿದೆ. ಪುಸ್ತಕ ಕೊಳ್ಳಲು ಬಡತನ ಅಡ್ಡಿಯಾಗುವ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಲ್ಲಿ 3 ಸಾವಿರಕ್ಕೂ ಅಧಿಕ ಪುಸ್ತಗಳು ಇಲ್ಲಿ ಖರೀಧಿಸಿ ಇಡಲಾಗಿದೆ. ಇನ್ನೂ ಉತ್ತಮ ದರ್ಜೆಯ ಲೈಬ್ರರಿಯ ಜೊತೆಗೆ ಹೈಟೆಕ್ ಡಿಜಿಟಲ್ ಮಾದರಿಯ ಕಂಪ್ಯೂಟರ್ ಶಿಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಮಕ್ಕಳು ಶ್ರದ್ಧೆಯಿಂದ ಕಂಪ್ಯೂಟರ್ ಶಿಕ್ಷಣ ಪಡೆಯಬಹುದಾಗಿದೆ. ಇನ್ನೂ ಲೈಬ್ರರಿಯಲ್ಲಿ ಓದುತ್ತಿರುವ ಮಕ್ಕಳಿ ಮೇಲೆ ನಿಗಾ ಇಡುವ ಉದ್ದೇಶದಿಂದ ಇಡೀ ಲೈಬ್ರರಿಯಲ್ಲಿ ಸಿಸಿಟಿಗಳನ್ನ ಅಳವಡಿಸಲಾಗಿದ್ದು ಈ ಮೂಲಕ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂದು ಪಿಡಿಓ ಕುಳಿತಲ್ಲೆ ನೋಡಬಹುದಾಗಿದೆ.
ಗ್ರಾಮ ಮಕ್ಕಳು ಗ್ರಾಮದ ಜನರು ಕೂಡಾ ಇಲ್ಲಿರುವ ಸೌಲಭ್ಯವನ್ನ ಚನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ, ಯಾವುದಾದರೂ ಸ್ಫರ್ಧಾತ್ಮ ಪರೀಕ್ಷೆಗಳು ಬಂದಾಗ ಹೆಚ್ಚಿನ ಸಮಯ ಗ್ರಂಥಾಲಯದಲ್ಲಿಯೇ ಕಳೆಯುತ್ತಿದ್ದಾರೆ, ನಾನು ಕೂಡ ಒಂದು ಪುಟ ಹಳ್ಳಿಯಿಂದ ಪಿಡಿಒ ಆದವನು ಬಹಳಷ್ಟು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದೇನೆ,. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಾಯಾರಾಗುವಾಗ ನಮಗೆ ಯಾವುದೇ ಅನುಕೂಲಗಳು ಸಿಗಲಿಲ್ಲ ಆದರೆ ನಾನು ಒಳ್ಳೆಯ ಹುದ್ದೆಯಲ್ಲಿ ಇರುವಾಗ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಪಂಚಾಯತ್ ನಲ್ಲಿನ ಹೆಚ್ಚುವರಿ ಬಜೆಟ್ ಬಳಸಿಕೊಂಡು ಲೈಬ್ರರಿ ನಿರ್ಮಾಣ ಮಾಡಿದ್ದೇನೆ ಎಂದು ತಮ್ಮ ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಾರೆ ಗುಡಪಳ್ಳಿ ಪಿಡಿಒ ಸಂತೋಪ ಪಾಟೀಲ್.
ಸರಕಾರಿ ಆಢಳಿತ ವ್ಯವಸ್ಥೆಯನ್ನ ತೆಗಳೋ ಈ ಕಾಲದಲ್ಲಿ ಒಂದು ಪುಟ್ಟ ಗ್ರಾಮದಲ್ಲಿ ಏನೆಲ್ಲ ಪಂಚಾಯತ್ ನಿಂದ ಮಾಡಬಹುದೆಂದು ಈ ಪಂಚಾಯತ್ ಪಿಡಿಓ ಸದಸ್ಯರು ಮಾಡಿ ತೋರಿಸಿದ್ದಾರೆ. ಇದನ್ನ ವಿದ್ಯಾರ್ಥಿಗಳು ಗ್ರಾಮಸ್ಥರು ಕೂಡಾ ಚನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದು ಸ್ಫರ್ಧಾತ್ಮಕ ಪರಿಕ್ಷೆಗಳಿಗೆ ವಿದ್ಯಾರ್ಥಿಗಳ ಹೆಚ್ಚಿನ ಒಲವು ತೋರಿಸುತ್ತಿದ್ದು ಇಲ್ಲಿನ ಪುಸ್ತಕಗಳು ಕಂಪ್ಯೂಟರ್ ವ್ಯವಸ್ಥೆಯಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನ ಸಿಗುತ್ತಿದೆ. ಏನೇ ಇರಲಿ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಪಿಡಿಓ ಮಕ್ಕಳಿಗಾಗಿ ಈ ವ್ಯವಸ್ಥೆ ಕಲ್ಪಿಸಿದ್ದು ಮೆಚ್ಚುವಂತದ್ದೆ ಇನ್ನೂ ಈ ವ್ಯವಸ್ಥೆಯನ್ನ ವಿದ್ಯಾರ್ಥಿಗಳು ಬಳಸಿಕೊಂಡು ಸರಕಾರ ನೌಕರಿ ಗಿಟ್ಟಿಸಿಕೊಳ್ಳಲಿ ಅನ್ನೋದು ಎಲ್ಲರ ಆಸೆಯವಾಗಿದೆ..