ಬೆಂಗಳೂರು- ಹುಬ್ಬಳ್ಳಿ, ಮುಂಬೈ- ಗೋವಾ, ಪಟನಾ- ರಾಂಚಿ, ಭೋಪಾಲ್‌- ಇಂದೋರ್‌ ಮತ್ತು ಭೋಪಾಲ್‌- ಜಬ್ಬಲ್‌ಪುರ ಮಾರ್ಗಗಳಲ್ಲಿ ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಒಂದೇ ದಿನ 5 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. 

ನವದೆಹಲಿ(ಜೂ.15):  ಬೆಂಗಳೂರು- ಹುಬ್ಬಳ್ಳಿ ಸೇರಿದಂತೆ ದೇಶದ 5 ಮಾರ್ಗಗಳಲ್ಲಿ ಹೊಸ ವಂದೇ ಭಾರತ್‌ ರೈಲುಗಳಿಗೆ ಭಾರತೀಯ ರೈಲ್ವೆ ಜೂ.26ರಂದು ಚಾಲನೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ರೈಲುಗಳನ್ನು ಉದ್ಘಾಟಿಸಲಿದ್ದಾರೆ.

ಬೆಂಗಳೂರು- ಹುಬ್ಬಳ್ಳಿ, ಮುಂಬೈ- ಗೋವಾ, ಪಟನಾ- ರಾಂಚಿ, ಭೋಪಾಲ್‌- ಇಂದೋರ್‌ ಮತ್ತು ಭೋಪಾಲ್‌- ಜಬ್ಬಲ್‌ಪುರ ಮಾರ್ಗಗಳಲ್ಲಿ ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ. ಇದೇ ಮೊದಲ ಬಾರಿಗೆ ಒಂದೇ ದಿನ 5 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. 288 ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಬಳಿಕ ಮೊದಲ ಬಾರಿಗೆ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಾಗುತ್ತಿದ್ದು, ದುರಂತದ ಬಳಿಕ ಮುಂಬೈ ಮತ್ತು ಗೋವಾ ನಡುವಿನ ರೈಲು ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು.

ಮುಂದಿನ ತಿಂಗಳಿಂದ ದೇಶದ 21 ರಾಜ್ಯಗಳಲ್ಲಿ ವಂದೇ ಭಾರತ ಹೈ ಸ್ಪೀಡ್ ರೈಲು ಸಂಚಾರ

ಈ ರೈಲುಗಳಿಗೆ ಚಾಲನೆ ನೀಡಿದ ಬಳಿಕ ದೇಶದಲ್ಲಿ ವಂದೇ ಭಾರತ್‌ ರೈಲುಗಳ ಸಂಖ್ಯೆ 24ಕ್ಕೆ ಏರಲಿದ್ದು, ಕರ್ನಾಟಕದಲ್ಲಿ 2ಕ್ಕೆ ಏರಲಿದೆ. ಈ ಮೊದಲು ಮೈಸೂರು-ಚೆನ್ನೈ ವಂದೇ ಭಾರತ್‌ ಆರಂಭಿಸಲಾಗಿತ್ತು.