ಕೆಲಸ ಮುಗಿಸಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ರಾಮಮೂರ್ತಿನಗರದಲ್ಲಿ ಸ್ಕೂಟಿಯಲ್ಲಿ ಬಂದ ಕಾಮುಕನೊಬ್ಬ 'ನಿನ್ನ ರೇಟ್ ಎಷ್ಟು?' ಎಂದು ಕೇಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ವಿಡಿಯೋ ಮಾಡಲು ಮುಂದಾದಾಗ ಪರಾರಿ. ಈ ಘಟನೆ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದೆ.
ಬೆಂಗಳೂರು (ಜು.28): ಸಿಲಿಕಾನ್ ಸಿಟಿಯಲ್ಲಿ ಪುಂಡುಪೋಕರಿಗಳ ಅಟ್ಟಹಾಸ ಮಿತಿಮೀರಿದೆ. ರಾತ್ರಿ ಹೊತ್ತು ಮಹಿಳೆ ಹೊರಗೆ ಓಡಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರು ಜೀವ ಕೈಯಲ್ಲಿಡಿದು, ಕಾಮುಕರ ಕಣ್ತಪ್ಪಿಸಿ ಆತಂಕದಲ್ಲೆ ಮನೆಗೆ ಹಿಂದಿರುಗುವಂತಾಗಿದೆ. ಈ ಆಘಾತಕಾರಿ ಘಟನೆಯಿಂದಾಗಿ ಬೆಂಗಳೂರಿನ ಪೊಲೀಸರ ಕ್ರಮ ಕೇವಲ ಹೇಳಿಕೆಯಲ್ಲೇ ಉಳಿಯಿತಾ? ಎಂಬ ಪ್ರಶ್ನೆ ಎದ್ದಿದೆ.
ಎಷ್ಟು ನಿನ್ನ ರೇಟ್? ಯುವತಿಗೆ ನಡುರಸ್ತೆಯಲ್ಲೇ ಕಾಮುಕನ ಕಿರುಕುಳ
ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಮಹಿಳೆಯೊಬ್ಬರು ರಾತ್ರಿ ಕ್ಯಾಬ್ ಬುಕ್ ಮಾಡಿ ರಸ್ತೆ ಬದಿ ಕಾಯುತ್ತಿದ್ದರು. ಈ ವೇಳೆ ಯುವತಿ ಬಳಿಗೆ ಬಂದಿರುವ ಕಾಮುಕ ವ್ಯಕ್ತಿಯೊಬ್ಬ 'ಎಷ್ಟು ನಿನ್ನ ರೇಟ್?' ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಈ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದ್ದು, ವ್ಯಕ್ತಿಯ ವರ್ತನೆಗೆ ಯುವತಿ ಆಘಾತಗೊಂಡಿದ್ದಾಳೆ.
ಪೊಲೀಸರಿಗೆ ದೂರು ನೀಡ್ತಿನಿ ಅಂದ್ರೂ ಭಯ ಇಲ್ಲ!
ವಿಡಿಯೋ ಕಾಣಿಸಿರುವಂತೆ ಸ್ಕೂಟಿ ಮೇಲೆ ಬಂದಿರುವ ವ್ಯಕ್ತಿ. ಯುವತಿ ನಿಂತಿರುವ ಜಾಗಕ್ಕೆ ಬಂದು ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾನೆ. ಇದಕ್ಕೆ ಯುವತಿ ಆಘಾತ, ಭಯದಲ್ಲೇ ಪೊಲೀಸರಿಗೆ ದೂರು ಕೊಡ್ತೇನೆ ಅಂದ್ರೂ ಹೆದರದ ಕಾಮುಕ ಮತ್ತೆ ಅದೇ ಅಸಭ್ಯವಾಗಿ ವರ್ತಿಸಿದ್ದಾನೆ. ಕೊನೆಗೆ ಯುವತಿ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಲು ಮುಂದಾದಾಗ ಸ್ಥಳದಿಂದ ಕಾಮುಕ ಕಾಲ್ಕಿತ್ತಿದ್ದಾನೆ.
ದಯವಿಟ್ಟು ಕ್ರಮ ತಗೊಳ್ಳಿ: ಬೆಂಗಳೂರು ಪೊಲೀಸರಿಗೆ ಯುವತಿ ಮನವಿ
ಈ ಆಘಾತಕಾರಿ ಘಟನೆಯ ವಿಡಿಯೋ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಯುವತಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ. 'ಸ್ಕೂಟರ್‌ನಲ್ಲಿ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ, ದಯವಿಟ್ಟು ವಿಡಿಯೋ ಆಧರಿಸಿ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಿದ್ದಾಳೆ.
ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ವಾ? ರಸ್ತೆಯಲ್ಲಿ ಮಹಿಳೆಯರು ಒಬ್ಬರೇ ನಿಂತರೆ ಆ ರೀತಿ ಅಸಭ್ಯವಾಗಿ ವರ್ತಿಸುವುದೇಕೆ? ಒಂದು ವೇಳೆ ನಿರ್ಜನ ಸ್ಥಳವಾದರೆ ಮಹಿಳೆಯರ ಜೀವಕ್ಕೆ ಅದೆಷ್ಟು ಅಪಾಯಕಾರಿಯಾಗಬಹುದು ಎಂದು ಯೋಚಿಸಿ! ನಿಮಗೆ ಇಂಥ ಅನುಭವಗಳ ಆಗಿವೆಯೇ? ಕಾಮೆಂಟ್‌ನಲ್ಲಿ ತಿಳಿಸಿ


