ಹುಡುಗಿಯನ್ನ ಚುಡಾಯಿಸುವುದು ತಪ್ಪು ಎಂದವನಿಗೆ ಲಾಂಗ್ ಬೀಸಿದ ಪುಡಿರೌಡಿಗಳು!
ಪಟ್ಟಣದಲ್ಲಿ ಮತ್ತೇ ಪುಡಿ ರೌಡಿಗಳ ಅಟ್ಟಹಾಸ ಶುರುವಾಗಿದೆ. ಹುಡುಗಿಯರನ್ನು ಚುಡಾಯಿಸುವುದು ತಪ್ಪು ಎಂದು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಬೈಕ್ ನಲ್ಲಿ ಬಂದ ಮೂವರು ಕಿಡಿಗೇಡಿಗಳು ಲಾಂಗ್ ಬೀಸಿ ಹಲ್ಲೆ ನಡೆಸಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಭೀಮಾರಾವ್ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ.

ಆನೇಕಲ್ (ಅ.27) : ಪಟ್ಟಣದಲ್ಲಿ ಮತ್ತೇ ಪುಡಿ ರೌಡಿಗಳ ಅಟ್ಟಹಾಸ ಶುರುವಾಗಿದೆ. ಹುಡುಗಿಯರನ್ನು ಚುಡಾಯಿಸುವುದು ತಪ್ಪು ಎಂದು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಬೈಕ್ ನಲ್ಲಿ ಬಂದ ಮೂವರು ಕಿಡಿಗೇಡಿಗಳು ಲಾಂಗ್ ಬೀಸಿ ಹಲ್ಲೆ ನಡೆಸಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಭೀಮಾರಾವ್ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ.
ರಾಮಚಂದ್ರ ಎಂಬುವವರೇ ಹಲ್ಲೆಗೆ ಒಳಗಾದವರು. ಪ್ರಕರಣ ಸಂಬಂಧ ಸಿದ್ಧಾರ್ಥ ಮತ್ತು ದರ್ಶನ್ ಎಂಬ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು, ತಪ್ಪಿಸಿ ಕೊಂಡಿರುವ ಅನಿಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಜ್ಜನ ರಿವಾಲ್ವರ್ ಹಿಡಿದು ಮನೆಮೇಲೆ ಎರ್ರಾಬಿರ್ರಿ ಫೈರಿಂಗ್ ಮಾಡಿದ ಮೊಮ್ಮಗ!
ತನ್ನ ಮಗು ಹಾಗೂ ಮಡದಿಯೊಂದಿಗೆ ಮನೆಯ ಹತ್ತಿರವೇ ರಾತ್ರಿ ರಾಮಚಂದ್ರ ರಾವ್ ವಾಕ್ ಮಾಡುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ದಿಢೀರ್ ಬಂದವರೇ ರಾಮಚಂದ್ರ ಅವರ ಮೇಲೆ ಒಮ್ಮೆಲೆ ಲಾಂಗ್ನಿಂದ ಹಲ್ಲೆ ನಡೆಸಿದರು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡ ರಾಮಚಂದ್ರ, ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಮನೆ ಒಳಗೆ ಸಾಗಿ ಬಾಗಿಲು ಜಡಿದಿದ್ದಾರೆ. ಈ ದೃಶ್ಯಾವಳಿಗಳೆಲ್ಲಾ ಘಟನೆ ನಡೆದ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು ಜನರಲ್ಲಿ ಭೀತಿ ಮೂಡಿದೆ.
ಇನ್ನು ಹಲ್ಲೆ ವೇಳೆ ರಾಮಚಂದ್ರ ಅವರು ತಪ್ಪಿಕೊಂಡ ಪರಿಣಾಮ ಕೋಪೋದ್ರಿಕ್ತನಾದ ಆರೋಪಿ ಅನಿಲ್ ಅಂಗಡಿಯ ಗಾಜುಗಳನ್ನು ಪುಡಿಗಟ್ಟಿದ್ದಾನೆ. ಪ್ರಕರಣ ಸಂಬಂಧ
ದೂರು ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಟವೆಲ್‌ನಿಂದ ಬಿಗಿದು ವೃದ್ಧೆಯ ಕೊಲೆ; ಆಸ್ತಿಗಾಗಿ ನಡೆದ ಹತ್ಯೆ ಶಂಕೆ