Asianet Suvarna News Asianet Suvarna News

ಟ್ರಾಫಿಕ್‌ ಜಾಂ: ಬೆಂಗ್ಳೂರು ಈಗ ಜಗತ್ತಲ್ಲೇ ನಂ.6..!

2019ರಲ್ಲಿ ಜಾಗತಿಕ ನಂ.1 ಸ್ಥಾನ ಪಡೆದಿದ್ದ ಬೆಂಗಳೂರು| ಕೊರೋನಾದಿಂದಾಗಿ ವಾಹನ ದಟ್ಟಣೆ ಶೇ.20ರಷ್ಟು ಇಳಿಕೆ| ದೆಹಲಿಯಲ್ಲಿ ವಾಹನ ದಟ್ಟಣೆ ಶೇ.9ರಷ್ಟು ಇಳಿಕೆ| 2020ರಲ್ಲಿ ವಿಶ್ವದ 56 ದೇಶಗಳ 416 ನಗರಗಳಲ್ಲಿ ಇದ್ದ ವಾಹನ ದಟ್ಟಣೆಯ ಪ್ರಮಾಣವನ್ನು ಅಧ್ಯಯನ ನಡೆಸಿ ಶ್ರೇಯಾಂಕ ಪ್ರಕಟ| 

Bengaluru Got 6th Rank in Heavy Traffic in Worldwide grg
Author
Bengaluru, First Published Jan 15, 2021, 7:52 AM IST

ಬೆಂಗಳೂರು(ಜ.15): ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ ಹಾಗೂ ಪುಣೆಯಲ್ಲಿ ವಾಹನ ದಟ್ಟಣೆ ಕೊರೋನಾ ಪೂರ್ವ ಸ್ಥಿತಿಗೆ ಮರಳಿದ್ದು, ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ವಾಹನ ದಟ್ಟಣೆ ಇರುವ ನಗರ ಎನಿಸಿಕೊಂಡಿದೆ.

ಟಾಮ್‌ ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ನ 2020ರ ವರದಿಯ ಪ್ರಕಾರ, ವಿಶ್ವದ ಅಗ್ರ 10 ವಾಹನ ದಟ್ಟಣೆ ಇರುವ ನಗರಗಳ ಪೈಕಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿವೆ. ಮುಂಬೈ ವಿಶ್ವದಲ್ಲೇ 2ನೇ ಅತಿ ಹೆಚ್ಚು ವಾಹನ ದಟ್ಟಣೆಯ ನಗರ ಎನಿಸಿಕೊಂಡಿದ್ದರೆ, ಬೆಂಗಳೂರು 6ನೇ ಹಾಗೂ ದೆಹಲಿ 8ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಪುಣೆ 16ನೇ ಸ್ಥಾನದಲ್ಲಿದೆ. ರಷ್ಯಾದ ಮಾಸ್ಕೋ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವ ನಗರ ಎನಿಸಿಕೊಂಡಿದೆ. 2020ರಲ್ಲಿ ವಿಶ್ವದ 56 ದೇಶಗಳ 416 ನಗರಗಳಲ್ಲಿ ಇದ್ದ ವಾಹನ ದಟ್ಟಣೆಯ ಪ್ರಮಾಣವನ್ನು ಅಧ್ಯಯನ ನಡೆಸಿ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.

ಬೆಂಗಳೂರು ವಿಶ್ವದ ನಂ.1 ಅತೀವೇಗದ ಟೆಕ್ನಾಲಜಿ ಹಬ್‌..!

2019ರಲ್ಲಿ ಬೆಂಗಳೂರು ವಾಹನ ದಟ್ಟಣೆಯಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಪಡೆದಿತ್ತು. ಆದರೆ, ಕೊರೋನಾದಿಂದಾಗಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಶೇ.20ರಷ್ಟು ಇಳಿಕೆ ಕಂಡಿದೆ. ಆದಾಗ್ಯೂ ವಿಶ್ವದ ಅತಿ ಹೆಚ್ಚಿನ ವಾಹನ ದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಅದೇ ದೆಹಲಿಯಲ್ಲಿ ವಾಹನ ದಟ್ಟಣೆ ಶೇ.9ರಷ್ಟು ಇಳಿಕೆ ಆಗಿದೆ ಎಂದು ವರದಿ ತಿಳಿಸಿದೆ.
 

Follow Us:
Download App:
  • android
  • ios