ಇಂದು ಕರ್ನಾಟಕದ 2 ಹೊಸ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ
ಬೆಂಗಳೂರು-ಕಲಬುರಗಿ ಹಾಗೂ ಮೈಸೂರು- ಚೆನ್ನೈ ಮಾರ್ಗಗಳ ನಡುವೆ ಸಂಚರಿಸಲಿರುವ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
ಬೆಂಗಳೂರು(ಮಾ.12): ಕರ್ನಾಟಕ ರೈಲು ಮಾರ್ಗದಲ್ಲಿ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿಯವರು ಮಾ. 12ರಂದು ಚಾಲನೆ ನೀಡಲಿದ್ದಾರೆ.
ಬೆಂಗಳೂರು-ಕಲಬುರಗಿ ಹಾಗೂ ಮೈಸೂರು- ಚೆನ್ನೈ ಮಾರ್ಗಗಳ ನಡುವೆ ಸಂಚರಿಸಲಿರುವ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಮಂಗಳವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ.
ವಂದೇ ಭಾರತ್ ಸ್ಲೀಪರ್ ಬೋಗಿ ಬೆಂಗ್ಳೂರು ಬೆಮೆಲ್‌ನಲ್ಲಿ ಅಭಿವೃದ್ಧಿ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
ಈ ಎರಡು ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ ಏಳಕ್ಕೆ ಏರುತ್ತದೆ. ಮಂಗಳೂರು ಸೆಂಟ್ರಲ್‌ನಿಂದ ತಿರುವನಂತಪುರಂ ಸೆಂಟ್ರಲ್‌ಗೆ ವಿಸ್ತರಣೆಗೊಂಡ ಕೊಲ್ಲಂ-ತಿರುಪತಿ ಎಕ್ಸ್‌ಪ್ರೆಸ್‌ಗೂ ಈ ವೇಳೆ ಚಾಲನೆ ದೊರೆಯಲಿದೆ.