ಜೂನ್ 25 ಮತ್ತು 26 ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಿರ್ವಹಣಾ ಕಾಮಗಾರಿಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ ನಿವಾಸಿಗಳಿಗೆ ಮುಂಚಿತವಾಗಿ ತಯಾರಿ ನಡೆಸಲು ಸೂಚಿಸಿದೆ.

ಬೆಂಗಳೂರು (ಜೂ.25): ನಗರದ ಹಲವು ಬಡಾವಣೆಗಳಲ್ಲಿ ಇಂದು (ಜೂನ್ 25) ಮತ್ತು ನಾಳೆ (ಜೂನ್ 26) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಈ ವ್ಯತ್ಯಯ ಉಂಟಾಗಲಿದ್ದು, ನಿವಾಸಿಗಳು ಮುಂಚಿತವಾಗಿ ತಯಾರಿ ನಡೆಸಿಕೊಳ್ಳಲು ಸೂಚಿಸಲಾಗಿದೆ.

ಬುಧವಾರ ಎಲ್ಲೆಲ್ಲಿ ವ್ಯತ್ಯಯ?

ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ, 66/11 ಕೆ.ವಿ ಪೂರ್ವಾಂಕರ ಪಾಮ್ ಬೀಚ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕೆಲಸದಿಂದಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.

ಹಳೆಹಳ್ಳಿ, ಮಾರ್ಗೊಂಡನಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್,ವಿದ್ಯಾನಗರ, ಕೆ.ಆರ್.ಸಿ ಬಸ್ ನಿಲ್ದಾಣ, ಬೈರತಿ, ಗುಬ್ಬಿ ಅಡ್ಡ ರಸ್ತೆ, ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪೂರ್ವಾಂಕರ ಅಪಾರ್ಟ್‌ಮೆಂಟ್, ಕಲ್ಕೇರೆ ರೋಡ್, ಪೂರ್ಣ ಪ್ರಜ್ಞಾ, ಗವಿಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದೇ ರೀತಿ, 66/11 ಕೆ.ವಿ ಶೋಭಾ ಇಂದ್ರಪ್ರಸ್ಥ ಸ್ಟೇಷನ್‌ನಲ್ಲಿ ನಡೆಯುವ ತುರ್ತು ನಿರ್ವಹಣೆಯಿಂದ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಮ್.ಎಪ್, ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಾಣೆ, ಬೆಂಗಳೂರು ಡ್ಯೆರಿ, ಫೋರಾಮ್, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾಡ್ðನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಯಾನ್ಸ್ ಅಡ್ಮಿನಿಸ್ರೆಟಿವ್ ಬ್ಲಾಕ್ ಬಂಡೆ ಸ್ಲಮ್, ಸುಣ್ಣದಕಲ್ಲು, ಬೃಂದವನ ಸ್ಲಮ್, ಲಾಲ್ ಜಿ ನಗರ, ಶಾಮಣ್ಣ ಗಾರ್ಡ್‌ನ್‌, ಎನ್ ಡಿ ರ್ ಐ, ಪೋಲಿಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲ ಪ್ರದೇಶಗಳು, ರಿಚ್ ಮಂಡ್ ಟೌನ್, ರಿಚ್ ಮಂಡ್ ಸರ್ಕಲ್‌, ಜಾನ್ಸನ್ ಮಾರ್ಕ್‌, ನಾರೀಸ್ ರಸ್ತೇ, ಅರಬ್ ಲ್ಯೇನ್, ವೆಲ್ಂಗ್ಟನ್ ಸ್ಡೀಟ್ ಕರ್ಲಿ ಸ್ಡೀಟ್, ಲಿಯೋನಾಡ್ð ಸ್ಡೀಟ್, ರಿನಿಯಸ್ ಸ್ಡೀಟ್

ಗುರುವಾರದ ಎಲ್ಲೆಲ್ಲಿ ವ್ಯತ್ಯಯ?

ಗುರುವಾರ (ಜೂನ್ 26) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿ.ಎಂ.ಟಿ.ಸಿ ಉಪಕೇಂದ್ರದ ನಿರ್ವಹಣಾ ಕಾಮಗಾರಿಯಿಂದಾಗಿ ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ರಿಚ್‌ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್, ಸುದಾಮನಗರ, ಕೆ.ಎಚ್. ರಸ್ತೆ, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಈ ನಿರ್ವಹಣಾ ಕಾಮಗಾರಿಗಳು ವಿದ್ಯುತ್ ವ್ಯವಸ್ಥೆಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಲು ಅಗತ್ಯವಾಗಿವೆ. ನಾಗರಿಕರು ಈ ಅವಧಿಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಸಹಕರಿಸುವಂತೆ ಕೋರಲಾಗಿದೆ.