Asianet Suvarna News Asianet Suvarna News

'ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ: ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಕೊಟ್ಟ ಜೆಡಿಎಸ್ ಮುಖಂಡರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕುಮಾರ್‌ಸೋಮಿ ಕರೆಂಟ್‌ ಕಳ್ಳ ಪೋಸ್ಟರ್‌ ಅಂಟಿಸಿದವನನ್ನು ಜೆಡಿಎಸ್‌ ಮುಖಂಡರೇ ಪತ್ತೆಹಚ್ಚಿದ್ದಾರೆ.

Bengaluru JDS leaders identified the person who put up Kumaraswamy electricity thief poster sat
Author
First Published Nov 22, 2023, 5:02 PM IST

ಬೆಂಗಳೂರು (ನ.22): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕರೆಂಟ್‌ ಕಳ್ಳ ಕುಮಾರ್‌ಸೋಮಿ ಎಂದು ಪೋಸ್ಟರ್‌ ಅಂಟಿಸಿ ಕುಕೃತ್ಯ ಮೆರೆದ ಕಾಂಗ್ರೆಸ್‌ ಮುಖಂಡನನ್ನು ಜೆಡಿಎಸ್‌ ಕಾರ್ಯಕರ್ತರು ಕಂಡುಹಿಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಆರೋಪಿ ಬಂಧಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ಆದ್ರೆ, ನಾವೇ ಈಗ ಸಿಸಿಟಿವಿ ಫೂಟೇಜ್‌ ಸಮೇತ ಆರೋಪಿ ಯಾರೆಂಬುದನ್ನು ಪತ್ತೆಮಾಡಿ ಕರೆತಂದಿದ್ದು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್‌ ಕಾರ್ಯಕರ್ತರು ಪೊಲೀಸ್‌ ಕಮಿಷನರ್ ದಯಾನಂದ್‌ಗೆ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಫೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್‌ ಅವರಿಗೆ ಜೆಡಿಎಸ್ ಮುಖಂಡರು ದೂರು ನಿಡಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಗೌಡರ ನೇತೃತ್ವದಲ್ಲಿ ದೂರು ನೀಡಲಾಗಿದೆ. ಕುಮಾರಸ್ವಾಮಿಯವರ ಅವಹೇಳನಕಾರಿ ಪೋಸ್ಟರ್ ಅಂಟಿಸಲಾಗ್ತಿದೆ. ಮನೋಹರ್ ಎಂಬಾತ ಪೋಸ್ಟರ್ ಅಂಟಿಸಿದ್ದಾನೆ. ಬೆಂಗಳೂರಿನ ಜೆಪಿ ನಗರದ ಕುಮಾರಸ್ವಾಮಿ ಅವರ ಮನೆಯ ಬಳಿ, ಜೆಡಿಎಸ್ ಕಚೇರಿ, ಸದಾಶಿವನಗರ, ಶೇಷಾದ್ರಿಪುರ ಸೇರಿದಂತೆ ವಿವಿಧೆಡೆ ಕಾರಲ್ಲಿ ಹೋಗಿ ಪೋಸ್ಟರ್ ಅಂಟಿಸಲಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲಸ ಮಾಡಲಾಗ್ತಿದೆ ಎಂದು ದೂರು ಕೊಡಲಾಗಿದೆ.

ಕರೆಂಟ್‌ ಕಳ್ಳ ಪೋಸ್ಟರ್‌: ಗ್ಯಾರಂಟಿ ಕೊಡಲಾಗದ ಕಾಂಗ್ರೆಸ್‌ ಶಿಖಂಡಿಂತೆ ಪೋಸ್ಟರ್‌ ಅಂಟಿಸುತ್ತಿದೆ ಜೆಡಿಎಸ್‌ ಟಾಂಗ್!

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡ್ತಿದೆ. ವಿರೋಧ ಪಕ್ಷ ಧ್ವನಿ ಅಡಗಿಸಲು ಈ ರೀತಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ರೀತಿ ಬಿಂಬಿಸಲಾಗ್ತಿದೆ. ಪೊಲೀಸ್ ಕಮಿಷನರ್ ಗೆ ಎಲ್ಲಾ ದಾಖಲೆ ಹಾಗೂ ಫುಟೇಜ್ ನೀಡಲಾಗ್ತಿದೆ. ಮನೋಹರ್ ಮೇಲೆ ಗೂಂಡಾ ಆಕ್ಟ್ ಹಾಕಬೇಕು. ಇಲ್ಲದಿದ್ದರೆ ವಿಧಾನಸೌಧದ ಮೇಲೆ ಹಾಗೂ ಮಂತ್ರಿಗಳ ಮೇಲೆ ಇದೇ ರೀತಿ ಪೋಸ್ಟರ್ ಹಾಕ್ತೀವಿ. ಕೂಡಲೇ ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲೇಬೇಕು ಎಂದು ಜೆಡಿಎಸ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ.

ನೀವು ಕರೆಂಟ್‌ ಕಳ್ಳರೆಂದ ಕಾಂಗ್ರೆಸ್: ಪರೀಕ್ಷೆ ಮಾಡಲಷ್ಟೇ ಲೈನ್‌ ಹಾಕಿದ್ದೇವೆಂದ ಕುಮಾರಸ್ವಾಮಿ

ಕೆಲವು ಕಾಂಗ್ರೆಸ್‌ ನಾಯಕರು ತಮ್ಮ ಕಾರ್ಯಕರ್ತರಿಗೆ ಕುಮ್ಮಕ್ಕು ಕೊಟ್ಟು ಈ ಕೆಲಸ ಮಾಡಿಸಲಾಗ್ತಿದೆ. ಈ ಬಗ್ಗೆ ತನಿಖೆ ಮಾಡದಿದ್ದರೆ ಪೊಲೀಸ್ ಕಮಿಷನರ್ ಕಚೇರಿಗೇ ಮುತ್ತಿಗೆ ಹಾಕ್ತೀವಿ. ಈಗ ಕೊಟ್ಟಿರುವ ಪೆನ್ ಡ್ರೈವ್ ನಲ್ಲಿ ಪೋಸ್ಟರ್‌ ಅಂಟಿಸುತ್ತಿರುವ ದೃಶ್ಯಗಳಿವೆ ಎಂದು ಮಾಜಿ ಎಂಎಲ್‌ಸಿ ರಮೇಶ್ ಗೌಡ ಪೊಲೀಸರಿಗೆ ತೋರಿಸಿದ್ದಾರೆ.

Follow Us:
Download App:
  • android
  • ios