ಬೆಂಗಳೂರು ಕಂಬಳಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು ನಗರದ ಪ್ಯಾಲೇಸ್ ಮೈದಾನದಲ್ಲಿ ಈಗಾಗಲೇ ಕರೆ ನಿರ್ಮಾಣ ಕಾರ್ಯ ಪೂರ್ತಿಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಗೆ ವಿಶೇಷವಾಗಿ ಗೌರವ ಸಲ್ಲಿಸಲು ಕಂಬಳ ಸಮಿತಿ ನಿರ್ಧರಿಸಿದೆ.

ಬೆಂಗಳೂರು (ನ.17): ಬೆಂಗಳೂರು ಕಂಬಳಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು ನಗರದ ಪ್ಯಾಲೇಸ್ ಮೈದಾನದಲ್ಲಿ ಈಗಾಗಲೇ ಕರೆ ನಿರ್ಮಾಣ ಕಾರ್ಯ ಪೂರ್ತಿಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಗೆ ವಿಶೇಷವಾಗಿ ಗೌರವ ಸಲ್ಲಿಸಲು ಕಂಬಳ ಸಮಿತಿ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಹೌದು, ಈಗಾಗಲೇ ಪೂರ್ತಿಗೊಂಡಿರುವ ಬೆಂಗಳೂರು ಕಂಬಳ(Bengaluru kambala)ದ ಜೋಡುಕರೆಗಳಿಗೆ ಹೆಸರು ಅಂತಿಮಗೊಂಡಿದೆ. ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಮೊದಲ ಬಾರಿಗೆ ನಡೆಯುತ್ತಿರುವ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರನ್ನೇ ಇಡಲು ನಿರ್ಧರಿಸಲಾಗಿದೆ. ಕಂಬಳ ಸಮಿತಿಯ ಈ ನಿರ್ಧಾರ ಸದ್ಯ ಕಂಬಳಾಭಿಮಾನಿಗಳ ಜೊತೆ ಪುನೀತ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

ಬೆಂಗಳೂರು ಕಂಬಳಕ್ಕೆ ಸಿಎಂ 1 ಕೋಟಿ ರೂ ಘೋಷಣೆ, ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ ಸೇರಿ ಹಲವು ತಾರೆಯರು ಭಾಗಿ

ಕರಾವಳಿಯ ಜಾನಪದ ಆಟ ಕಂಬಳ ನೋಡೋದೆ ಕಣ್ಣಿಗೊಂದು ಹಬ್ಬ. ಅಂತಹದ್ದರಲ್ಲಿ ಈ ಆಟ ಈಗ ರಾಜಧಾನಿ ಪ್ರವೇಶ ಮಾಡಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ(Bengaluru kambala namma kambala) ಎಂಬ ಟ್ಯಾಗ್ ಲೈನ್ ನೊಂದಿಗೆ ನಡೆಯುತ್ತಿರುವ ಈ ಜೋಡುಕರೆ ಕಂಬಳಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ. ಈಗಾಗಲೇ ಇರುವ ಕಂಬಳಗಳ ಕರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ, ಕಾಂತಬಾರೆ-ಬೂದಬಾರೆ ಎಂಬಿತ್ಯಾದಿ ಹೆಸರುಗಳಿವೆ. ಹಾಗಾಗಿ ಬೆಂಗಳೂರಿಗೆ ಯಾವ ಹೆಸರಿಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಬೆಂಗಳೂರು ಕಂಬಳಕ್ಕೆ ಕನ್ನಡದ ಲೆಜೆಂಡ್ ನಟರಾದ ರಾಜ್ ಕುಮಾರ್ ಮತ್ತು ಪುನೀತ್ ಅವರ ಹೆಸರುಗಳು ಜೊತೆ ಸೇರುವಂತೆ ಪುನೀತ್-ರಾಜ್ ಕಂಬಳ ಎಂದು ನಾಮಕರಣ ಮಾಡಲಾಗಿದೆ....

ಉಳಿದಂತೆ ಬೆಂಗಳೂರು ಕಂಬಳದ ಸಿದ್ದತೆಗಳು ಪೂರ್ಣಗೊಂಡಿದ್ದು ಕಂಬಳ ಕರೆಗಾಗಿ ಮತ್ತು ಇತರ ಬಳಕೆಗಾಗಿ ಪ್ಯಾಲೇಸ್ ಗ್ರೌಡ್ ನಲ್ಲಿ ಎರಡು ಬೋರ್ ವೆಲ್ ಕೊರೆಸಲಾಗಿದೆ. ಈ ಎರಡೂ ಬೋರ್ ವೆಲ್ ನಲ್ಲೂ ಯಥೇಚ್ಛವಾಗಿ ನೀರು ದೊರಕಿದ್ದು ಕಂಬಳಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಜೊತೆಗೆ ಇಲ್ಲಿರುವ ಹುತ್ತಗಳಿಗೂ ಕಟ್ಟೆಯನ್ನು ಕಟ್ಟಿ ಸಂರಕ್ಷಿಸಿಕೊಂಡು ಬರಲಾಗಿದೆ. ಒಂದು ಕಾಲದಲ್ಲಿ ಸರ್ಕಸ್ ನಡೆಯುತ್ತಿದ್ದ ಈ ಗ್ರೌಂಡ್ ಕ್ರಮೇಣ ಕಸದ ರಾಶಿಗಳಿಂದ, ಮುಳ್ಳುಗಂಟೆಗಳಿಂದ ತುಂಬಿತ್ತು. ಸದ್ಯ ಕಂಬಳದ ನೆಪದಲ್ಲಿ ಗ್ರೌಡ್ ಕೂಡ ಸ್ವಚ್ಚಗೊಂಡಿದೆ.

ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?

ಒಟ್ಟಿನಲ್ಲಿ ಇದೇ ನವೆಂಬರ್ 25,26 ರಂದು ಕಂಬಳ ವಿಜೃಂಭಣೆಯಿಂದ ನಡೆಯಲಿದ್ದು ರಾಜಧಾನಿ ತುಳುನಾಡಿನ ಗ್ರಾಮೀಣ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದೆ.

ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್