ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ವತಿಯಿಂದ 2024ನೇ ಸಾಲಿನ ಬೆಂಗಳೂರು ಚಿತ್ರಸಂತೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 

ಬೆಂಗಳೂರು (ನ.18): ರಾಜ್ಯದ ರಾಜಧಾನ ಬೆಂಗಳೂರಿನ ಚಿತ್ರಕಲಾ ಪರಿಷತ್‌ ಮುಂದಿನ ಕುಮಾರಕೃಪ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದ ಚಿತ್ರಸಂತೆಯನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇನ್ನು 2024ರ ಜನವರಿ 7 ರಂದು 21ನೇ ವರ್ಷದ ಚಿತ್ರಸಂತೆಯನ್ನು ನಡೆಸಲು ಕರ್ನಾಟಕ ಚಿತ್ರಕಲಾ ಪರಿಷತ್‌ ದಿನಾಂಕ ಘೋಷಣೆ ಮಾಡಿದೆ. ಈ ಚಿತ್ರಸಂತೆಯನ್ನು ಭಾಗವಹಿಸುವ ಕಲಾವಿದರು ಚಿತ್ರಕಲಾ ಪರಿಷತ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ರಾಜ್ಯದ ಹೆಮ್ಮೆಯ ‘ಕರ್ನಾಟಕ ಕಲಾ ಚಿತ್ರಕಲಾ ಪರಿಷತ್‌’ ಆಯೋಜಿಸಿಕೊಂಡು ಬರುತ್ತಿರುವ, ಕಲಾವಿದರು​-ಕಲಾಭಿಮಾನಿಗಳ ಬಹುನಿರೀಕ್ಷೆಯ ‘ಚಿತ್ರಸಂತೆ 2024’ ಬರುವ ಜನವರಿ 7ರಂದು ಭಾನುವಾರ ಪರಿಷತ್‌ನ ಆವರಣದಲ್ಲಿ ನಡೆಯಲಿದೆ. ಈ ಬಗ್ಗೆ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌ ಅವರು, 21ನೇ ಚಿತ್ರಸಂತೆಯ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಕಲಾವಿದರು ಚಿತ್ರಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜಿಗಳನ್ನು ನಿಬಂಧಣೆಗಳಿಗೆ ಒಳಪಟ್ಟು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಕೆಗೆ ನವೆಂಬರ್‌ 31 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ಸೈಟ್‌, ಇ-ಮೇಲ್‌ ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ.

ರೋಹಿತ್‌ ಶರ್ಮಾ ಬಸ್‌ನಲ್ಲಿ ಹೋಗುವಾಗ ಫ್ಯಾನ್ಸ್‌ಗೆ ಬೈದ್ರೋ, ಹೊಗಳಿದ್ರಾ? ಲಿಪ್‌ ರೀಡಿಂಗ್‌ ಬಂದ್ರೆ ಕಮೆಂಟ್‌ ಮಾಡಿ!

ವೆಬ್‌ಸೈಟ್‌: www.chitrasanthe.in
ಇ-ಮೇಲ್‌ ವಿಳಾಸ: chitrasanthe@chitrakalaparishath.org
ಮೊಬೈಲ್‌ ಸಂಖ್ಯೆ: +91 9036330928