Asianet Suvarna News Asianet Suvarna News

ಇಂದಿನಿಂದ ಬೈಕ್‌, ರಿಕ್ಷಾಗೆ ಬೆಂ-ಮೈ ಹೈವೇಲಿ ನಿಷೇಧ: ನಿಯಮ ಮೀರಿದ್ರೆ 500 ರೂ. ದಂಡ

ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹ​ನ​ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ ವಾಹನ ಸವಾರರಿಗೆ 500 ದಂಡ ಬೀಳ​ಲಿದೆ. 
 

bengaluru mysuru expressway tractor auto and two wheelers vehicles banned from agust 1 gvd
Author
First Published Aug 1, 2023, 2:40 AM IST

ರಾಮ​ನ​ಗರ (ಆ.01): ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾ​ರಿ​ಯಲ್ಲಿ ಮಂಗಳವಾರದಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹ​ನ​ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೈವೇಗೆ ಇಳಿದರೆ ವಾಹನ ಸವಾರರಿಗೆ 500 ದಂಡ ಬೀಳ​ಲಿದೆ. ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಜು.12ರಂದೇ ಗೆಜೆಟ್‌ ಅಧಿ​ಸೂ​ಚನೆ ಹೊರ​ಡಿ​ಸ​ಲಾ​ಗಿದೆ. ಆ.1ರ ಮಂಗಳವಾರದಿಂದ ಈ ಕುರಿತು ಆದೇಶ ಜಾರಿಗೆ ಬರಲಿದೆ. 

ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ನಿಷೇಧಿತ ವಾಹನ ಸವಾರರು ಎಕ್ಸ್‌ಪ್ರೆಸ್‌ ವೇಗೆ ಇಳಿ​ಯ​ದೆ ಕಡ್ಡಾ​ಯ​ವಾಗಿ ನಿಯಮ ಪಾಲನೆ ಮಾಡಿ, ಸರ್ವಿಸ್‌ ರಸ್ತೆ​ಯಲ್ಲಿ ಸಂಚಾರ ಮಾಡ​ಬೇಕು. ಹಾಗೊಂದು ವೇಳೆ ನಿಯಮ ಉಲ್ಲಂಘನೆ ಮಾಡಿ​ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚ​ರಿಕೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಹೆಜ್ಜಾಲ ಸಮೀಪದ ಕಣಿಮಿಣಿಕೆ ಟೋಲ್‌ ಸಂಗ್ರಹ ಪ್ಲಾಜಾ ಮುಂದೆ ಸೂಚನಾ ಫಲಕಗಳನ್ನು ಹಾಕಲಾಗಿದೆ. ಅಲ್ಲದೆ, ನಿಷೇಧಿತ ವಾಹನಗಳು ಹೆದ್ದಾರಿಗೆ ಪ್ರವೇಶಿಸದಂತೆ ಪೊಲೀಸರು ಕಾವಲು ಕಾಯಲಿದ್ದಾರೆ ಎಂದು ಅವರು ತಿಳಿಸಿದರು.

ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ!

ಸಾರ್ವಜನಿಕರ ಆಕ್ರೋಶ: ಈ ಮಧ್ಯೆ, ಹೆದ್ದಾರಿ ಪ್ರಾಧಿಕಾರದ ಈ ಆದೇಶಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್‌ಪ್ರೆಸ್‌ ವೇ ನಿರ್ಮಾ​ಣ ಸಮ​ಯ​ದಲ್ಲಿ ನಾಲ್ಕು ಪಥದ ಸರ್ವಿಸ್‌ ರಸ್ತೆ​ಗ​ಳನ್ನು ಕೇವಲ ಕಾಟಾ​ಚಾ​ರಕ್ಕೆ ಎಂಬಂತೆ ನಿರ್ಮಿಸಲಾಗಿದೆ. ಸರ್ವಿಸ್‌ ರಸ್ತೆ​ಗ​ಳಲ್ಲಿ ಸುರ​ಕ್ಷತೆ ಕಡೆಗೆ ಸ್ವಲ್ಪವೂ ಗಮನ ಹರಿ​ಸಿಲ್ಲ. ಸರ್ವಿಸ್‌ ರಸ್ತೆ​ ನಿರ್ಮಾ​ಣ​ದಲ್ಲಿ ಗುಣ​ಮಟ್ಟ ಕಾಪಾಡಿಕೊಂಡಿಲ್ಲ. ಮಳೆ ನೀರು ಸರಾ​ಗ​ವಾಗಿ ಹರಿದು ಹೋಗಲು ಕ್ರಮ ವಹಿ​ಸಿ​ಲ್ಲ. ಮಳೆಗಾಲ​ದಲ್ಲಿ ಅಂಡರ್‌ಪಾಸ್‌ಗಳು ಜಲಾ​ವೃತ ಆಗು​ವುದು ತಪ್ಪಿಲ್ಲ. ಹೀಗಾಗಿ, ಇಲ್ಲಿ ವಾಹ​ನ​ಗಳು ಸಂಚಾರ ಮಾಡು​ವುದು ಕಷ್ಟ. ಅಲ್ಲದೆ, ಬಿಡದಿ ಹಾಗೂ ದೊಡ್ಡ​ಮ​ಳೂರು-ಕೋಟ​ಮಾ​ರ​ನ​ಹಳ್ಳಿ ​ಸ​ಮೀ​ಪ ರೇಲ್ವೆ ಅಂಡರ್‌ ಪಾಸ್‌ಗಳಲ್ಲಿ ಸಂಚಾರ ಮುಕ್ತ​ಗೊ​ಳಿ​ಸಿಯೇ ಇಲ್ಲ. ಹಲ​ವೆಡೆ ಸರ್ವಿಸ್‌ ರಸ್ತೆ​ಯೂ ಪರಿ​ಪೂ​ರ್ಣ​ಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.

ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ

ಯಾವ್ಯಾವ ವಾಹನ ನಿಷೇಧ?: ಮೋಟಾರ್‌ ಸೈಕಲ್‌, ಸ್ಕೂಟರ್‌ ಸೇರಿ ದ್ವಿಚಕ್ರ ವಾಹನ. ಆಟೋರಿಕ್ಷಾ ಸೇರಿ ತ್ರಿಚಕ್ರವಾಹನ. ಮೋಟಾರು ಅಲ್ಲದ ವಾಹನಗಳು. ಟ್ರ್ಯಾಕ್ಟರ್‌ ಸಹಿತ ಕೃಷಿ ಆಧರಿತ ವಾಹನಗಳು. ಮಲ್ಟಿಆ್ಯಕ್ಸೆಲ್‌ ಹೈಡ್ರಾಲಿಕ್‌ ವಾಹನಗಳು. ಸೈಕಲ್‌ಗಳು. ಎತ್ತಿನಗಾಡಿ

Follow Us:
Download App:
  • android
  • ios