Asianet Suvarna News Asianet Suvarna News

ಶಾಸಕರಿಗೆ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್‌ ಸಿಬ್ಬಂದಿ ಅವಾಜ್: ನಿಮ್ಮನ್ನ ಹೈವೆಯಲ್ಲಿ ಬಿಟ್ಟಿಯಾಗಿ ಬಿಡ್ತೀವಿ

ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಕಾರನ್ನು ತಡೆದ ಟೋಲ್‌ ಸಿಬ್ಬಂದಿ, ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡ್ತೀವಿ. ನಾವು ಕಳಿಸಿದಾಗ ಹೋಗಬೇಕು, ಎಂದು ಅವಾಜ್‌ ಹಾಕಿದ್ದಾರೆ. 

Bengaluru Mysore Expressway toll staff raised the voice of Malavalli MLA Narendraswamy sat
Author
First Published Jun 6, 2023, 4:00 PM IST

ಬೆಂಗಳೂರು (ಜೂ.06): ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್‌ ಪ್ಲಾಜಾದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ತಡೆದ ಟೋಲ್‌ ಸಿಬ್ಬಂದಿ, ನಿಮಗೆ ಹೈವೆಯಲ್ಲಿ ಹೋಗೋದಕ್ಕೆ ಬಿಟ್ಟಿಯಾಗಿ ಬಿಡ್ತೀವಿ.  ನಾವು ಕಳಿಸಿದಾಗ ಹೋಗಬೇಕು, ಎಂದು ಅವಾಜ್‌ ಹಾಕಿದ್ದಾರೆ. 

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ಶಾಸಕರು, ಸಚಿವರು, ಸಂಸದರು ಹಾಗೂ ಕೆಲವು ಜನಪ್ರತಿನಿಧಿಗಳಿಗೆ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವಿದೆ. ಆದರೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ಬೆಂಗಳೂರಿನಿಂದ ಮಳವಳ್ಳಿಗೆ ಹೋಗುವಾಗ ಬೆಂಗಳೂರು ಹೊರವಲಯದ ಕುಂಬಳಗೋಡು ಬಳಿಯ ಕಣಮಿಣಿಕಿ ಟೋಲ್‌ ದಾಟಿ ಹೋಗುವ ಮುನ್ನ ಶಾಸಕರ ಪಾಸ್‌ ಕೂಡ ತೋರಿಸಲಾಗಿದೆ. ಆದರೂ, ನಿಮ್ಮನ್ನ ಬಿಟ್ಟಿಯಾಗಿ ಹೈವೇಯಲ್ಲಿ ಹೋಗೋಕೆ ಬಿಡ್ತೀವಿ ನಾವು ಅನುಮತಿ ಕೊಟ್ಟಾಗಲೇ ನೀವು ಟೋಲ್‌ ದಾಟಿ ಹೋಗಬೇಕು ಎಂದು ಶಾಸಕರಿಗೆ ಅವಾಜ್‌ ಹಾಕಿದ್ದಾನೆ.

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಐವರಿಗೆ ಗಂಭೀರ ಗಾಯ

ಪಾಸ್‌ ಇದ್ದರೂ ಶಾಸಕರ ಕಾರು ತಡೆದು ನಿಲ್ಲಿಸಿದ ಸಿಬ್ಬಂದಿ:
ಬೆಂಗಳೂರು- ದಶಪಥ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿಗಳ‌ ಕಿರಿಕ್ ಹೆಚ್ಚಾಗುತ್ತಿದೆ. ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವೇಳೆ ಜನಸಾಮಾನ್ಯರ ಜೊತೆಗೆ ಮಾತ್ರವಲ್ಲದೇ ಈಗ ಶಾಸಕರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೊತೆ ಭಾನುವಾರ ಸಂಜೆ ಟೋಲ್ ಸಿಬ್ಬಂದಿ ಕ್ಯಾತೆ ತೆಗೆದು ಶಾಸಕರಿಗೇ ಅವಾಜ್‌ ಹಾಕಿದ್ದಾರೆ. ಬೆಂಗಳೂರಿನಿಂದ ಮಳವಳ್ಳಿ ಕಡೆ ಹೋಗ್ತಿದ್ದ ಶಾಸಕ ನರೇಂದ್ರ ಸ್ವಾಮಿಗೆ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ಶಾಸಕರ ವಾಹನ ಪಾಸ್ ಇದ್ರೂ, ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿಗೆ ಶಾಸಕರು ಪ್ರಶ್ನೆ ಮಾಡಿದ್ದಾರೆ.

ನಾನು ನೋಡದ ಪೊಲೀಸಾ, ಯಾರು ಬರ್ತಾರೋ ಬರಲಿ:
ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೋಲಿಸರು ಬರಲಿ ಎಂದ ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಕ್ಕೆ ಯಾವ ಪೋಲಿಸರು ಬೇಕಾದರೆ ಬರಲಿ, ನಾನು ನೋಡಿರದ ಪೋಲಿಸಾ ಎಂದು ಏಕವಚನದಲ್ಲೇ ಟೋಲ್ ಸಿಬ್ಬಂದಿ ಶಾಸಕರಿಗೆ ಅವಾಜ್‌ ಹಾಕಿದ್ದಾರೆ. ನಿಮ್ಮನ್ನ ಹೈವೆಯಲ್ಲಿ ಬಿಟ್ಟಿ, ಫ್ರೀಯಾಗಿ ಬಿಡ್ತಾ ಇದ್ದೀವಿ ಎಂದು ನೀವೂ ಬಂದ್ವಾ ಹೋದ್ವಾ ಅನ್ನೋದನ್ನು ಕಲೀಬೇಕು ಎಂದು ಶಾಸಕರಿಗೆ ಏರು ಧ್ವನಿಯಲ್ಲೇ ಟೋಲ್ ಸಿಬ್ಬಂದಿ ಅವಾಜ್ ಹಾಕಿದ್ದಾನೆ. ಜೊತೆಗೆ, ಟೋಲ್‌ ಸಿಬ್ಬಂದಿ ಶಾಸಕರಿಗೆ ಕೈ ತೋರಿಸುತ್ತಾ ಶಾಸಕ ನರೇಂದ್ರ ಸ್ವಾಮಿ ಜೊತೆ ಅನುಚಿತ ವರ್ತನೆ ತೋರಿದ್ದಾನೆ. 

ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮಂಡ್ಯ (ಜೂ.05): ಕರ್ನಾಟಕದ ಎಕ್ಸ್ಪ್ರೆಸ್‌ವೇ ಎಂದು ಕರೆಯಲಾಗುವುದು ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿನ ಟೈರ್‌ ಬ್ಲಾಸ್ಟ್‌ ಆಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನ ಟೈರ್‌ ಸ್ಫೋಟಗೊಂಡಿದ್ದರಿಂದ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ಸಂಜೆ ವೇಳೆ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಿಂದ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಟೈರ್ ಬಸ್ಟ್ ಆಗಿ ಪಲ್ಟಿ ಹೊಡೆದ ಕಾರು ಸುಮಾರು 100 ಮೀಟರ್‌ನಷ್ಟು ಉರುಳಿಕೊಂಡು ಹೋಗಿದೆ. ಈ ಘಟನೆಯು ಮಂಡ್ಯ ನಗರದ ಬಳಿಯ ಚಿಕ್ಕಮಂಡ್ಯದ ದಶಪಥ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದ್ದು, ಅಪಘಾತಕ್ಕೀಡಾದ ವಾಹನದ ಮುಂದೆ ವಾಹನಗಳು ಇಲ್ಲದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಲಾರದಲ್ಲಿ ಆತ್ಮಹತ್ಯೆ: ಕಾಲೇಜಿನಲ್ಲಿ ಕಿರುಕುಳ ಆರೋಪ

ಪಲ್ಟಿಯಾಗಿ 100 ಮೀ. ಉರುಳಿದ ಕಾರು: ವೇಗವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಟೈರ್‌ ಬ್ಲಾಸ್ಟ್‌ ಆದ ತಕ್ಷಣವೇ ಕಾರು ಎರಡು ಬಾರಿ ಪಲ್ಟಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಐವರಿಗೂ ಗಾಯವಾಗಿದೆ. ಆದರೆ, ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿಗಳನ್ನು ಶ್ರೀಕಾಂತ್, ಕೃಷ್ಣನ್, ಮಂಜುನಾಥ್, ಅರ್ಜುನ್, ಮೂರ್ತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. 

Follow Us:
Download App:
  • android
  • ios