ಬೆಂಗಳೂರು, (ಮೇ.25): ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿಢೀರನೆ ಹೆಚ್ಚಿದರೂ, ನಂತರದಲ್ಲಿ ನಿಧಾನವಾಗಿ ಹತೋಟಿಗೆ ಬರುತ್ತಿದೆ.  ಕೋರೋನಾ ಕಂಟ್ರೋಲ್ ಮಾಡುವಲ್ಲಿ ಯಶಸ್ಸು ಕಂಡಿದ್ದು, ಬೆಂಗಳೂರು ದೇಶಕ್ಕೆ ಮಾದರಿಯಾಗಿದೆ.

ನಮ್ಮ ಕೊರೋನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಕೋವಿಡ್19 ನ ಪರಿಣಾಮಕಾರಿ ನಿರ್ವಹಣೆಗಾಗಿ 4 ಮಾದರಿ ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ.

ಕೋರೋನಾ ಕಂಟ್ರೋಲ್: ಬೆಂಗಳೂರು ಯಶಸ್ಸಿಗೆ 15 ಸೂತ್ರ..!

ಸಾಮಾಜಿಕ-ಆರ್ಥಿಕ ಮತ್ತು ವಾಣಿಜ್ಯಾತ್ಮಕ ರಿಯಲ್‌ ಎಸ್ಟೇಟ್‌ ಮತ್ತಿತರ ವಲಯಗಳಿಗೆ ಸಂಬಂಧಿಸಿದ ವಿಶ್ವದ ಡೈನಮಿಕ್‌ ಸಿಟಿ ಪಟ್ಟಿಯಲ್ಲಿರುವ ಬೆಂಗಳೂರಿನಲ್ಲಿಕೋರೋನಾ ಭೀಕರತೆ ಹೆಚ್ಚಾಗುವ ಮುನ್ನವೇ ಜನಸಂದಣಿ ಬ್ರೇಕ್ ಹಾಕಲು ಸಂಪೂರ್ಣವಾಗಿ ನಮ್ಮ ಬಂದ್ ಮಾಡಲಾಯ್ತು. ಇದಿರಂದ ಕೋರೋನಾ ಭೀಕರತೆಯನ್ನು ತಡೆಯಲಾಯ್ತು.

ಈ ಮೂಲಕ ನಮ್ಮ ಬೆಂಗಳೂರು ದೇಶಕ್ಕೆ ಮಾದರಿಯಾಗಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರಲ್ಲಿ  ಬೆಂಗಳೂರು ಪ್ರಮುಖ ಪಾತ್ರವಹಿಸಿದೆ. ಕೊರೋನಾ ನಿಯಂತ್ರಣದೊಂದಿಗೆ ಆರ್ಥಿಕತೆಯನ್ನು ಪುನರಾರಂಭದಲ್ಲಿ ಬೆಂಗಳೂರು ದೇಶಕ್ಕೆ ಮಾದರಿ. ಇಡೀ ದೇಶಕ್ಕೆ ಮಾದರಿಯಾಗಲು ಕಾರಣ COVID19 ವಿರುದ್ಧದ ಈ ಯುದ್ಧದಲ್ಲಿ ದಣಿವರಿಯದಕೊರೋನಾ ವಾರಿಯರ್ಸ್ ಅವರ ಪ್ರಯತ್ನಗಳಿಗಾಗಿ ನಾವು ಮಾದರಿಯಾಗಿದ್ದೇವೆ. ಎಲ್ಲಾ ಕರೋನಾ ಯೋಧರಿಗೆ ಅಭಿನಂದನೆ ಎಂದು ಸಿಎಂ ಬಿಎಸ್‌ವೈ ಟ್ವೀಟ್ ಮಾಡಿದ್ದಾರೆ.

ಮಾಹಾಮಾರಿ ಕೊರೋನಾ ವಕ್ಕಿಸಿಕೊಂಡಾಗ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಫೀವರ್ ಕ್ಲಿನಿಕ್, ಟೆಸ್ಟಿಂಗ್ ಲ್ಯಾಬ್, ಎಲ್ಲಾ ವೈದ್ಯಕೀಯ ಕಾಲೇಜುಗಳ ಸ್ಟಾಫ್, ಡಾಕ್ಟರ್ಸ್‌ಗಳ ಬಳಕೆ ಮಾಡಿ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ನೀಡಲು ಕ್ರಮವಹಿಸಲಾಯ್ತು.

ಅಷ್ಟೇ ಅಲ್ಲದೇ ಹಲವು ತಜ್ಞರ ಸಲಹೆ-ಸೂಚನೆಗಳಿಂದ ತಂಡಗಳನ್ನು ಕಟ್ಟಿ ಬೆಂಗಳೂರಿನಲ್ಲಿ ಕೊರೋನಾ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಇದೀಗ ಸಿಲಿಕಾನ್ ಸಿಟಿ ದೇಶಕ್ಕೆ ಮಾದರಿಯಾಗಿದೆ. ನಮ್ಮ ಬೆಂಗಳೂರು ನಮ್ಮ ಹೆಮ್ಮೆ....