ಕಾವೇರಿ ನೀರು ಹೋರಾಟ ಬೆನ್ನಲ್ಲೇ ಬಿಸಿಯೂಟ ನೌಕರರಿಂದ ನಾಳೆ ಬೆಂಗಳೂರು ಚಲೋ
ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಬಿಸಿಯೂಟ ನೌಕರರು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಂಡಿದ್ದು, ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‍ನಲ್ಲಿ ಅನಿರ್ಧಿಷ್ಟ ಧರಣಿ ಆರಂಭಿಸಲಾಗುತ್ತದೆ ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಪ್ರಭುದೇವ್ ಯಳಸಂಗಿ ಹೇಳಿದ್ದಾರೆ.
ಕಲಬುರಗಿ (ಅ.9) : ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಬಿಸಿಯೂಟ ನೌಕರರು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಂಡಿದ್ದು, ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‍ನಲ್ಲಿ ಅನಿರ್ಧಿಷ್ಟ ಧರಣಿ ಆರಂಭಿಸಲಾಗುತ್ತದೆ ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಪ್ರಭುದೇವ್ ಯಳಸಂಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿರ್ಧಿಷ್ಟ ಧರಣಿಯಲ್ಲಿ ಜಿಲ್ಲೆಯಿಂದ ಸುಮಾರು 150 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಪಾಲ್ಗೊಳ್ಳುವರು ಎಂದರು.
ಬಿಸಿಯೂಟಕ್ಕೆ ಕೊಳೆತ ತರಕಾರಿ: ಮುಖ್ಯಶಿಕ್ಷಕಿಗೆ ಷೋಕಾಸ್ ನೋಟಿಸ್
ರಾಜ್ಯದಲ್ಲಿ ಸುಮಾರು 18000ಕ್ಕಿಂತ ಹೆಚ್ಚು ಜನ ಬಿಸಿಯೂಟ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಅವರಿಗೆ ಕನಿಷ್ಠ ವೇತನವನ್ನು ಇಲ್ಲಿಯವರೆಗಿನ ಸರ್ಕಾರಗಳು ನೀಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು ಕನಿಷ್ಠ ವೇತನದ ಕುರಿತು ಆರನೇ ಗ್ಯಾರಂಟಿ ಘೋಷಿಸಿದ್ದರು. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡೆ ಪ್ರಿಯಾಂಕಾ ವಾಡ್ರಾ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ನೌಕರರಿಗೆ ಮಾಸಿಕ 6000 ರು.ಗಳ ವೇತನ ಹಾಗೂ 2.5 ಲಕ್ಷ ಇಡಿಗಂಟು, ನಿವೃತ್ತಿ ವೇತನ ಕೊಡುವ ಕುರಿತು ಘೋಷಣೆ ಮಾಡಿದ್ದರು. ಆದಾಗ್ಯೂ, ಆ ಭರವಸೆ ಇಲ್ಲಿಯವರೆಗೆ ಹುಸಿಯಾಗಿದೆ. ಹಾಗಾಗಿ ಅನಿರ್ಧಿಷ್ಟ ಧರಣಿಯನ್ನು ಹಮ್ಮಿಕೊಂಡಿದ್ದಾಗಿ ಹೇಳಿದರು.
150 ವರ್ಷ ಹಳೆಯ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಾಜಿ ಶಾಸಕ
ಇನ್ನು ಬಿಸಿಯೂಟ ನೌಕರರಿಗೆ ಯಾವುದೇ ರೀತಿಯಲ್ಲಿ ಸೇವಾ ಭದ್ರತೆ ಇಲ್ಲವಾಗಿದೆ. ಬಿಸಿಯೂಟ ನೌಕರರನ್ನು ಕಳೆದ ಏಪ್ರಿಲ್ 10ರ ಮೊದಲು ಕೆಲಸ ಮಾಡುತ್ತಿರುವವರಿಗೆ ಸೇವೆಯಲ್ಲಿ ಮುಂದುವರೆಸಬೇಕೆಂಬ ಆದೇಶ ಇದ್ದರೂ ಸಹ ಆಯುಕ್ತರು ಅಡಿಗೆಯವರಿಗೆ ಮಾರ್ಚ್‍ನಲ್ಲಿಯೇ ಬಿಡುಗಡೆಗೊಳಿಸಿ, ಜೂನ್ 1ಕ್ಕೆ ಪುನ: ನೇಮಕಾತಿ ಆದೇಶ ಮಾಡಿದ್ದಾರೆ. ಕೂಡಲೇ ಆ ಆದೇಶವನ್ನು ಹಿಂಪಡೆಯಬೇಕು ಹಾಗೂ ಹಿಂದಿನ ಆದೇಶವನ್ನೇ ಮುಂದುವರೆಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಎಚ್.ಎಸ್. ಪತಕಿ, ಶಿವಲಿಂಗಮ್ಮ ಲೆಂಗಟಿಕರ್, ಯಶೋಧಾ ರಾಠೋಡ್, ಮಲ್ಲಮ್ಮ ಜಗತಿ ಹಾಗೂ ಶಿವಲಿಂಗಮ್ಮ ಸಾವಳಗಿ ಇದ್ದರು.