ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಆರ್.ಆರ್. ನಗರ ಹಾಗೂ ಬನಶಂಕರಿ ವಿಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು (ಫೆ.7): ಸಿಲಿಕಾನ್ ಸಿಟಿಯ ಈ ಭಾಗದ ಜನತೆಗೆ ಇಂದು ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ, ನಗರದ ಪ್ರಮುಖ ನಾಲ್ಕು ವಿಭಾಗಗಳಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ರಾಜಾಜಿನಗರ, ಮಲ್ಲೇಶ್ವರಂ, ಆರ್.ಆರ್. ನಗರ ಹಾಗೂ ಬನಶಂಕರಿ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಪವರ್ ಆಫ್
ಇಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ವಿಶೇಷವಾಗಿ ರಾಜಾಜಿನಗರದ ವಿಜಯನಗರ ಉಪಕೇಂದ್ರ, ಮಲ್ಲೇಶ್ವರಂನ ಆರ್.ಎಂ.ವಿ ಉಪಕೇಂದ್ರ ಹಾಗೂ ಬನಶಂಕರಿ ಮತ್ತು ಆರ್.ಆರ್. ನಗರದ 66/11 ಕೆ.ವಿ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ.
ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ?
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಬಡಾವಣೆಗಳ ಪಟ್ಟಿ ಇಲ್ಲಿದೆ:
ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿ ಪಾಳ್ಯ ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ,
ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆ,
ಮೊದಲ ಹಂತ ತಿಮ್ಮೇನಹಳ್ಳಿ, ಎಂಸಿ ಲೇಔಟ್‌ನ ಒಂದು ಭಾಗ, ಬಿನ್ನಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್‌ನ ಒಂದು ಭಾಗ,
ಪಿಸಿ ಕೈಗಾರಿಕಾ ಪ್ರದೇಶ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್, ಸೆಲ್ವಂ ಕೈಗಾರಿಕಾ ಎಸ್ಟೇಟ್,
ಬಲ್ಲಾಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11ನೇ ಬ್ಲಾಕ್,
ಕೆಎಚ್‌ಬಿ ಕಾಲೋನಿ, ಎಚ್‌ವಿಆರ್ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ,
ಪಾಪಯ್ಯ ಗಾರ್ಡನ್ ಕೆಎಚ್‌ಬಿ ಕಾಲೋನಿ, ಕೆಎಚ್‌ಬಿ ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸಾರಹಳ್ಳಿ,
ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್ಆರ್ ನಗರ, ಬಿಇಎಲ್ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್,
ಬಿಇಎಲ್ ರಸ್ತೆ, ಎಂಎಸ್ಆರ್ ನಗರ, ಸೀನಪ್ಪ ಲೇಔಟ್, ಬಿಇಎಲ್ ರಸ್ತೆ, ಇಸ್ರೋ, ಬಿಇಎಲ್ ರಸ್ತೆ, ಚಿಕ್ಕಮಾರನಹಳ್ಳಿ,
ಭರತ್ ಲೇಔಟ್, ಪಟಾಲಮ್ಮ ದೇವಸ್ಥಾನ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್,
ವಡ್ಡರಪಾಳ್ಯ ಏರಿಯಾ, ಬನಶಂಕರಿ 5ನೇ ಹಂತ, ಪರ‍್ಣ ಪ್ರಜ್ಞಾ ಲೇಔಟ್, ಮಂತ್ರಿ ಆಲ್ಫೈನ್ಸ್, ದ್ವಾರಕ ನಗರ, ಬನಶಂಕರಿ 6ನೇಹಂತ, 80ಫೀಟ್ ರೋಡ್,
ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜ್, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ,
ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್, 100 ಫೀಟ್ ರಿಂಗ್ ರಸ್ತೆ,
ಕಾಮಾಕ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸಾರ್ವಜನಿಕರಿಗೆ ಬೆಸ್ಕಾಂ ಮನವಿ: ಕೆಲಸಗಳಿಗೆ ಪ್ಲ್ಯಾನ್ ಮಾಡಿಕೊಳ್ಳಿ
ನಿರ್ವಹಣಾ ಕಾಮಗಾರಿ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ. ವಿಶೇಷವಾಗಿ ಕೈಗಾರಿಕಾ ಪ್ರದೇಶಗಳಾದ ಬಲ್ಲಾಯನ ಕೆರೆ ಮತ್ತು ಕಾವೇರಿಪುರ ಭಾಗಗಳಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಮನೆಯಿಂದ ಕೆಲಸ ಮಾಡುವವರು (WFH) ಮತ್ತು ಆಸ್ಪತ್ರೆಗಳು ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಸಂಜೆ 5 ಗಂಟೆಯ ನಂತರ ಹಂತಹಂತವಾಗಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆಯಾಗಲಿದೆ.



