Asianet Suvarna News Asianet Suvarna News

ಬೈಕ್‌ಗೆ ಡಿಕ್ಕಿಯಾಗಿ ಕೆಳಗೆ ಬಿದ್ದ ಬಾಲಕಿ ಮೇಲೆ ಹರಿದ ಬಸ್‌

  ಬೈಕ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ನಾಲ್ಕು ವರ್ಷದ ಮಗಳು ಮೃತಪಟ್ಟು, ತಂದೆ ಪ್ರಾಣಾಪಾಯದಿಂದ ಪಾರಾದ ಹೃದಯವಿದ್ರಾವಕ ಘಟನೆ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

Bengaluru crime BMTC bus collides with bike; The girl died rav
Author
First Published Aug 17, 2023, 7:28 AM IST

ಬೆಂಗಳೂರು (ಆ.17) :  ಬೈಕ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ನಾಲ್ಕು ವರ್ಷದ ಮಗಳು ಮೃತಪಟ್ಟು, ತಂದೆ ಪ್ರಾಣಾಪಾಯದಿಂದ ಪಾರಾದ ಹೃದಯವಿದ್ರಾವಕ ಘಟನೆ ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಗುಬ್ಬಲಾಳ ನಿವಾಸಿ ಎಂ.ಎಸ್‌.ಪ್ರಸನ್ನ ದಂಪತಿ ಪುತ್ರಿ ಎಂ.ಪಿ.ಪೂರ್ವರಾವ್‌ ಮೃತ ದುರ್ದೈವಿ. ತನ್ನ ತಂದೆಯ ಜತೆ ಶಾಲೆಗೆ ಬಾಲಕಿ ಹೊರಟ್ಟಿದ್ದಾಗ ಮಾರ್ಗ ಮಧ್ಯೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕ ಬಸವರಾಜ್‌ ಪೂಜಾರಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಕರಾಳ ಶನಿವಾರ, ಒಂದೇ ದಿನ ಕರ್ನಾಟಕದಲ್ಲಿ 37 ಮಂದಿ ರಸ್ತೆ ಅಪಘಾತದಲ್ಲಿ ಸಾವು!

ಮೈಸೂರಿನ ಕುವೆಂಪು ನಗರದ ಪ್ರಸನ್ನ ಅವರು, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ತಮ್ಮ ಕುಟುಂಬದ ಜತೆ ಗುಬ್ಬಲಾಳದಲ್ಲಿ ಅವರು ನೆಲೆಸಿದ್ದಾರೆ. ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಮಗಳನ್ನು ಪ್ರಿ-ಕೆಜಿಗೆ ಸೇರಿಸಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಮಗಳನ್ನು ಶಾಲೆಗೆ ಬಿಡಲು ಪ್ರಸನ್ನ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಉತ್ತರಹಳ್ಳಿ ಸರ್ಕಲ್‌ ಕಡೆಯಿಂದ ವಸಂತಪುರಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬೈಕ್‌ಗೆ ಗುದ್ದಿದೆ. ಆಗ ಕೆಳಗೆ ಬಿದ್ದ ಪೂರ್ವರಾವ್‌ ಮೇಲೆ ಬಸ್ಸಿನ ಚಕ್ರಗಳು ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಧ್ವಜವಂದನೆಗೆ ತೆರಳುತ್ತಿದ್ದ ಶಿಕ್ಷಕ ಅಪಘಾತಕ್ಕೆ ಬಲಿ!

ಧ್ವಜಾರೋಹಣಕ್ಕೆಂದು ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕರೊಬ್ಬರಿಗೆ ಬೊಲೇರೊ ವಾಹನ ಡಿಕ್ಕಿಯಾದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿ ಗೋಪಾಲ ಪಟಗಾರ (50) ಮೃತ ಶಿಕ್ಷಕರು. ಇವರು ಕುಮಟಾದ ಬಾಡ ಗುಡೇಅಂಗಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಬಾಡ ಗುಡೇಅಂಗಡಿಯ ಶಾಲೆಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ೕ ವೇಳೆ ಹಳಕಾರ ಕ್ರಾಸ್‌ ಸಮೀಪ ಅತೀ ವೇಗವಾಗಿ ಬಂದ ಬೊಲೇರೊ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಶಿಕ್ಷಕ ಗೋಪಾಲ ಪಟಗಾರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿತ್ರದುರ್ಗದ ಬಳಿ ಭೀಕರ ದುರಂತ, ಒಂದೇ ಕುಟುಂಬದ ನಾಲ್ವರು ಸೇರಿ 5 ಬಲಿ, ಮೂವರು ಗಂಭೀರ
 

Follow Us:
Download App:
  • android
  • ios