ಮಗ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ಭವಾನಿ ರೇವಣ್ಣ, ಕೆಲ ಸಮಯ ಮಗನೊಂದಿಗೆ ಮಾತನಾಡಿದರು. ತಾಯಿಯನ್ನು ಕಂಡು ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದರು. ಈ ವೇಳೆ ಭವಾನಿ ರೇವಣ್ಣ ಅವರು ಮಗನನ್ನು ಸಂತೈಸಿದರು. ಬಳಿಕ ಆರೋಗ್ಯದ ಬಗ್ಗೆ ವಿಚಾರಿಸಿದರು. 

ಬೆಂಗಳೂರು(ಜು.02):  ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತಾಯಿ ಭವಾನಿ ಸೋಮವಾರ ಭೇಟಿಯಾಗಿ ಕೆಲ ಕಾಲ ಮಾತನಾಡಿದರು.

ಮಗ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ಭವಾನಿ ರೇವಣ್ಣ, ಕೆಲ ಸಮಯ ಮಗನೊಂದಿಗೆ ಮಾತನಾಡಿದರು. ತಾಯಿಯನ್ನು ಕಂಡು ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದರು. ಈ ವೇಳೆ ಭವಾನಿ ರೇವಣ್ಣ ಅವರು ಮಗನನ್ನು ಸಂತೈಸಿದರು. ಬಳಿಕ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ತಿಳಿದು ಬಂದಿದೆ.

ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ಬಳಿ ಒಂದಲ್ಲ, ಎರಡಲ್ಲ ಬರೋಬ್ಬರಿ ಎಷ್ಟು ಸಿಮ್‌ಕಾರ್ಡ್‌ ಇತ್ತು ಗೊತ್ತಾ?

ಕಾರಿನಲ್ಲಿ ಬಂದಿದ್ದ ಭವಾನಿ ರೇವಣ್ಣ ಅವರು ಮಾಧ್ಯಮಗಳನ್ನು ಕಂಡು ಮುಖ ಮುಚ್ಚಿಕೊಂಡರು. ಬಳಿಕ ಕಾರಿನಿಂದ ಇಳಿದು ಸ್ಟಿಕ್ (ಊರುಗೋಲು) ಸಹಾಯದಿಂದ ನಡೆದುಕೊಂಡು ಜೈಲಿನತ್ತ ತೆರಳಿದರು. ಮಗನ ಭೇಟಿ ಬಳಿಕವೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟರು.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಅತ್ಯಾಚಾರ ಮತ್ತು ಬಲವಂತವಾಗಿ ಸಂತ್ರಸ್ತೆಯರ ಅಶ್ಲೀಲ ವಿಡಿಯೊ ಸೆರೆ ಹಿಡಿದ ಆರೋಪ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಅಧಿಕಾರಿಗಳು ಪ್ರಜ್ವಲ್‌ನನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ.