ಟೋಲ್ ಶುಲ್ಕ ಹೆಚ್ಚಳ: ಎಕ್ಸ್‌ಪ್ರೆಸ್ ವೇ ಮಧ್ಯದಲ್ಲಿಯೇ ಸಾರಿಗೆ ಬಸ್ ಯೂ ಟರ್ನ್!
ಟೋಲ್‌ನಿಂದ ಬಚಾವ್ ಆಗಲು ಚಾಲಕನೊಬ್ಬ ಸಾರಿಗೆ ಬಸ್ ಅನ್ನು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನ ಮಧ್ಯದಲ್ಲಿಯೇ ಯೂ ಟರ್ನ್ ಮಾಡಿ ರಾಂಗ್ ಸೈಡಿನಲ್ಲಿ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬಿಡದಿ ಸಮೀಪ ನಡೆದಿದೆ.
ರಾಮನಗರ (ಆ.1): ಟೋಲ್‌ನಿಂದ ಬಚಾವ್ ಆಗಲು ಚಾಲಕನೊಬ್ಬ ಸಾರಿಗೆ ಬಸ್ ಅನ್ನು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನ ಮಧ್ಯದಲ್ಲಿಯೇ ಯೂ ಟರ್ನ್ ಮಾಡಿ ರಾಂಗ್ ಸೈಡಿನಲ್ಲಿ ಸಂಚರಿಸಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ಬಿಡದಿ ಸಮೀಪ ನಡೆದಿದೆ.
ಬೆಳಗ್ಗೆ 8 ಗಂಟೆ ಸಮಯದಲ್ಲಿ ಕೆ.ಎ.42, ಎಫ್ - 2233 ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಅನ್ನು ಚಾಲಕ ಎಕ್ಸ್‌ಪ್ರೆಸ್ ವೇ ಮಧ್ಯದಲ್ಲಿ ಯೂ ಟರ್ನ್ ಮಾಡಿಕೊಂಡು ಸಂಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟೋಲ…ನ ಹಣ ಉಳಿಸುವ ಕಾರಣಕ್ಕೆ ಬಸ್ ಅನ್ನು ಯೂ ಟರ್ನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಪ್ರಯಾಣಿಕರ ಪ್ರಾಣ ಸಂಕಟಕ್ಕೆ ತಳ್ಳಿದ ಡ್ರೈವರ್ ವಿರುದ್ಧ ಜನರು ಕಿಡಿಕಾರಿದ್ದಾರೆ. ಜೊತೆಗೆ ಬಸ್ ಹಿಂದೆ ಬರುತ್ತಿದ್ದ ಇತರೆ ವಾಹನ ಸವಾರರಲ್ಲಿಯೂ ಇದು ಆತಂಕ ಮೂಡಿಸಿದೆ.
ಇಂದಿನಿಂದ ಬೈಕ್, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ
ಸದ್ಯ ಸಾಮಾಜಿಕ ಜಾಲತಾಣ(Social media)ದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದಾರೆ. ನರಸಿಂಹ ಉಪಾಧ್ಯಾಯ ಈ ಘಟನೆ ಕುರಿತಾಗಿ ಟ್ವೀಚ್ ಮಾಡಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ(Bengaluru mysuru expressway)ನಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳಿಗೆ ಯಾರು ಜವಾಬ್ದಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಇಂತಹ ಅರ್ಥಹೀನ ಚಾಲಕರಾ ಎಂದು ಪ್ರಶ್ನಿಸಿದ್ದಾರೆ.