KSPCB Golden Jubilee event traffic ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ನವೆಂಬರ್ 19 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗ,  ವಾಹನ ನಿಲುಗಡೆ ನಿಷೇಧ ಜಾರಿಗಳಿಸಿದೆ.

ಬೆಂಗಳೂರು (ನ.19): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ ಸುವರ್ಣ ಮಹೋತ್ಸವ (50ನೇ ವರ್ಷದ ಆಚರಣೆ) ಕಾರ್ಯಕ್ರಮವನ್ನು ನವೆಂಬರ್ 19, 2025 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರು ಅರಮನೆ ಮೈದಾನದ ಕೃಷ್ಣ ವಿಹಾರ ಗೇಟ್ ನಂ. 1 ಬಳಿ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಸಾವಿರಾರು ಜನ ಆಗಮಿಸುವ ನಿರೀಕ್ಷೆಯಿದ್ದು, ಅರಮನೆ ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಲಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ್ದು, ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳು, ಭಾರೀ ವಾಹನ ನಿರ್ಬಂಧ ಹಾಗೂ ನೋ-ಪಾರ್ಕಿಂಗ್ ವಲಯಗಳನ್ನು ಘೋಷಿಸಿದ್ದಾರೆ.

ಭಾರೀ ದಟ್ಟಣೆ ನಿರೀಕ್ಷಿತ ರಸ್ತೆಗಳು:

  • ಬಳ್ಳಾರಿ ರಸ್ತೆ
  • ಸಿ.ವಿ. ರಾಮನ್ ರಸ್ತೆ
  • ಜಯಮಹಲ್ ರಸ್ತೆ
  • ಕೃಷ್ಣ ವಿಹಾರ ಗೇಟ್ (ಅರಮನೆ ಮೈದಾನ)
  • ನಂದಿದುರ್ಗ ರಸ್ತೆ
  • ಗುಟ್ಟಹಳ್ಳಿ ರಸ್ತೆ

ನವೆಂಬರ್ 19 ರ ಸಂಚಾರ ಬದಲಾವಣೆಗಳು

1. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ: ವಿಮಾನ ನಿಲ್ದಾಣಕ್ಕೆ ಹೋಗುವವರು ಬಳ್ಳಾರಿ ರಸ್ತೆಯನ್ನು ತಪ್ಪಿಸಿ - ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ - ಕಲ್ಪನಾ ಜಂಕ್ಷನ್ - ಓಲ್ಡ್ ಉದಯ ಟಿವಿ ಜಂಕ್ಷನ್ - ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ - ಟ್ಯಾನರಿ ರಸ್ತೆ - ನಾಗವಾರ - ವಿಮಾನ ನಿಲ್ದಾಣವನ್ನು ಬಳಸುವುದು ಸೂಕ್ತ.

2. ವಿಮಾನ ನಿಲ್ದಾಣದಿಂದ ನಗರ ಕೇಂದ್ರಕ್ಕೆ: ಎರಡು ಆಯ್ಕೆಗಳನ್ನು ಒದಗಿಸಲಾಗಿದೆ -

ಮಾರ್ಗ 1 : ಹೆಬ್ಬಾಳ - ಎಡ ತಿರುವು - ನಾಗವಾರ ಜಂಕ್ಷನ್‌ನಲ್ಲಿ ಬಲಕ್ಕೆ - ಬಿದಿರು ಬಜಾರ್ - ಕ್ವೀನ್ಸ್ ರಸ್ತೆ - ನಗರ

ಮಾರ್ಗ 2 : ಹೆಬ್ಬಾಳ ರಿಂಗ್ ರಸ್ತೆ - ಕುವೆಂಪು ವೃತ್ತ - ಗೋರ್ಗುಂಟೆ ಪಾಳ್ಯ ಜಂಕ್ಷನ್ - ಎಡ ತಿರುವು - ಡಾ. ರಾಜ್‌ಕುಮಾರ್ ರಸ್ತೆ - ನಗರ

3. ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ: ಮತ್ತಿಕೆರೆ ರಸ್ತೆ - ಬಿಇಎಲ್ ವೃತ್ತದ ಬಲಭಾಗ - ರಿಂಗ್ ರಸ್ತೆಯ ಮೂಲಕ ವಿಮಾನ ನಿಲ್ದಾಣ.

4. ಯಶವಂತಪುರದಿಂದ ನಗರಕ್ಕೆ: ಕೇಂದ್ರ ಬೆಂಗಳೂರನ್ನು ಪ್ರವೇಶಿಸಲು ಡಾ. ರಾಜ್‌ಕುಮಾರ್ ರಸ್ತೆಯನ್ನು ಬಳಸಿ

ಭಾರೀ ವಾಹನ ನಿರ್ಬಂಧಗಳು

1. ಹೆಬ್ಬಾಳ ಜಂಕ್ಷನ್ : ಬಳ್ಳಾರಿ ರಸ್ತೆಯ ಕಡೆಗೆ ಭಾರೀ ವಾಹನಗಳಿಗೆ ಅವಕಾಶವಿರುವುದಿಲ್ಲ ಮತ್ತು ಅವು ಹೊರ ವರ್ತುಲ ರಸ್ತೆಯನ್ನು ಬಳಸಬೇಕು.

2. ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್ : ಹೈಗ್ರೌಂಡ್ಸ್ ನಿಂದ ಬರುವ ವಾಹನಗಳನ್ನು ಕಲ್ಪನಾ ಜಂಕ್ಷನ್ - ಹಳೆ ಉದಯ ಟಿವಿ ಜಂಕ್ಷನ್ - ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ - ಟ್ಯಾನರಿ ರಸ್ತೆ - ನಾಗವಾರ ಕಡೆಗೆ ತಿರುಗಿಸಲಾಗುವುದು.

3. ಯಶವಂತಪುರ : ಸಿ.ವಿ. ರಾಮನ್ ರಸ್ತೆ ಕಡೆಗೆ ಹೋಗುವ ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ.

ನವೆಂಬರ್ 19 ರಂದು ಪಾರ್ಕಿಂಗ್ ನಿಷೇಧಿತ ವಲಯಗಳು

ಈ ಕೆಳಗಿನ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ:

  • ಅರಮನೆ ರಸ್ತೆ
  • ನಂದಿದುರ್ಗ ರಸ್ತೆ
  • ಬಳ್ಳಾರಿ ರಸ್ತೆ
  • ಸಿ.ವಿ. ರಾಮನ್ ರಸ್ತೆ
  • ಜಯಮಹಲ್ ರಸ್ತೆ
  • ಗುಟ್ಟಹಳ್ಳಿ ರಸ್ತೆ'