ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಿನ್ನೆಲೆಯಲ್ಲಿ, ಬೆಂಗಳೂರಿನ ಅರ್ಜುನ್ ತಮ್ಮ ಮನೆಯಲ್ಲಿ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬೆದರಿಕೆ ಕರೆಗಳು ವರದಿಯಾಗಿವೆ. ಜೆಕೆಎಸ್‌ಎ ಸಹಾಯವಾಣಿ ಆರಂಭಿಸಿದೆ. ಈ ಭಯದ ವಾತಾವರಣದಲ್ಲಿ ಅರ್ಜುನರ ಕಾರ್ಯ ನಿರೀಕ್ಷೆಯ ಕಿರಣವಾಗಿದೆ.
ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಭಾರತದ ವಿವಿಧ ಭಾಗಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಅನಿಶ್ಚಿತತೆ ಆವರಿಸಿಕೊಂಡಿರುವ ಸನ್ನಿವೇಶದಲ್ಲಿ, ಬೆಂಗಳೂರಿನ ನಿವಾಸಿ ಅರ್ಜುನ್ ಅವರು ಮಾನವೀಯತೆಯ ತೋರಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದಿನ ಟ್ವಿಟರ್) ಮೂಲಕ, ಅವರು "ಯಾವುದೇ ಕಾಶ್ಮೀರಿ ವಿದ್ಯಾರ್ಥಿ ಬೆಂಗಳೂರಿನಲ್ಲಿ ಅಸುರಕ್ಷಿತವೆಂದು ಭಾವಿಸುತ್ತಿದ್ದರೆ, ನನ್ನ ಮನೆಗೆ ಬರಬಹುದು. ನಾನು ಅವರಿಗೆ ಸುರಕ್ಷತೆಯನ್ನು ಮತ್ತು ಉತ್ತಮ ಆತಿಥ್ಯವನ್ನು ಒದಗಿಸುತ್ತೇನೆ" ಎಂದು ಮುಕ್ತ ಆಹ್ವಾನ ನೀಡಿದ್ದಾರೆ.
ಅರ್ಜುನ ಅವರ ಸಂದೇಶದಲ್ಲಿ ಬೆಂಗಳೂರಿನಲ್ಲಿ ಬೆದರಿಕೆ ಇದೆ ಎಂದು ಭಾವಿಸುವ ಯಾವುದೇ ಕಾಶ್ಮೀರಿ ವಿದ್ಯಾರ್ಥಿ ನನ್ನ ಮನೆಗೆ ಬರಬಹುದು. ನೀವು ಸುರಕ್ಷಿತವಾಗಿರುತ್ತೀರಿ ಮತ್ತು ಉತ್ತಮ ಆತಿಥ್ಯ ವಹಿಸುತ್ತೀರಿ. ವಿಭಜಿತ ಭಾರತ ಸೋಲುತ್ತದೆ, ಅಖಂಡ ಭಾರತ ಗೆಲ್ಲುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ! ಎಂದು ಬರೆದಿದ್ದಾರೆ.
ಇತ್ತ, ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್‌ಎ) ಪಿಟಿಐಗೆ ನೀಡಿದ ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಸುಮಾರು 1,000ಕ್ಕೂ ಹೆಚ್ಚು ಬೆದರಿಕೆ ಕರೆಗಳನ್ನು ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಯ ಕುರಿತು ಭಯ ವ್ಯಕ್ತಪಡಿಸುತ್ತಿದ್ದಾರೆ ಹಾಗೂ ತಕ್ಷಣವೇ ಮನೆಗೆ ಮರಳುವ ಹಿನ್ನೆಲೆಯಲ್ಲಿ ಏನು ಮಾಡಬೇಕೆಂದು ತೋಚುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಜೆಕೆಎಸ್‌ಎ ತುರ್ತು ಸಹಾಯವಾಣಿ ಸೌಲಭ್ಯಗಳನ್ನು ಸ್ಥಾಪಿಸಿ, ಅಗತ್ಯವಿರುವವರಿಗೆ ಸಹಾಯ ಮಾಡಲು ವಿಶೇಷ ತಂಡವನ್ನು ರಚಿಸಿದೆ.
Pahalgam Attack Updates: ಕುಲ್ಗಾಂನಲ್ಲಿ ಇಬ್ಬರು ಉಗ್ರರ ಸಹಚರರ ಬಂಧ ...
ಇದೇ ವೇಳೆ, ದೇಶದ ಕೆಲವೆಡೆ ಆತಂಕಕಾರಿ ಘಟನೆಗಳು ವರದಿಯಾಗಿವೆ. ಚಂಡೀಗಢದ ಡೆರಾಬಸ್ಸಿಯ ಯೂನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಹಾಸ್ಟೆಲ್‌ನಲ್ಲಿ, ಕಾಶ್ಮೀರಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಹರಿತವಾದ ಆಯುಧಗಳಿಂದ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಆತಂಕ ಹುಟ್ಟಿಸಿದೆ. ಈ ದಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದು, ಹಲವರು ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ವೈರಲ್ ಆದ ವೀಡಿಯೊವೊಂದು ಚಿಂತೆ ಹೆಚ್ಚಿಸಿದೆ. ಹಿಂದೂ ರಕ್ಷಾ ದಳದ ಸದಸ್ಯರು, "ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳು ನಗರವನ್ನು ತಕ್ಷಣ ತೊರೆಯಬೇಕು ಇಲ್ಲವೇ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಬೆದರಿಕೆ ಹಾಕುತ್ತಿರುವ ದೃಶ್ಯ ವೀಡಿಯೊದಲ್ಲಿ ಕಾಣಿಸಿಕೊಂಡಿದೆ.
ಈ ಬೆದರಿಕೆಗಳಿಂದಾಗಿ ಅನೇಕ ಕಾಶ್ಮೀರಿ ವಿದ್ಯಾರ್ಥಿಗಳು ಗಂಭೀರ ಗೊಂದಲ ಮತ್ತು ಭಯದ ಪರಿಸ್ಥಿತಿಯಲ್ಲಿ ತಾವು ಒತ್ತಾಯಪೂರ್ವಕವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ವಿಶೇಷವಾಗಿ, ತಕ್ಷಣದ ಪರೀಕ್ಷೆಗಳ ಸಂದರ್ಭದಲ್ಲಿ ಈ ಭಯ ಪರಿಸ್ಥಿತಿ ಅವರಿಗೆ ಮಾನಸಿಕ ಒತ್ತಡ ಹೆಚ್ಚಿಸುತ್ತಿದೆ.
ಬಲೂಚಿಸ್ತಾನ ದಾಳಿ: ಪಾಕ್ ಸೇನೆಯ 10 ಯೋಧರು ಉಡೀಸ್!
ಇಂತಹ ಸಮಯದಲ್ಲಿ ಅರ್ಜುನ ಅವರಂತಹ ವ್ಯಕ್ತಿಗಳು ತೋರಿಸುತ್ತಿರುವ ಆತ್ಮೀಯತೆ ಮತ್ತು ಮಾನವೀಯತೆ ದೇಶದ ಭವಿಷ್ಯಕ್ಕೆ ಮಾದರಿಯಾಗಿದೆ. ಒಗ್ಗಟ್ಟಿನ ಬಲದಿಂದ ಮಾತ್ರ ನಾವು ದೇಶದ ಅಭಿವೃದ್ಧಿಯ ಹಾದಿಯಲ್ಲಿ ಮುಂದಿನ ಹೆಜ್ಜೆ ಇಡಬಹುದು ಎಂಬುದು ಇದರಿಂದ ಅರ್ಥ ಮಾಡಿಕೊಳ್ಳಬೇಕು.
ಬೈಸರನ್ ವ್ಯಾಲಿಯಲ್ಲಿ ಸಂಭವಿಸಿದ ದುರಂತದಲ್ಲಿ 26 ಮಂದಿ ಅಮಾಯಕ ಜೀವಗಳನ್ನು ಉಗ್ರರ ಬಲಿ ಪಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದ್ದು, ಭಾರತ ಸಮಾರಾಭ್ಯಾಸ ಆರಂಭಿಸಿದೆ. ಪಾಕ್ ಜೊತೆಗಿ ಹಲವು ಒಪ್ಪಂದಗಳನ್ನು ಭಾರತ ಮುರಿದಿದ್ದು, ಶತ್ರು ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿದೆ. ಭಾರತ ದಾಳಿ ಮಾಡಬಹುದು ಎಂಬ ಊಹೆಯಲ್ಲಿ ಪಾಕಿಸ್ತಾನ ಕೂಡ ಎಚ್ಚರ ವಹಿಸಿದೆ. ಭಾರತದ ಜೊತೆಗಿನ ಹಲವು ಒಪ್ಪಂಗಳನ್ನು ಮುರಿದಿದೆ. ಭಾರತ ಪಾಕ್ ಗೆ ಬುದ್ದಿ ಕಲಿಸಲು ಮುಂದಿನ ನಡೆ ಏನಾಗಿರಬಹುದು ಎಂಬುದು ಕಾದು ನೋಡಬೇಕಿದೆ.
