Asianet Suvarna News Asianet Suvarna News

ಚಿತ್ರದುರ್ಗದ ಬಳಿ ಭೀಕರ ದುರಂತ, ಒಂದೇ ಕುಟುಂಬದ ನಾಲ್ವರು ಸೇರಿ 5 ಬಲಿ, ಮೂವರು ಗಂಭೀರ

ಚಿತ್ರದುರ್ಗದ ಬಳಿ ಅಪಘಾತ ವಾಗಿ ಐವರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಲ್ಲಿ ನಾಲ್ವರು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಮೂಲದವರು

Car crashes into truck  five killed in Chitradurga gow
Author
First Published Aug 14, 2023, 9:58 AM IST

ಚಿತ್ರದುರ್ಗ (ಆ.14): ಚಿತ್ರದುರ್ಗ ಹೊರವಲಯ ಮಲ್ಲಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಮೃತಪಟ್ಟವರನ್ನು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಸಂಗನಬಸವಪ್ಪ (36), ಪತ್ನಿ ರೇಖಾ(29), ಪುತ್ರ ಅಗಸ್ತ್ಯ (8) ಸಂಬಂಧಿ ಭೀಮಾಶಂಕರ್‌(26) ಹಾಗೂ ಕೋಲಾರ  ಕೆಜಿಎಫ್‌ ಮೂಲದ ಮಧುಸೂದನ್‌ (24) ಎಂದು ಗುರುತಿಸಲಾಗಿದೆ. ಗಾಯಗೊಂಡ ಸಂಗನಬಪಸಪ್ಪ ಅವರ ಪುತ್ರ ಆದರ್ಶ(3), ಪುತ್ರಿ ಅನ್ವಿಕಾ(5) ಚಿತ್ರದುರ್ಗದ ಬಸವೇಸ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bengaluru: ರೇಪ್‌ ಮಾಡಲು ಯತ್ನಿಸಿದಾಗ ವಿರೋಧಿಸಿದಕ್ಕೆ ಉಸಿರುಗಟ್ಟಿಸಿ ಕೊಂದ ಸೆಕ್ಯೂರಿಟಿ!

ವಿಜಯಪುರದದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಚಿತ್ರದುರ್ಗದ ಬಳಿ ಬಂದಾಗ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿಯೇ ನಾಲ್ವರು ಹಾಗೂ ನಂತರ ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ಕೆಜಿಎಫ್‌ ಮೂಲದ ಮಧುಸೂದನ್‌ ಪಿಎಸ್‌ಐ ಪರೀಕ್ಷೆಗೆ ಕೋಚಿಂಗ್‌ ಪಡೆಯುತ್ತಿದ್ದ ಎನ್ನಲಾಗಿದೆ. ಭೀಮಾಶಂಕರ್‌ ಸ್ನೇಹಿತನಾಗಿದ್ದರಿಂದ ಕುಟುಂಬದ ಜೊತೆ ಟ್ರಿಪ್‌ ಬಂದಿದ್ದ ಎನ್ನಲಾಗಿದೆ. ಮೃತರ ಪೋಸ್ಟ್ ಮಾರ್ಟ್ಂ ಪ್ರಕ್ರಿಯೆ ಮುಕ್ತಾಯದ ಬಳಿಕ ಮೃತರ ದೇಹವನ್ನು ಅಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ರವಾನೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಅಪರಾಧ, ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತ ಪುನಿತ್‌

 ಮೃತ ಸಂಗನಬಸಪ್ಪ ಚಿಕ್ಕಮಗಳೂರಿನಲ್ಲಿ‌ ಪತ್ನಿ ಮಕ್ಕಳೊಂದಿಗೆ ರಜೆ ಕಳೆಯಲು ಪ್ಲ್ಯಾನ್ ಮಾಡಿದ್ದ ಹೀಗಾಗಿ ಶನಿವಾರ ರಾತ್ರಿ11 ಕ್ಕೆ ಮನೆಯಿಂದ ಕಾರಿನಲ್ಲಿ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ವಿಧಿಯಾಟಕ್ಕೆ ಕುಟುಂಬ ದುರಂತ ಅಂತ್ಯ ಕಂಡಿದೆ.

Follow Us:
Download App:
  • android
  • ios