ಬೆಂಗಳೂರಿನ ಇಂದಿರಾನಗರದಲ್ಲಿ ವ್ಯಕ್ತಿಯೊಬ್ಬರು ಫ್ಲಾಟ್ ಬಾಡಿಗೆಗೆ ಪಡೆಯಲು 20,000 ರೂ. ಮುಂಗಡ ನೀಡಿದ್ದರು. ಆದರೆ ನಿಗದಿತ ದಿನಾಂಕದಂದು ಮನೆ ಖಾಲಿಯಿಲ್ಲದೆ, ಮಾಲೀಕ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾನೆ. ಈ ಬಗ್ಗೆ ಆತಂಕಗೊಂಡ ವ್ಯಕ್ತಿ ಪರಿಹಾರಕ್ಕಾಗಿ ರೆಡ್ಡಿಟ್ ಮೊರೆ ಹೋಗಿದ್ದಾರೆ.

ಇಂದಿನ ಜನರು ತಮ್ಮ ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವುದರಿಂದ ಹಿಡಿದು, ವೈಯಕ್ತಿಕ ಅನುಭವ ಹಂಚಿಕೆ, ಉಪಯುಕ್ತ ಮಾಹಿತಿ ಪಡೆಯುವವರೆಗೆ ಜನರಿಗೆ ತಕ್ಷಣಕ್ಕೆ ನೆರವಿಗೆ ಬರುವ ಪ್ಲಾಟ್‌ಫಾರಂ ಆಗಿ ರೆಡ್ಡಿಟ್(Reddit) ಜನಪ್ರಿಯವಾಗಿದೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ.

ಮುಂಗಡ ಕೊಟ್ಟ ಹಣ ವಾಪಸ್ ಕೊಡಲು ಮನೆ ಮಾಲೀಕ ನಿರಾಕರಣೆ

ಇಂದಿರಾನಗರದಲ್ಲಿ ಫ್ಲಾಟ್ ಖರೀದಿಸಬೇಕು ಅನ್ನೋ ಕನಸು ಕಂಡಿದ್ದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಫ್ಲಾಟ್ ಪಡೆಯಲು ಮಾಲೀಕರಿಗೆ 20,000 ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದಾರೆ. ಆದರೆ ಆ ಹಣವನ್ನು ಹಿಂದಿರುಗಿಸಲು ಮನೆ ಮಾಲೀಕ ನಿರಾಕರಿಸಿದ ಹಿನ್ನೆಲೆ ಮುಂದೇನು ಎಂಬ ಆತಂಕಕ್ಕೊಳಗಾಗಿ ಸಲಹೆಗಾಗಿ ರೆಡ್ಡಿಟ್(reddit) ಮೊರೆ ಹೋಗಿದ್ದಾರೆ.

ಇತ್ತ ಬಾಡಿಗೆ ಮನೆ ಇಲ್ಲ, ಅತ್ತ ಮುಂಗಡ ಹಣನೂ ಇಲ್ಲ

ಆಗಿದ್ದೇನೆಂದರೆ ಬಾಡಿಗೆ ಫ್ಲಾಟ್‌ಗೆ ಬರಲು ಒಂದು ದಿನಾಂಕ ಕೊಟ್ಟಿದ್ದರು. ಅದಕ್ಕಾಗಿ ಹಣವನ್ನು ವಂಚನೆಗೊಳಗಾದ ವ್ಯಕ್ತಿ ಮನೆ ಮಾಲೀಕನಿಗೆ ಅಡ್ವಾನ್ಸ್ ಆಗಿ ಕೊಟ್ಟಿದ್ದರು. ನಿಗದಿಪಡಿಸಿದ ದಿನಾಂಕದಂದು ಫ್ಲಾಟ್‌ಗೆ ಹೋದರೆ ಅಲ್ಲಿ ಈಗಾಗಲೇ ವಾಸಿಸುತ್ತಿರುವವರು ಮನೆ ಖಾಲಿ ಮಾಡಿಲ್ಲ. ಅವರು ಖಾಲಿ ಮಾಡಲು ಇನ್ನು ಇಪ್ಪತ್ತು ದಿನಗಳ ಕಾಲ ಕಾಲಾವಕಾಶ ಬೇಕು ಎನ್ನುತ್ತಿದ್ದಾರೆ. ಆದರೆ ಅಲ್ಲಿವರೆಗೆ ಕಾಯಲು ಆಗದು, ಬೇರೊಂದು ಮನೆ ನೋಡಿಕೊಳ್ಳುತ್ತೇನೆ, ಮುಂಗಡವಾಗಿ ಕೊಟ್ಟು ದುಡ್ಡು ವಾಪಸ್ ಕೊಡಲು ಕೇಳಿದರೆ ಮನೆ ಮಾಲೀಕ ಕೊಡಲು ಒಪ್ಪುತ್ತಿಲ್ಲ! ಈಗ ಬೇರೆ ಮನೆ ನೋಡಿದರೆ ಮಾಲೀಕನಿಂದ ಇಪ್ಪತ್ತು ಸಾವಿರ ಕಳೆದುಕೊಳ್ಳಬೇಕಾಗುತ್ತೆ. ಆದರೆ ಇದೇ ಮನೆ ಬೇಕು ಅಂದರೆ ಇನ್ನು ಇಪ್ಪತ್ತು ದಿನ ಕಾಯಬೇಕು. ಮಾಲೀಕನ ವಂಚನೆ ತಿಳಿಯದೆ ಮೋಸ ಹೋಗಿದ್ದಾರೆ.

ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದಿದ್ದೇನು?

ವ್ಯಕ್ತಿ ತಮಗಾದ ಅನುಭವವನ್ನು r/bangalorerentals ಎಂಬ ಸಬ್‌ರೆಡಿಟ್‌ನಲ್ಲಿ ಹಂಚಿಕೊಂಡು ಸಹಾಯ, ಕಾನೂನು ಸಲಹೆ ಕೇಳಿ ಪೋಸ್ಟ್ ಮಾಡಿದ್ದಾರೆ. ಇದೇ ರೀತಿಯ ಬಾಡಿಗೆ ಸಮಸ್ಯೆಗಳನ್ನು ಎದುರಿಸಿದ್ದ ಜನರು ಈ ಪೋಸ್ಟ್‌ಗೆ ರಿಪ್ಲೆ ಮಾಡುವ ಮೂಲಕ ಹಲವು ಸಲಹೆಗಳನ್ನು ನೀಡಿದ್ದಾರೆ.

ನೋಬ್ರೋಕರ್‌ನಲ್ಲಿ ಮನೆ ಬಾಡಿಗೆ ಪಡೆಯುವ ಮುನ್ನ ಎಚ್ಚರ!

'ನೋಬ್ರೋಕರ್' (NoBroker) ಪ್ಲಾಟ್‌ಫಾರ್ಮ್‌ನಲ್ಲಿ, ಮನೆಯ ಮಾಲೀಕರೇ ನೇರವಾಗಿ ಪಟ್ಟಿ ಮಾಡಿದ್ದ ಒಂದು ವಿಶಾಲವಾದ ಫ್ಲಾಟ್ ಅವರಿಗೆ ಸಿಕ್ಕಿತು. ಮೊದಲಿಗೆ ಕರೆ ಮಾಡಿದಾಗ ಮನೆ ಮಾಲೀಕ ಮನೆ ಖಾಲಿ ಇದೆ ಎಂದು ಒಂದು ಮನೆ ಪ್ರವೇಶಿಸಲು ದಿನಾಂಕ ನೀಡಿದ್ದರು. ಆ ದಿನದಂದು ಮನೆಗೆ ಪ್ರವೇಶಿಸಲು ಹೇಳಿದ್ದರು. ಆದರೆ ಮನೆಗೆ ಬಂದಾಗ ಬೇರೊಂದು ದಿನಾಂಕ ಕೊಟ್ಟರು. ಮುಂಗಡಕೊಟ್ಟ ಹಣ ವಾಪಸ್ ಕೊಡಲು ನಿರಾಕರಿಸಿದರು. ಆದರೆ ಮನೆಗೆ ಪ್ರವೇಶಿಸುವ ದಿನದಂದು ಬಾಡಿಗೆ ಒಪ್ಪಂದವನ್ನು ಹಸ್ತಾಂತರಿಸುವ ಮೊದಲು, ಮನೆ ಮಾಲೀಕರು ಪೂರ್ಣ ಭದ್ರತಾ ಠೇವಣಿಯನ್ನು (ಸೆಕ್ಯುರಿಟಿ ಡೆಪಾಸಿಟ್) ನೀಡುವಂತೆ ಕೇಳಿದರು. ಬಾಡಿಗೆದಾರರ ಪ್ರಕಾರ ಅವರು ಮಾತುಕತೆ ನಡೆಸಿ ಒಂದು ತಿಂಗಳ ಬಾಡಿಗೆಗೆ ಸಮನಾದ 20,000 ರೂಪಾಯಿಗಳನ್ನು ಪಾವತಿಸಿದ್ದರು. ಅಲ್ಲದೆ ಉಳಿದ ಮೊತ್ತವನ್ನು ಮನೆಗೆ ಪ್ರವೇಶಿಸಿದ ನಂತರ ನೀಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಮನೆ ಮಾಲೀಕರೇ ಹೇಳಿದ್ದ ದಿನಾಂಕಕ್ಕೆ ಮನೆಗೆ ಹೋದರೆ, ಆಗ ಅಲ್ಲಿ ವಾಸವಿದ್ದ ಬಾಡಿಗೆದಾರರು ಮನೆಯನ್ನು ಖಾಲಿ ಮಾಡಿರಲಿಲ್ಲ. ಪ್ರಸ್ತುತ ಮನೆಯಲ್ಲಿರುವವರಿಗೆ ಕೊನೆಯ ಕ್ಷಣದಲ್ಲಿ ಸಮಸ್ಯೆ ಎದುರಾಗಿದ್ದರಿಂದ ಅವರು ಇನ್ನೂ 20 ದಿನಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದರು.

ಈ ವಿಷಯದ ಬಗ್ಗೆ ಮೊದಲೇ ಮನೆ ಮಾಲೀಕ ಹೇಳಬಹುದಿತ್ತು. ಆದರೆ ಮನೆ ವಿಚಾರ ಮಾತನಾಡಿದಾಗಲೂ ಅದರ ಬಗ್ಗೆ ಹೇಳಿರಲಿಲ್ಲ. ಈಗ ಹೇಳಿದರೆ ಏನು ಮಾಡುವುದು. ಅದಕ್ಕಾಗಿ ಮನೆ ಬಾಡಿಗೆದಾರರ ವಿಳಂಬ, ಕಾರಣ ನನಗೆ ಬೇಕಾಗಿಲ್ಲ. ನಾನು ಕೂಡ ತೊಂದರೆಯಲ್ಲಿದ್ದೇನೆ. ಒಂದೋ ಈಗ ಮನೆ ಕೊಡಿ, ಇಲ್ಲ ಮುಂಗಡ ಕೊಟ್ಟಿರೋ ಹಣ ವಾಪಸ್ ಕೊಡಿ, ಬೇರೊಂದು ಮನೆ ಹುಡುಕಿಕೊಳ್ಳುವೆ ಎಂದು ಹೇಳಿದ್ದಾರೆ. ಯಾವಾಗ ಮುಂಗಡ ಹಣ ಕೇಳಿದನೋ ಆಗ ಮನೆ ಮಾಲೀಕ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ

ಹಣ ಮರಳಿ ಪಡೆಯಲು ರೆಡ್ಡಿಟ್ ಯೂಸರ್ಸ್ ನೀಡಿದ ಸಲಹೆಗಳೇನು?

ಬಾಡಿಗೆದಾರರು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರೂ, ಮನೆ ಮಾಲೀಕರು ಈ ಹಣವನ್ನು non-refundable token ಎಂದು ಬಿಂಬಿಸಬಹುದು ಎಂಬ ಭಯ ಅವರಿಗಿತ್ತು. ಅವರ ನಡುವಿನ ಒಪ್ಪಂದವು ಕೇವಲ ಮೌಖಿಕವಾಗಿದ್ದು, ಯಾವುದೇ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲವಾದ್ದರಿಂದ, ಮುಂದೆ ಹೇಗೆ ಮುಂದುವರಿಯಬೇಕು ಎಂಬುದು ಅವರಿಗೆ ಸ್ಪಷ್ಟವಿರಲಿಲ್ಲ. ಅಲ್ಲದೆ, ಮತ್ತೊಂದು ಮನೆಯನ್ನು ಹುಡುಕುವ ಅವಧಿಯಲ್ಲಿ ತಾತ್ಕಾಲಿಕ ವಸತಿಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಚಿಂತೆಯೂ ಅವರಿಗಿತ್ತು. ಇದಕ್ಕೆ ಸಂಬಂಧಿಸಿದಂತೆ ರೆಡ್ಡಿಟ್‌ನ ಹಲವು ಬಳಕೆದಾರರು ತಮ್ಮ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬ ವ್ಯಕ್ತಿಯು ಆ ಬಾಡಿಗೆದಾರರಿಗೆ ಸ್ಥಳೀಯ ಸ್ವಯಂಸೇವಕ ಗುಂಪಿನಿಂದ ಸಹಾಯ ಪಡೆಯುವಂತೆ ಸಲಹೆ ನೀಡುತ್ತಾ,'St Broseph' ಸಬ್‌ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ' ಎಂದು ಬರೆದರು.

ಮತ್ತೊಬ್ಬರು, ಒಂದು ತಿಂಗಳ ಕಾಲ 'ಪೇಯಿಂಗ್ ಗೆಸ್ಟ್' (PG) ವಸತಿಯಲ್ಲಿ ಉಳಿದುಕೊಳ್ಳುವಂತೆಯೂ, ವಿಳಂಬದಿಂದ ಉಂಟಾದ ಹೆಚ್ಚುವರಿ ವೆಚ್ಚಗಳ ಬಗ್ಗೆ ಮನೆಮಾಲೀಕರಿಗೆ ತಿಳಿಸುವಂತೆಯೂ ಸಲಹೆ ನೀಡಿದರು.

ಮತ್ತೊಬ್ಬ ಬಳಕೆದಾರರು ನಗರದಲ್ಲಿನ ಬಾಡಿಗೆ ಪದ್ಧತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, 'ಅಬ್ಬಾ, ಈ ನಗರ ಮತ್ತು ಇದರ ದುರಾಸೆ!' ಎಂದು ಪ್ರತಿಕ್ರಿಯಿಸಿದರು.

ವಕೀಲರೆಂದು ತಮ್ಮನ್ನು ಪರಿಚಯಿಸಿಕೊಂಡ ಒಬ್ಬರು, ಮರುಪಾವತಿ ಮನೆ ಮಾಲೀಕರನ್ನು ಕೇಳಿದ ಲಿಖಿತ ದಾಖಲೆ ಇಟ್ಟುಕೊಳ್ಳುವಂತೆ ಹೇಳಿದರು. ಸಂಕ್ಷಿಪ್ತವಾಗಿ ಸತ್ಯಗಳನ್ನು ವಾಟ್ಸಾಪ್‌ನಲ್ಲಿ ಅವರಿಗೆ ಸಂದೇಶ ಕಳುಹಿಸಿ, ಭದ್ರತಾ ಠೇವಣಿಯ ಮರುಪಾವತಿ ಕೇಳಿ ಯಾವುದೇ ಉತ್ತರವು ಅವರ ಕಡೆಯಿಂದ ಬರದಿದ್ದರೆ ನಿರಾಕರಿಸಿದ್ದರೆ ಅದು ಎವಿಡೆನ್ಸ್ ಆಗಿ ಇಟ್ಟುಕೊಳ್ಳುವಂತೆ ಹೇಳಿದರು. ಬಳಿಕ ನೀವು ವಕೀಲರ ಮೂಲಕ ಲೀಗಲ್ ನೋಟಿಸ್ ಕಳಿಸಬಹುದು. ಇದಕ್ಕಾಗಿ ನಿಮಗೆ ಸುಮಾರು 5 ಸಾವಿರ ವೆಚ್ಚವಾಗಬಹುದು ಎಂದರು.

ಗಮನಿಸಿ: ಈ ಲೇಖನವು ಬಳಕೆದಾರರು ಹಂಚಿಕೊಂಡ ಅನುಭವವನ್ನು ಆಧರಿಸಿದೆ. ಮೂಲ ಪೋಸ್ಟ್‌ನಲ್ಲಿ ಮಾಡಲಾದ ಆರೋಪ, ಸತ್ಯಾಸತ್ಯತೆಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಪರಿಶೀಲಿಸಿಲ್ಲ.