ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ದೇವರ ಗುಜ್ಜುಕೋಲ ಮುಟ್ಟಿ ಬಹಿಷ್ಕಾರಕ್ಕೊಳಗಾದ ಕುಟುಂಬ
ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಕೋಲಾರದ ಮಾಲೂರಿನ ಉಳ್ಳೇರಹಳ್ಳಿಯಲ್ಲಿ ಉತ್ಸವದ ಮೂರ್ತಿಯ ಗುಜ್ಜುಕೋಲ ಎತ್ತಿಕೊಟ್ಟಿದ್ದಕ್ಕೆ ಬಹಿಷ್ಕಾರಕ್ಕೆ ಒಳಗಾಗಿದ್ದ ಚೇತನ್ ಮತ್ತು ಆತನ ಕುಟುಂಬದವರು ರಾಹುಲ್ ಜೊತೆ ಹೆಜ್ಜೆ ಹಾಕಿದರು.
ಚಿತ್ರದುರ್ಗ (10): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕೋಟೆನಾಡು ಚಿತ್ರದುರ್ಗಕ್ಕೆ ತಲುಪಿದ್ದು. ಬೆಳಗ್ಗೆ 11 ಗಂಟೆ ಸುಮಾರಿಗೆ ಹಿರಿಯೂರು ನಗರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ತಂಡ ಸ್ವಲ್ಪ ಹೊತ್ತು ವಿಶ್ರಾಂತಿ ಬಳಿಕ ಮಧ್ಯಾಹ್ನ ವೇಳೆಗೆ ಹಿರಿಯೂರು ತಾಲ್ಲೂಕಿನ ಬಂಜಾರ ಸಮುದಾಯದವರೊಂದಿಗೆ ಸಂವಾದ ನಡೆಸುವ ಮೂಲಕ ಅವರ ಸಂಕಷ್ಟವನ್ನು ಆಲಿಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೈ ನಾಯಕರಾದ ಬಿ.ಕೆ ಹರಿಪ್ರಸಾದ್, ಸುರ್ಜೇವಾಲಾ, ಸಲೀಂ ಅಹ್ಮದ್ ಭಾಗಿ ಆಗಿದ್ದರು. ಇನ್ನು ರಾಹುಲ್ ಹಿರಿಯೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಕೋಲಾರದ ಮಾಲೂರಿನ ಉಳ್ಳೇರಹಳ್ಳಿಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬ ಭಾಗಿಯಾಗಿತ್ತು. ಉತ್ಸವದ ಮೂರ್ತಿಯ ಗುಜ್ಜುಕೋಲ ಎತ್ತಿಕೊಟ್ಟಿದ್ದಕ್ಕೆ ಬಹಿಷ್ಕಾರಕ್ಕೆ ಒಳಗಾಗಿದ್ದ ಚೇತನ್ ಮತ್ತು ಆತನ ಕುಟುಂಬದವರು ರಾಹುಲ್ ಜೊತೆ ಹೆಜ್ಜೆ ಹಾಕಿದರು. ಬಹಿಷ್ಕಾರಕ್ಕೆ ಒಳಗಾಗಿದ್ದ ಚೇತನ್ ಮತ್ತು ಆತನ ಕುಟುಂಬಕ್ಕೆ ನ್ಯಾಯ ಪಂಚಾಯ್ತಿ ಮಾಡಿ 60 ಸಾವಿರ ದಂಡ ಕೂಡ ವಿಧಿಸಲಾಗಿತ್ತು. ದಂಡ ಪಾವತಿಸದಿದ್ದರೆ ಬಹಿಷ್ಕಾರದ ಬೆದರಿಕೆ ಹಾಕಲಾಗಿತ್ತು.
ಬಳಿಕ ಶುರುವಾದ ಯಾತ್ರೆಗೆ ಮೊದಲಿಗೆ ಲಂಬಾಣಿ ಸಮುದಾಯದ ಮಹಿಳೆಯರು ನಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ ಕೋರುವ ಮೂಲಕ ಸಂಜೆಯ ಯಾತ್ರೆಯನ್ನು ಶುರು ಮಾಡಲು ಕಾರಣವಾದರು. ಅಲ್ಲಿಂದ ಶುರುವಾದ ಯಾತ್ರೆ ಹಿರಿಯೂರು ನಗರದ ಮೂಲಕ ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಕಡೆ ಹೊರಟಿತು. ಈ ವೇಳೆ ಹಿರಿಯೂರು ನಗರದಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡುವ ಸಂದರ್ಭದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ತುಂತುರು ಮಳೆಯನ್ನೂ ಲೆಕ್ಕಿಸದೇ ಮಳೆಯಲ್ಲಿಯೇ ಯಾತ್ರೆಯನ್ನು ಮಾಡುವ ಮೂಲಕ ಸೇರಿದ್ದ ಜನರಲ್ಲಿ ಇನ್ನಷ್ಟು ಎನರ್ಜಿ ತಂದರು.
ಭಾರತ್ ಜೋಡೋ ಯಾತ್ರೆ ನಿಗದಿಯಂತೆ ಮುಂದುವರಿಯಲಿದೆ: ಡಿ ಕೆ ಶಿವಕುಮಾರ್ ಸ್ಪಷ್ಟನೆ
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿಗದಿ ಆಗಿರುವಂತೆ ಮುಂದುವರಿಯಲಿದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಾಳೆ ಯಾತ್ರೆ ಸ್ಥಗಿತಗೊಳಿಸಿ ತೆರಳಲಿದ್ದಾರೆ ಎಂಬುದು ಕೇವಲ ವದಂತಿ. ಅವರು ಇಲ್ಲೇ ಇದ್ದು ಯಾತ್ರೆ ಮುಂದುವರಿಸುವರು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Bharat Jodo Yatra: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಪಾದಯಾತ್ರೆಗೆ ಬಂದಿದ್ದ ವ್ಯಕ್ತಿಗೆ ಬಸ್ ಡಿಕ್ಕಿ,ಕೈ ಕಾರ್ಯಕರ್ತ ಸಾವು: ಪಾದಯಾತ್ರೆಗೆ ಜನರನ್ನ ಕರೆತಂದಿದ್ದ ಬಸ್ ಡಿಕ್ಕಿಯಾಗಿ, ಪಾದಯಾತ್ರೆಗೆ ಬಂದಿದ್ದ ಕೈ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ. ಸಾಗರ ವಿಧಾನಸಭಾ ಕ್ಷೇತ್ರದಿಂದ ಕೈ ಕಾರ್ಯಕರ್ತ ಪಾದಯಾತ್ರೆಗೆ ಆಗಮಿಸಿದ್ದ ಎಂದು ತಿಳಿದುಬಂದಿದ್ದು. ಮೃತ ದುರ್ದೈವಿ ರಮೇಶ್ ಎಂದು ತಿಳಿದುಬಂದಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ವ್ಯಕ್ತಿಯಾಗಿದ್ದಾನೆ. ಹಿರಿಯೂರು ನಗರದ ಕೋರ್ಟ್ ಸಮೀಪದಲ್ಲಿ ಬಸ್ ಡಿಕ್ಕಿಯಾಗಿದೆ.
ಚಿತ್ರದುರ್ಗ ತಲುಪಿದ Bharat Jodo Yatra, ಮಳೆಯನ್ನೂ ಲೆಕ್ಕಿಸದೇ ರಾಹುಲ್ ಗಾಂಧಿ, ಡಿಕೆಶಿ ಭಾಗಿ
ಭಾರತ್ ಜೋಡೋ ಯಾತ್ರೆಯಲ್ಲಿ, ಚೋಡೋ ಪ್ರಸಂಗ:
ಕೆ.ಹೆಚ್ ಮುನಿಯಪ್ಪ ಹಾಗೂ ಕೆ.ಆರ್ ರಮೇಶ್ ಕುಮಾರ್ ನಡುವೆ ಹಿರಿಯೂರು ನಲ್ಲಿ ಮತ್ತೊಮ್ಮೆ ಅಸಮಾಧಾನ ಸ್ಫೋಟ. ರಾಹುಲ್ ಗಾಂಧಿ ಎದುರೇ ಅಸಮಾಧಾನ ಸ್ಫೋಟ. ರಮೇಶ್ ಕುಮಾರ್ ಹಾಗೂ ಕೆ.ಹೆಚ್ ಮುನಿಯಪ್ಪ ಅಸಮಾಧಾನ ತಣಿಸಲು ಡಿ.ಕೆ ಶಿವಕುಮಾರ್ ವ್ಯರ್ಥ ಪ್ರಯತ್ನ. ರಾಹುಲ್ ಗಾಂಧಿ ಎಡ ಹಾಗೂ ಬಲದಲ್ಲಿ ಹೆಜ್ಜೆ ಹಾಕಿದ ರಮೇಶ್ ಕುಮಾರ್, ಮುನಿಯಪ್ಪ. ಇದನ್ನು ಕಂಡ ಡಿಕೆಶಿ, ಮುನಿಯಪ್ಪನ ಬಳಿ ರಮೇಶ್ ಕುಮಾರ್ ಅವರನ್ನ ಬಲವಂತವಾಗಿ ತಳ್ಳಿದರು. ತಮ್ಮನ್ನು ಬಲವಂತವಾಗಿ ತಳ್ಳಿದ್ದಕ್ಕೆ ಮುಖ ಗಂಟು ಹಾಕಿದ ರಮೇಶ್ ಕುಮಾರ್. ಈ ಪ್ರಸಂಗದ ಬಳಿಕ ರಾಹುಲ್ ಜೊತೆ ರಮೇಶ್ ಹೆಜ್ಜೆ ಹಾಕಲಿಲ್ಲ. ಬದಲಾಗಿ ರಾಹುಲ್ ಗಾಂಧಿಗೆ ಮುಖ ತೋರಿಸಿ ಮನೆಗೆ ಹೊರಟ ರಮೇಶ್ ಕುಮಾರ್. ರಮೇಶ್ ಕುಮಾರ್ ನಡೆ ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ಫುಲ್ ಗರಂ. ರಮೇಶ್ ಕುಮಾರ್ ವಿರುದ್ಧ ಸುರ್ಜೇವಾಲ, ಡಿಕೆಶಿ ಫುಲ್ ಗರಂ ಆದರು.