Asianet Suvarna News Asianet Suvarna News

ಡಿಸೆಂಬರ್ ಒಳಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಪೂರ್ಣ: ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಷ್ಟ್ರೀಯ ಹೆದ್ದಾರಿ-774ರ ಕಾಮಗಾರಿಗೆ ತಮಿಳುನಾಡು ಸರ್ಕಾರ ಸೂಕ್ತ ಸಹಕಾರ ನೀಡಿದರೆ ಡಿಸೆಂಬರ್ 2024ರೊಳಗೆ ಮುಗಿಯಲಿದೆ. ರಸ್ತೆ ಕಾಮಗಾರಿಯಲ್ಲಿ ಆಗುತ್ತಿರುವ ತೊಂದರೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ನೊಂದಿಗೆ ಚರ್ಚಿಸಲಾಗಿದೆ, ಲೋಕಾರ್ಪಣೆಯಾದ ಬಳಿಕ ಉಭಯ ನಗರಗಳ ಸಂಚಾರದ ಅವಧಿ 2 ಗಂಟೆಗೆ ತಗ್ಗಲಿದೆ'' ಎಂದು ಮಾಹಿತಿ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 

Bengaluru Chennai Expressway to be Completed by December Says Union Minister Nitin Gadkari grg
Author
First Published Feb 9, 2024, 4:19 AM IST

ನವದೆಹಲಿ(ಫೆ.09): ವರ್ಷಾಂತ್ಯದೊಳಗೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ.

ಲೋಕಸಭೆಯಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ''ರಾಷ್ಟ್ರೀಯ ಹೆದ್ದಾರಿ-774ರ ಕಾಮಗಾರಿಗೆ ತಮಿಳುನಾಡು ಸರ್ಕಾರ ಸೂಕ್ತ ಸಹಕಾರ ನೀಡಿದರೆ ಡಿಸೆಂಬರ್ 2024ರೊಳಗೆ ಮುಗಿಯಲಿದೆ. ರಸ್ತೆ ಕಾಮಗಾರಿಯಲ್ಲಿ ಆಗುತ್ತಿರುವ ತೊಂದರೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ನೊಂದಿಗೆ ಚರ್ಚಿಸಲಾಗಿದೆ, ಲೋಕಾರ್ಪಣೆಯಾದ ಬಳಿಕ ಉಭಯ ನಗರಗಳ ಸಂಚಾರದ ಅವಧಿ 2 ಗಂಟೆಗೆ ತಗ್ಗಲಿದೆ'' ಎಂದು ಮಾಹಿತಿ ನೀಡಿದರು.

2024ರ ಮಾರ್ಚ್‌ನಿಂದ ಜಿಪಿಎಸ್‌ ಆಧಾರಿತ ಟೋಲ್‌ ಕಲೆಕ್ಷನ್‌: ಗಡ್ಕರಿ

ಸದ್ಯ ಬೆಂಗಳೂರಿನಿಂದ ಚೆನ್ನೈ ನಡುವೆ ಸಂಚರಿಸಲು ಸುಮಾರು 5ರಿಂದ 6 ಗಂಟೆ ಬೇಕಾಗುತ್ತದೆ.

Latest Videos
Follow Us:
Download App:
  • android
  • ios