ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ತಡೆಯಲು 2.5 ಕೋಟಿ ರೂ. ವೆಚ್ಚದಲ್ಲಿ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರೊಂದಿಗೆ, ಕೈದಿಗಳ ಮಾನಸಿಕ ನೆಮ್ಮದಿಗಾಗಿ 10 ದಿನಗಳ ವಿಶೇಷ ವಿಪಶ್ಯನ ಧ್ಯಾನ ಶಿಬಿರವನ್ನು ಸಹ ಆಯೋಜಿಸಲಾಗಿದೆ.

ಬೆಂಗಳೂರು (ಮೇ.10) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 2.5 ಕೋಟಿ ರು ವೆಚ್ಚದಲ್ಲಿ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಜಾರಿಗೊಳಿಸಿದೆ. ಈಗಾಗಲೇ ಕಾರಾಗೃಹದ ಭದ್ರತೆಗೆ ಕೃತ್ತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಅಳವಡಿಕೆ ಹಾಗೂ ಸಂದರ್ಶಕರಿಗೆ ಡಿಜಿಟಲ್ ಟೋಕನ್ ಬಳಿಕ ಈಗ ಅಕ್ರಮ ಚಟುವಟಿಕೆಗಳ ತಡೆಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ. ಕಾರಾಗೃಹದಲ್ಲಿ ಕೈದಿಗಳ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕೈಗಾರಿಕೆಗಳು ಹಾಗೂ ಬೇಕರಿ ಸೇರಿದಂತೆ ಇತೆರೆ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಆ ಪ್ರದೇಶಳ ಪ್ರವೇಶ ಹಾಗೂ ನಿರ್ಗಮನದ ವೇಳೆ ಸಜಾ ಹಾಗೂ ವಿಚಾರಣಾಧೀನ ಕೈದಿಗಳು ಬಯೋಮೆಟ್ರಿಕ್ ಬಳಸಬೇಕಿದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

10 ದಿನ ಕೈದಿಗಳಿಗೆ ಜೈಲಿನಲ್ಲಿ ಧ್ಯಾನ ಶಿಬಿರ: 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ 10 ದಿನಗಳ ವಿಶೇಷ ಧ್ಯಾನ ಶಿಬಿರವನ್ನು ಕಾರಾಗೃಹ ಅಧಿಕಾರಿಗಳು ಆಯೋಜಿಸಿದ್ದಾರೆ. ಶ್ರೀ ಸತ್ಯನಾರಾಯಣ ಗೋಯೆಂಕಾ ಅವರ ವಿಪಶ್ಯನ ಧ್ಯಾನ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಥ್ಯಾನ ತರಬೇತಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ ಕಾರ್ಯಾಗಾರದಲ್ಲಿ 25 ಕೈದಿಗಳು ಪಾಲ್ಗೊಂಡಿದ್ದಾರೆ. ಸಮಾಜದಲ್ಲಿ ಸಮತಾಭಾವದಿಂದ ಬದುಕುವುದು ಮತ್ತು ಶಾಂತಿ ವಾತಾವರಣ ನಿರ್ಮಿಸುವ ಕುರಿತು ಕೈದಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.