ಪಿಡಿಒ ಪರೀಕ್ಷಾ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಬೆಂಗಳೂರು ಮೆಟ್ರೋ!

ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬಿಎಂಆರ್‌ಸಿಎಲ್ ಭಾನುವಾರ ಬೆಳಿಗ್ಗೆ 5.30ರಿಂದಲೇ ಮೆಟ್ರೋ ಸೇವೆ ಆರಂಭಿಸಲಿದೆ. ಸಾಮಾನ್ಯವಾಗಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಮೆಟ್ರೋ ಸೇವೆಯನ್ನು ಪರೀಕ್ಷಾರ್ಥಿಗಳಿಗಾಗಿ 1.5 ಗಂಟೆ ಮುಂಚಿತವಾಗಿ ಆರಂಭಿಸಲಾಗುತ್ತಿದೆ.

Bengaluru Metro gives good news to KPSC Recruitment PDO exam candidates sat

ಬೆಂಗಳೂರು (ಡಿ.06): ಕೆಪಿಎಸ್‌ಸಿಯಿಂದ ಭಾನುವಾರ ನಡೆಸಲಾಗುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಬಿಎಂಆರ್‌ಸಿಎಲ್‌ನಿಂದ ಮೆಟ್ರೋ ಸೇವೆಯನ್ನು ಬೆಳಗ್ಗೆ 5.30ರಿಂದ ಆರಂಭಿಸಲಾಗುತ್ತಿದೆ. ಈ ಮೂಲಕ ಪಿಡಿಒ ಪರೀಕ್ಷಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಅನುಕೂಲ ಮಾಡಿಕೊಟ್ಟಿದೆ.

ಕರ್ನಾಟಕ ಲೋಕ ಸೇವಾ ಆಯೋಗದಿಂದ (ಕೆಪಿಎಸ್‌ಸಿ) ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕಾತಿ ಹುದ್ದೆಗಳಿಗೆ ಶನಿವಾರ (ಡಿ.07) ಮಧ್ಯಾಹ್ನ 2 ಗಂಟೆಗೆ ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ ಭಾನುವಾರ  ಬರೆಯುವ ಅಭ್ಯರ್ಥಿಗಳು ಭಾನುವಾರ ಬೆಳಗ್ಗೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲ ಆಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಬೆಳಗ್ಗೆ 5.30ರಿಂದಲೇ ಮೆಟ್ರೋ ರೈಲು ಸಂಚಾರ ಸೇವೆಯನ್ನು ಒದಗಿಸಲು ಮುಂದಾಗಿದೆ. ಸಾಮಾನ್ಯ ದಿನಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆ ಆರಂಭವಾಗಲಿದ್ದು, ಪಿಡಿಒ ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಅವಧಿಗೂ ಮುನ್ನವೇ ಮೆಟ್ರೋ ಸೇವೆ ಆರಂಭಿಸಲಾಗುತ್ತಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆಯು 'ದಿನಾಂಕ 08.12.2024ರ ಭಾನುವಾರ ಕರ್ನಾಟಕ ಲೋಕಸೇವಾ ಆಯೋಗವು-ಪಂಚಾಯತ್ ಅಭಿವೃದ್ಧಿ ಆಧಿಕಾರಿ (ಪಿಡಿಒ) ಪರೀಕ್ಷೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆ ಗೆ ಹಾಜರಾಗಲು ಬಿ.ಎಂ.ಆರ್.ಸಿ.ಎಲ್ ಮೆಟ್ರೋ ರೈಲು ಸೇವೆಯನ್ನು ಬೆಳಿಗ್ಗೆ 07:00 ಗಂಟೆಗೆ ಬದಲಾಗಿ 05:30 ಗಂಟೆಗೆ ಆರಂಭಿಸಲಾಗುತ್ತಿದೆ. ನಗರದ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 5.30ಕ್ಕೆ ಮೆಟ್ರೋ ಸೇವೆ ಪ್ರಾರಂಭಿಸಲಿದೆ. ಜೊತೆಗೆ, ನಾಡಪ್ರಭು ಕೆಂಪೇಗೌಡ ನಿಲ್ದಾಣವಾದ ಮೆಜೆಸ್ಟಿಕ್‌ನಿಂದ ಎಲ್ಲಾ 4 ದಿಕ್ಕುಗಳಿಗೆ ಮೊದಲ ರೈಲು ಬೆಳಿಗ್ಗೆ 05:30 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: ರಾಯಚೂರು: ಪಿಡಿಒಪರೀಕ್ಷೆಯಲ್ಲಿ ಅಕ್ರಮ ಆರೋಪ; ಕೆಪಿಎಸ್ಸಿ ವಿರುದ್ಡ ಪ್ರತಿಭಟನೆ ನಡೆಸಿದವರ ಮೇಲೆಯೇ ಕೇಸ್!

ಈ ಅವಧಿಯಲ್ಲಿ ಅಂದರೆ ಬೆಳಗ್ಗೆ 5.30 ರಿಂದ 7.00 ಗಂಟೆಯವರೆಗೆ ರೈಲುಗಳು 30 ನಿಮಿಷಗಳಿಗೆ ಒಂದು ರೈಲು ಚಲಿಸುತ್ತವೆ. ಬೆಳಿಗ್ಗೆ 7.00 ಗಂಟೆಯ ನಂತರ ಎಂದಿನಂತೆ (ಪ್ರತಿ 8 ರಿಂದ 10 ನಿಮಿಷ) ರೈಲುಗಳು ಚಲಿಸುತ್ತವೆ. ಸಾರ್ವಜನಿಕರು ಹಾಗೂ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳು ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ನಗದು ರಹಿತ ಪಾವತಿಗಳನ್ನು ಉತ್ತೇಜಿಸಲು ಮೆಟ್ರೋ ನಿಗಮವು ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ QR ಟಿಕೆಟ್‌ಗಳ ಮೂಲಕ ಟಿಕೆಟ್ ಗಳನ್ನು ಖರೀದಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ರಾಯಚೂರು: ಒಂದು ಕೋಣೆಗೆ 12 ಪ್ರಶ್ನೆ ಪತ್ರಿಕೆ, 24 ಅಭ್ಯರ್ಥಿಗಳು! ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮತ್ತೆ ಯಡವಟ್ಟು!

ಬೆಳಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು:
ಪಿಡಿಒ ಪರೀಕ್ಷೆ ಬರೆಯುವಂತಹ ಎಲ್ಲ ಅಭ್ಯರ್ಥಿಗಳಿಗೆ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ. ಆದರೆ, ಈ ಪರೀಕ್ಷೆ ಆರಂಭವಾಗುವುದಕ್ಕೆ 2 ಗಂಟೆಗಳ ಮೊದಲು ಅಂದರೆ ಬೆಳಗ್ಗೆ 8 ಗಂಟೆ ವೇಳೆಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಬಳಿ ಹಾಜರಿರಬೇಕು ಎಂದು ಕೆಪಿಎಸ್‌ಸಿ ಸೂಚನೆ ನೀಡಿದೆ. ಇನ್ನು ಪರೀಕ್ಷಾರ್ಥಿಗಳು ತುಂಬು ತೋಳಿನ ಶರ್ಟ್ ಧರಿಸುವಂತಿಲ್ಲ. ಕಪ್ಪು ಬಾಲ್ ಪಾಯಿಂಟ್ ಪೆನ್ ಮಾತ್ರ ತೆಗೆದುಕೊಂಡು ಹೋಗಬೇಕು. ಪ್ರವೇಶ ಪತ್ರ ಮತ್ತು ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಯಾವುದೇ ಆಭರಣಗಳನ್ನು ಧರಿಸುವುದಕ್ಕೆ ಅವಕಾಶ ಇಲ್ಲ. ಪಿಡಿಒ 2ನೇ ಪತ್ರಿಕೆ ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ನಡೆಯಲಿದೆ. 

Latest Videos
Follow Us:
Download App:
  • android
  • ios