ಬೆಂಗಳೂರು: ಚಿನ್ನದ ಸರ ವಾಪಸ್ ಕೊಟ್ಟ ಪ್ರಾಮಾಣಿಕ ಆಟೋ ಚಾಲಕ
ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಆಟೋ ಚಾಲಕನೊಬ್ಬ ವಾಪಸ್ ಕೊಟ್ಟಿದ್ದಾರೆ. ತಳಿರು ಸಂಸ್ಥೆಯ ಮುಖ್ಯಸ್ಥೆ ಚಿತ್ರಾ ಅವರು ಮನೆಗೆ ಹೋಗುವಾಗ ಸರ ಕಳೆದುಕೊಂಡಿದ್ದರು, ಆದರೆ ಚಾಲಕ ಗಿರೀಶ್ ಅವರ ಮನೆ ಹುಡುಕಿ ಸರವನ್ನು ಹಿಂದಿರುಗಿಸಿದ್ದಾರೆ.
ಬೆಂಗಳೂರು (ಅ.28): ಬೆಂಗಳೂರಿನಲ್ಲಿ ಮಹಿಳೆಯರಿಗೆ ಆಟೋ ಚಾಲನೆ ಹೇಳಿಕೊಡುವ ತಳಿರು ಸಂಸ್ಥೆ ಮುಖ್ಯಸ್ಥೆ ಚಿತ್ರಾ ಅವರು ನಿನ್ನೆ ಆಟೋದಲ್ಲಿ ಮನೆಗೆ ಹೋಗುವಾಗ ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಚಿನ್ನದ ಸರವನ್ನು ಆಟೋ ಚಾಲಕ ಪುನಃ ಮಹಿಳೆಯ ಮನೆಯನ್ನು ಹುಡುಕಿಕೊಂಡು ಹೋಗಿ ವಾಪಸ್ ಕೊಟ್ಟಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚಿತ್ರಾ ಅವರು ನಿನ್ನೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಅವರ ಮನೆಗೆ ಹೋಗುವಾಗ ಆಟೋದಲ್ಲಿ ಹೋಗಿದ್ದಾರೆ. ಆದರೆ, ಅವರು ಮನೆಗೆ ಹೋದಾಗ ಚಿನ್ನದ ಸರ ಕಳೆದು ಹೋಗಿದೆ ಎಂಬುದು ಗೊತ್ತಾಗಿದೆ. ಎಲ್ಲಿ ಸರ ಬಿದ್ದಿದೆ ಎಂಬುದರ ಅರಿವೇ ಅವರಿಗೆ ಇರುವುದಿಲ್ಲ. ಇನ್ನೇನು ನನ್ನ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳೆದು ಹೋಯಿತು ಎಂದು ಅದರ ಮೇಲಿನ ಆಸೆಯನ್ನೇ ಬಿಟ್ಟುಬಿಟ್ಟಿದ್ದರು.
ಮನೆಯವರೆಲ್ಲರೂ ಚಿನ್ನದ ಸರ ಕಳೆದುಕೊಂಡ ದುಃಖದಲ್ಲಿದ್ದಾಗ ಮನೆಯ ಬಾಗಿಲ ಡೋರ್ ಬೆಲ್ ರಿಂಗ್ ಆಗಿದೆ. ಆಗ ಬಾಗಿಲು ತೆರೆದು ನೋಡಿದಾಗ ಆಟೋ ಡ್ರೈವರ್ ಮನೆ ಬಾಗಿಲಲ್ಲಿ ನಿಂತಿದ್ದಾರೆ. ಅವರನ್ನು ಮನೆಯ ಒಳಗೆ ಕರೆದು ಮಾತನಾಡಿಸಿದಾಗ ಅವರು ನಿಮ್ಮ ಚಿನ್ನದ ಸರ ಸಿಕ್ಕಿದೆ ಎಂದು ಮಹಿಳೆಗೆ ಒಪ್ಪಿಸಿದ್ದಾರೆ. ಇದರಿಂದ ತೀವ್ರ ಸಂತಸಗೊಂಡ ಮಹಿಳೆ ಅವರಿಗೆ ಧನ್ಯವಾದ ಹೇಳಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಎಲ್ಲಿ ಬಿದ್ದಿದೆ ಎಂಬುದೇ ತಿಳಿಯದೇ ಮನೆಯವರೆಲ್ಲರೂ ನೊಂದುಕೊಂಡಿದ್ದೆವು. ನೀವು ಆ ಚಿನ್ನದ ಸರ ತಂದುಕೊಟ್ಟು ನಮ್ಮ ದುಡಿಮೆಯ ಶ್ರಮವನ್ನು ಹಾಗೂ ನಾವು ಮಾಡಿದ ಒಳ್ಳೆಯ ಕಾರ್ಯದಿಂದ ನಮಗೆ ಒಳಿತೇ ಆಗಲಿದೆ ಎಂಬುದನ್ನು ಸಾಬೀತು ಮಾಡಿದ್ದೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳ 7,045 ಗುತ್ತಿಗೆ ನೌಕರರ ಸೇವೆ 2025ರವರೆಗೆ ವಿಸ್ತರಣೆ: ಹೆಚ್.ಕೆ. ಪಾಟೀಲ
ಈ ವಿಡಿಯೋವನ್ನು ಮೀಟರ್ಡ್ ಆಟೋ (Nagara Metered Auto @NagaraAuto) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಿರೀಶ್ ತನ್ನ ಆಟೋದಲ್ಲಿ ಸಿಕ್ಕ ಚಿನ್ನದ ಸರವನ್ನು ಹಿಂತಿರುಗಿಸಲು ಚಿತ್ರಾ ಅವರ ಮನೆಗೆ ಬಂದರು. ಅಂದು ಫೇರ್ ಮೀಟರ್ ಆಟೋದಲ್ಲಿ ಚಿತ್ರಾ ಅವರು ಮನೆಗೆ ಹೋಗಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಬಂದು ಮನೆಗೆ ಹಿಂದಿರುಗುವಾಗ ಸರವನ್ನು ಎಲ್ಲಿ ಕಳೆದುಕೊಂಡಳು ಎಂದು ಚಿತ್ರಾಗೆ ತಿಳಿದಿರಲಿಲ್ಲ. ವಾಸ್ತವವಾಗಿ ಆ ಸರ ನನ್ನದಲ್ಲ ಎಂದು ಸುಮ್ಮನಾಗಿಬಿಟ್ಟಿದ್ದರು. ಆದರೆ, ಆ ಸರವನ್ನು ಮೀಟರ್ ಆಟೋದ ಚಾಲಕ ಗಿರೀಶ್ ಮನೆಗೆ ತಂದುಕೊಟ್ಟಿದ್ದಾರೆ. ಈ ಮೂಲಕ ಗಿರೀಶ್ ಪ್ರಾಮಾಣಿಕತೆ ಎಲ್ಲರಿಗೂ ಮಾದರಿ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಚಿತ್ರಾಳ ಮನೆ ಹುಡುಕಲು ಸಹಾಯ ಮಾಡಿದ ನಗರ ಮೀಟರ್ ಆಟೋ: ಮುಂದುವರೆದು, ಸ್ಟ್ರೀಟ್ ಹೈಲ್ಡ್ ನಗರ ಮೀಟರ್ ಆಟೋಗಳ ಚಾಲಕರು ಗ್ರಾಹಕರ ಭರವಸೆಗಾಗಿ ಅವರ ಫೋನ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ಗ್ರಾಹಕರು ಮರೆತುಹೋದ ಅಥವಾ ಕಳೆದುಹೋದ ವಸ್ತುಗಳಂತಹ ಘಟನೆಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ಇದು ಚಾಲಕರಿಗೆ ಸಹಾಯ ಮಾಡುತ್ತದೆ. ಇದೇ ರೀತಿ ಗ್ರಾಹಕರ ಫೋನ್ ನಂಬರ್ ಪಡೆದು ಆಟೋದಲ್ಲಿ ಮನೆಗೆ ಕರೆದೊಯ್ದಿದ್ದ ಚಾಲಕ ಗಿರೀಶ್ ಇದೀಗ ತಮ್ಮ ಆಟೋದಲ್ಲಿ ಸಿಕ್ಕ ಚಿನ್ನದ ಸರವನ್ನು ವಾಪಸ್ ಕೊಟ್ಟು ಆಟೋ ಚಾಲಕರ ಗುಂಪಿನ ಹೀರೋ ಆಗಿದ್ದಾರೆ. ಇನ್ನು ಇತ್ರಾ ಅವರು, ಮಹಿಳೆಯರಿಗೆ ಆಟೋರಿಕ್ಷಾ ಡ್ರೈವಿಂಗ್ ತರಬೇತಿ ನೀಡುವ ತಳಿರು ಫೌಂಡೇಶನ್ ಮುಖ್ಯಸ್ಥೆ ಆಗಿದ್ದಾರೆ. ಬಹುಶಃ ಅವಳ ಒಳ್ಳೆಯ ಕೆಲಸವು ಅವರ ಸರವನ್ನು ಮರಳಿ ಸಿಗುವಂತೆ ಮಾಡಿದೆ ಎಂದು ಎಕ್ಸ್ ಖಾತೆದಾರರು ಬರೆದುಕೊಂದಿದ್ದಾರೆ.
ಇದನ್ನೂ ಓದಿ: ಲಕಲಕ ರೀಲ್ಸ್ ರಾಣಿಯ ಐಷಾರಾಮಿ ಜೀವನದ ರಹಸ್ಯ ಬಯಲು, ಎಲ್ಲಿಂದ ಬಂತು ಇನ್‌ಕಮ್?
ವಿಡಿಯೋ ಹಂಚಿಕೊಂಡಿರುವ ಚಿತ್ರಾ ಅವರು, 'ನಾನು ಚಿತ್ರಾ ಮಾತನಾಡುತ್ತಿರುವುದು ತಳಿರು ಫೌಂಡೇಶನ್ ಸಂಸ್ಥಾಪಕಿ. ನಾವು ನಮ್ಮ ಸಂಸ್ಥೆಯಿಂದ ಮಹಿಳೆಯರಿಗೆ ಆಟೋ ಡ್ರೈವಿಂಗ್ ಹೇಳಿಕೊಡ್ತೇವೆ. ಇವರು ಗಿರೀಶ್ ಅಂತಾ, ನಾನು ಆಟೋದಲ್ಲಿ ಮನೆಗೆ ಬರುವಾಗ ಚಿನ್ನದ ಸರವನ್ನು ಬೀಳಿಸಿಕೊಂಡಿದ್ದೆನು. ಎಲ್ಲಿ ಬಿದ್ದಿದೆ ಎಂಬ ಮಾಹಿತಿಯೂ ಇರಲಿಲ್ಲ. ನನ್ನ ಚಿನ್ನದ ಸರ ಹೋಯ್ತಲ್ಲಾ ಎಂದು ತುಂಬಾ ಬೇಜಾರಾಗಿತ್ತು. ಆದರೆ, ಇದಾದ ನಂತರ ಸಂಜೆ ವೇಳೆ ಆಟೋ ಚಾಲಕ ಗಿರೀಶ್ ಅವರು ನನ್ನ ಮನೆಯನ್ನು ಹುಡುಕಿಕೊಂಡು ಬಂದು ನನ್ನ ಚಿನ್ನದ ಸರವನ್ನು ವಾಪಸ್ ಕೊಟ್ಟಿದ್ದಾರೆ. ತುಂಬಾ ಧನ್ಯವಾದಗಳು ಸರ್. ನಿಮ್ಮಂತಹ ಪ್ರಾಮಾಣಿಕ ಆಟೋ ಡ್ರೈವರ್‌ಗಳು ಇರುವುದೇ ಕಡಿಮೆ. ನೀವು ಎಲ್ಲ ಆಟೋ ಡ್ರೈವರ್‌ಗಳಿಗೆ ಮಾದರಿ ಆಗಿದ್ದೀರಿ' ಎಂದು ಹೇಳಿದ್ದಾರೆ.