ಬೆಂಗಳೂರು(ಜ. 20)  ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪರವಾಗಿ ಹಮ್ಮಿಕೊಂಡಿದ್ದಮ ಜಾಥಾ ವೇಳೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದರು ಎಂಬ ಆತಂಕಕಾರಿ ಅಂಶ ಬಹಿರಂಗವಾದ ನಂತರ ತೇಜಸ್ವಿ ಸೂರ್ಯ ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಮೇಲಾಧಿಕಾರಿಗಳ ಆದೇಶ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಜಾಥಾದ ಬಳಿಕ ಕಾರ್ಯಕರ್ತ ವರುಣ್ ಎಂಬಾತನಿಗೆ ಚಾಕು ಇರಿತವಾಗಿತ್ತು. ಎಲ್ಲವನ್ನು ಕೋಡ್ ವರ್ಡ್ ನಲ್ಲೇ ಆರೋಪಿಗಳು ಆಪರೇಟ್ ಮಾಡಿದ್ದರು ಎಂಬ ಅಂಶವೂ ಬಯಲಾಗಿತ್ತು.

ಹಿಂದೂ ಮುಖಂಡರ ಹತ್ಯೆ ಗೆ ಮಾಡಿದ್ದ ಸ್ಕೆಚ್ ಹೀಗಿತ್ತು!

ಘಟನೆಯ ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ತನಿಖೆ ಮುಂದುವರಿಯಲಿದ್ದು ತಮ್ಮ ವಶಕ್ಕೆ ಇನ್ನು ಕೆಲವು ದಿನ ಆರೋಪಿಗಳನ್ನು ನೀಡಲು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

1) ತನ್ಜೀಮ್ :  ಗುಪ್ತ ಸಭೆ ಸೇರುವುದು  ಅರೋಪಿಗಳು ಮೂರು ತನ್ಜೀಮ್ ನಡೆಸಿದ್ರು ಕೃತ್ಯಕ್ಕೂ ಮೊದಲು 

2) ಅಮೀರ್: ಕೃತ್ಯದ ನಾಯಕ, ವರುಣ್ ಹಲ್ಲೆ ಕೇಸ್ ನಲ್ಲಿ ಇರ್ಫಾನ್ ಅಮೀರ್ ಅಗಿದ್ದ 

3) ಹಲಾಲ್ ಕಟ್: ವ್ಯಕ್ತಿಯ ಕುತ್ತಿಗೆಯನ್ನು ಮುಂಬದಿಯಿಂದ  ಹೊಡೆಯುವುದು 

4) ಬಿಲಾಲ್ ಕಟ್ : ವ್ಯಕ್ತಿಯ ಹಿಂಬದಿಯಿಂದ ಬಂದು ಕುತ್ತಿಗೆಯ ಹಿಂಭಾಗಕ್ಕೆ ಹೊಡೆಯುವುದು , ವರುಣ್ ಗೆ ಇದೇ ಮಾದರಿಯಲ್ಲಿ ಹಲ್ಲೆ ನಡೆಸಲಾಗಿದೆ
 
5) ಮುರುಗಿ ಕಟ್ ಅಥವ ರನ್ನಿಂಗ್ ಶಾಟ್ :  ವ್ಯಕ್ತಿ  ಚಲಿಸುತ್ತಿರುವಾಗ  ಕುತ್ತಿಗೆಯ ಒಂದು ಸೈಡ್ ಗೆ ಹೊಡೆಯುವುದು

6) ಪಂಚರ್ ಶಾಟ್ :  ಡ್ಯಾಗರ್ ಅಥವಾ ಚೂಪಾದ ಚೂರಿಯಿಂದ  ಹೃದಯ ಮತ್ತು ಲಿವರ್ ಗೆ ಮಾತ್ರ ಚುಚ್ಚುವುದು.