Asianet Suvarna News Asianet Suvarna News

ಕೋರೋನಾ ಕಂಟ್ರೋಲ್: ಬೆಂಗಳೂರು ಯಶಸ್ಸಿಗೆ 15 ಸೂತ್ರ..!

ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿಢೀರನೆ ಹೆಚ್ಚಿದರೂ, ನಂತರದಲ್ಲಿ ನಿಧಾನವಾಗಿ ಹತೋಟಿಗೆ ಬರುತ್ತಿದೆ. ಕೋರೋನಾ ಕಂಟ್ರೋಲ್ ಮಾಡುವಲ್ಲಿ ಬೆಂಗಳೂರು ಯಶಸ್ಸು ಕಾಣಲು 15 ಸೂತ್ರಗಳು ಕಾರಣ. ಏನವು..? ಇಲ್ಲಿ ಓದಿ.

15 things k sudhakar followed to control covid19 in Bangalore
Author
Bangalore, First Published May 25, 2020, 2:37 PM IST

ಬೆಂಗಳೂರು(ಮೇ 25): ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿಢೀರನೆ ಹೆಚ್ಚಿದರೂ, ನಂತರದಲ್ಲಿ ನಿಧಾನವಾಗಿ ಹತೋಟಿಗೆ ಬರುತ್ತಿದೆ. ಕೋರೋನಾ ಕಂಟ್ರೋಲ್ ಮಾಡುವಲ್ಲಿ ಬೆಂಗಳೂರು ಯಶಸ್ಸು ಕಾಣಲು 15 ಸೂತ್ರಗಳು ಕಾರಣ.

ಕೋರೋನಾ ಭೀಕರತೆ ಹೆಚ್ಚಾಗುವ ಮುನ್ನವೇ ಜನಸಂದಣಿಗೆ ಬ್ರೇಕ್ ಹಾಕಲಾಯಿತು. ಮಾಲ್, ಚಿತ್ರಮಂದಿರ ಬಂದ್ ಸೇರಿ ಹಲವು ಪ್ರದೇಶಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಯಿತು. ಹಾಗೆಯೇ ವಿದೇಶದಿಂದ ಬಂದವರಿಗೆ ವಿಮಾನನಿಲ್ದಾಣದಲ್ಲೇ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಯಿತು.

ಕೊರೊನಾ ಪಾಸಿಟೀವ್ ಒಬ್ಬರಿಗಾದ್ರೆ ಚಿಕಿತ್ಸೆ ಇನ್ನೊಬ್ಬರಿಗೆ? ಇದೆಂಥಾ ಎಡವಟ್ಟು!?

ತಕ್ಷಣವೇ ತಜ್ಞರ ಸಮಿತಿ ರಚನೆ ಮಾಡಿ, ಸಮಿತಿ ವರದಿಯಂತೆ ಸರ್ಕಾರದ ಕಾರ್ಯಕ್ರಮ ಜಾರಿ ಮಾಡಲಾಯಿತು. ನಾಲ್ಕು ಹಂತಗಳಲ್ಲಿ ಚಿಕಿತ್ಸಾ ಕ್ರಮಗಳನ್ನು ಜಾರಿ ಮಾಡಿ ಕ್ರಮ ವಹಿಸಲಾಯಿತು.

DAS Board ಮಾಡುವ ಮೂಲಕ ಆಪತ್ತಿಗೆ ಸೂಕ್ತ ಸಲಹೆ ನೀಡಲಾಯಿತು. ಟೆಲಿ ICU ಮಾಡಿ, ಆಪ್ತಮಿತ್ರ ಸಹಾಯವಾಣಿಯನ್ನೂ ಆರಂಭಿಸಲಾಯಿತು. ಮೂರು ಜೋನ್ ಮಾಡಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಿತು. ಸತ್ತವರ ಕಾರಣ ಪತ್ತೆ ಹಚ್ಚಲು ವಿಶೇಷ ತಜ್ಞರ ಸಮಿತಿ ರಚಿಸಲಾಯಿತು.

ಗಂಗಾವತಿ: ಕೊರೋನಾ ಆತಂಕದ ಮಧ್ಯೆಯೇ ಅನಧಿಕೃತ ರೆಸಾರ್ಟ್‌ ಆರಂಭ?

ಫೀವರ್ ಕ್ಲಿನಿಕ್ ಆರಂಭಿಸಿ, ಕೇವಲ 2 ಇದ್ದ ಟೆಸ್ಟಿಂಗ್ ಲ್ಯಾಬ್ ಗಳನ್ನು 39 ಕ್ಕೆ ಹೆಚ್ಚು ಮಾಡಲಾಯಿತು. ಎಲ್ಲ ವೈದ್ಯಕೀಯ ಕಾಲೇಜುಗಳ ಸ್ಟಾಫ್, ಡಾಕ್ಟರ್ ಗಳ ಬಳಕೆ ಮಾಡಿ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಯಿತು.

ಕಂಟೈನ್‌ಮೆಂಟ್ ಜೋನ್ ಗಳನ್ನು ಮಾಡಿ, ರೋಗಿಗಳ ಜೊತೆಗೆ ಆಪ್ತ ಸಮಾಲೋಚನೆ ಮಾಡಲಾಯಿತು. ತಜ್ಞರ ಸಮಿತಿ ಮಾಡಿ, ಭಯಗೊಂಡವರಿಗೆ ಸೂಕ್ತ ಸಲಹೆ ನೀಡುವ ಕಾರ್ಯ ಮುಂದುವರಿಸಲಾಯಿತು. ಈ ರೀತಿಯಲ್ಲಿ ಬೆಂಗಳೂರಿನಲ್ಲಿ ಕಂಟ್ರೋಲ್ ಮಾಡುವಲ್ಲಿ ಡಾ.ಸುಧಾಕರ್ ಸಫಲರಾದರು.

Follow Us:
Download App:
  • android
  • ios