ಬೆಂಗಳೂರು ಮೆಟ್ರೋ ಹಳಿಯಲ್ಲಿ ನಡೆದುಕೊಂಡು ಹೋದ ಯುವಕ; 20 ನಿಮಿಷ ಸಂಚಾರ ಸ್ಥಗಿತಗೊಳಿಸಿದ ಬಿಎಂಆರ್‌ಸಿಎಲ್!
ಬೆಂಗಳೂರು ಮೆಟ್ರೋ ಹಳಿಯಲ್ಲಿ ಯುವಕನೊಬ್ಬ ನಡೆದುಕೊಂಡು ಹೋಗಿ ಹುಚ್ಚಾಟ ಮೆರೆದಿದ್ದಾನೆ. ಕೂಡಲೇ ಬಿಎಂಆರ್‌ಸಿಎಲ್ ಸಿಬ್ಬಂದಿ ಹೈ ವೋಲ್ಟೇಜ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಮಾ.12): ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಹೈವೋಲ್ಟೇಜ್ ವಿದ್ಯುತ್ ಸರಬರಾಜು ಇರುವ ಮೆಟ್ರೋದ ಹಳಿಯಲ್ಲಿ (Metro Viaduct) ನಡೆದುಕೊಂಡು ಹೋಗುತ್ತಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಯಿಮದ 3.20ರವರೆಗೆ ಮೈಸೂರು ರಸ್ತೆ ಹಾಗೂ ಚಲ್ಲಘಟ್ಟ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾದು ಕಾದು ಹೈರಾಣಾಗಿದ್ದಾರೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಯುವಕನ ಹುಚ್ಚಾಟಕ್ಕೆ 20 ನಿಮಿಷ ಮೆಟ್ರೋ ಸೇವೆ ಸ್ಥಗಿತಗೊಂಡಿದೆ. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಬರಬೇಕಾದ ರೈಲು 20 ನಿಮಿಷವಾದರೂ ಬಾರದ ಹಿನ್ನೆಲೆಯಲ್ಲಿ ಕೆಂಗೇರಿ, ಪಟ್ಟಣಗೆರೆ, ನಾಯಂಡಹಳ್ಳಿ, ಕೆಂಗೇರಿ ಬಸ್ ಟರ್ಮಿನಲ್ ಸೇರಿ ವಿವಿಧ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾದು ಕಾದು ಹೈರಾಣಾಗಿದ್ದಾರೆ. ಮೆಟ್ರೋ ಸಿಬ್ಬಂದಿಯನ್ನು ವಿಚಾರಣೆ ಮಾಡಿದರೆ ತಾಂತ್ರಿಕ ದೋಷ ಎಂಬ ಉತ್ತರ ನೀಡಲಾಗಿದೆ.
ಸರ್ಕಾರಿ ನೌಕರರಿಗೆ ಶೇ.3.75 ತುಟ್ಟಿ ಭತ್ಯೆ ಹೆಚ್ಚಿಸಿದ ಸರ್ಕಾರ; ಜನವರಿಯಿಂದಲೇ ಪೂರ್ವಾನ್ವಯ!
ಮೆಟ್ರೋ ಹಳಿಯಲ್ಲಿ ನಡೆದುಕೊಂಡು ಹೋದ ಯುವಕ: ಇನ್ನು ಭಾರತೀಯ ರೈಲ್ವೆ ಇಲಾಖೆಯ ರೈಲು ಹಳಿಯಲ್ಲಿ ಯಾವುದೇ ವಿದ್ಯುತ್ ಸಂಪರ್ಕ ಇರುವುದಿಲ್ಲ. ರೈಲು ಹಳಿಯ ಮೇಲ್ಭಾಗದಲ್ಲಿ ವಿದ್ಯುತ್ ಲೈನ್ ಅಳವಡಿಕೆ ಮಾಡಲಾಗಿದೆ. ಇದರಿಂದ ಜನರು ರೈಲು ಸಂಚಾರದ ಮಾಡದಿರುವ ವೇಳೆ ಹಳಿಯ ಮೇಲೆ ಹೋದರೂ ಏನೂ ಆಗುವುದಿಲ್ಲ. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ರೈಲು ಹಳಿಯಲ್ಲಿ (Metro Train Viaduct) ಸಂಪೂರ್ಣವಾಗಿ ಹೈವೋಲ್ಟೇಜ್ ವಿದ್ಯುತ್ ಸರಬರಾಜು ಇರುತ್ತದೆ. ಇಲ್ಲಿ ಯಾವುದೇ ವ್ಯಕ್ತಿ ಅಥವಾ ಪ್ರಾಣಿ ಬಂದರೂ ವಿದ್ಯುತ್ ಶಾಕ್‌ನಿಂದ ಸಾವು ಸಂಭವಿಸಬಹುದು.
ಆದರೆ, ಪ್ರಾಣಾಪಾಯವನ್ನೂ ಲೆಕ್ಕಿಸದೇ ಯುವಕನೊಬ್ಬ ಮೆಟ್ರೋ ವಾಯಡಕ್ಟ್‌ನಲ್ಲಿ (ಮೆಟ್ರೋ ಹಳಿ) ಅಪರಿಚಿತ ವ್ಯಕ್ತಿ ನಡೆದುಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಅಧಿಕಾರಿಗಳು ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ಕರೆಂಟ್ ಇರುವುದರಿಂದ ಪವರ್ ಆಫ್ ಮಾಡಲಾಗಿದ್ದು, ಮೆಟ್ರೋ ಸೇವೆ ಸ್ಥಗಿತವಾಗಿದೆ. ಇದರಿಂದ ಮದ್ಯಾಹ್ನ 3 ಗಂಟೆಯಿಂದ 3.20 ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು. ನಂತರ, ಮೆಟ್ರೋ ಸಿಬ್ಬಂದಿ ಹಳಿಗೆ ಇಳಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದ್ದಾರೆ. 3.20ರ ನಂತರ ಎಂದಿನಂತೆ ಮೆಟ್ರೋ ಸೇವೆಯನ್ನು ಆರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಇಂದು ಕರ್ನಾಟಕದ 2 ಹೊಸ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ
ಮೆಟ್ರೋ ಹಳಿಗೆ ಹೇಗೆ ಬಂದನೆಂದು ತಲೆಕೆಡಿಸಿಕೊಂಡ ಮೆಟ್ರೋ ಸಿಬ್ಬಂದಿ: ಇನ್ನು ಯುವಕ ಯಾವ ಮಾರ್ಗದಲ್ಲಿ ಮೆಟ್ರೋ ಹಳಿ ವಾಯಡಕ್ಟ್ ತಲುಪಿದ್ದಾನೆ ಎಂದು ಬಿಎಂಆರ್‌ಸಿಎಲ್ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಚೆಕ್ಕಿಂಗ್ ಕಾರ್ಯ ಆರಂಭಿಸಲಾಗಿದೆ. ಕಳೆದ ಒಂದುವರೆ ಗಂಟೆಯಿಂದ ಅಕ್ಕಪಕ್ಕದ ಮೆಟ್ರೋ ಸ್ಟೇಷನ್‌ನಲ್ಲಿರುವ ಸಿಸಿ ಕ್ಯಾಮರಾ ಮತ್ತು ವಾಯಡಕ್ಟ್ ಬಳಿ ಇರುವ ಕ್ಯಾಮರಾ ಚೆಕ್ ಮಾಡಲಾಗುತ್ತಿದೆ. ಭದ್ರತೆಗಾಗಿ ಜ್ಞಾನಭಾರತಿ ಸ್ಟೇಷನ್ ಮುಂಭಾಗ ಇರುವ ಸರ್ವೀಸ್ ರಸ್ತೆ ಕ್ಲೋಸ್ ಮಾಡಲಾಗಿದೆ.