ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿರುವ ಆರೋಪಿಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಇರುವ ಸಾಧ್ಯತೆಯಿದೆ. ನಿಜವಾದ ಆರೋಪಿಗಳು ಯಾರು?, ಅವರ ಉದ್ದೇಶ ಏನು? ಎಂಬುದು ಗೊತ್ತಾಗಬೇಕು. ನಮ್ಮ ಪೊಲೀಸರ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯವಿಲ್ಲ. ಹೀಗಾಗಿ, ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ನವದೆಹಲಿ(ಜು.22): ಬೆಂಗಳೂರು ಸರಣಿ ಸಂಚು ಸ್ಫೋಟ ಪ್ರಕರಣದ ಆರೋಪಿಗಳಿಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಎಸ್ ಜೊತೆ ನಂಟಿರುವ ಸಾಧ್ಯತೆಯಿದೆ. ಹೀಗಾಗಿ, ಈ ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ)ಗೆ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿರುವ ಆರೋಪಿಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಇರುವ ಸಾಧ್ಯತೆಯಿದೆ. ನಿಜವಾದ ಆರೋಪಿಗಳು ಯಾರು?, ಅವರ ಉದ್ದೇಶ ಏನು? ಎಂಬುದು ಗೊತ್ತಾಗಬೇಕು. ನಮ್ಮ ಪೊಲೀಸರ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯವಿಲ್ಲ. ಹೀಗಾಗಿ, ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು. ಬಂಧಿತರು ಅಪರಾಧಿಗಳಲ್ಲ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪೊಲೀಸರು ವಶಪಡಿಸಿಕೊಂಡಿದ್ದು ಆಟದ ಸಾಮಾನುಗಳಲ್ಲ. ಗನ್, ಬುಲೆಚ್, ವಾಕಿಟಾಕಿ, ಸ್ಯಾಟಲೈಟ್ ಫೋನ್‌ನಂತಹ ಅಪಾಯಕಾರಿ ವಸ್ತುಗಳು. ಇದನ್ನೆಲ್ಲ ನೋಡಿದ ಮೇಲೆಯೂ ಸಚಿವರು ಹೀಗೆ ಹೇಳಿದರೆ ಏನೆಂದು ಹೇಳಬೇಕು ಎಂದರು.
ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!
ನೀವು ಸಿಎಂ ಆಗಬೇಕಿತ್ತು. ಆಗಲಿಲ್ಲ ಎಂಬುದಾಗಿ ನಿಮ್ಮ ಮೇಲೆ ಜನರ ಸಿಂಪತಿಯಿದೆ. ನೀವು ಈ ರೀತಿಯ ಹೇಳಿಕೆ ನೀಡುತ್ತಿದ್ದರೆ ನಿಮ್ಮ ಮೇಲಿನ ಸಿಂಪತಿ ಕಡಿಮೆಯಾಗಲಿದೆ ಎಂದು ಸಚಿವರಿಗೆ ಟಾಂಗ್ ನೀಡಿದರು.
ಇದೇ ವೇಳೆ, ಸಿದ್ದು ವಿರುದ್ಧ ಹರಿಹಾಯ್ದ ಸಿ.ಟಿ.ರವಿ, ಗಾಂಧಿ ಹತ್ಯೆ ಸಂಬಂಧ ನಡೆದ ಮೂರೂ ತನಿಖಾ ವರದಿಗಳು ಗಾಂಧಿ ಹತ್ಯೆಗೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಹೇಳಿವೆ. ಯಾವ ಚಾಜ್‌ರ್‍ಶೀಟ್‌ನಲ್ಲೂ ಆರ್‌ಎಸ್‌ಎಸ್‌ನ ಹೆಸರಿಲ್ಲ. ಹೀಗಾಗಿ, ಸದನದಲ್ಲಿ ಸುಳ್ಳು ಸುದ್ದಿ ಹರಡುವ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಬೇಕು ಎಂದರು.
ವಿಪಕ್ಷ ನಾಯಕರ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ಈ ಹಿಂದೆ ಕಾಂಗ್ರೆಸ್ ಬಂದಿತ್ತು. ನಮಗೆ ಅಂತಹ ಪರಿಸ್ಥಿತಿ ಬಂದಿಲ್ಲ. ವಿಪಕ್ಷ ನಾಯಕನಿಲ್ಲದೇ ನಮ್ಮ ನಾಯಕರು ಸದನದಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿದರು.
