ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬಂಗಾಳದ ಬಿಳಿ ಹುಲಿ ಆಗಮನ: ಅಬ್ಬಾ! ಘರ್ಜನೆ ಕೇಳಿ
ಬನ್ನೇರುಘಟ್ಟ ಜೈವಿಕ ಉದ್ಯಾನವನ ಹಾಗೂ ಮೃಗಾಲಯಕ್ಕೆ ಸೋಮವಾರ ಬಿಳಿ ಬಣ್ಣದ ರಾಯಲ್ ಬಂಗಾಳದ ಹುಲಿ ಆಗಮಿಸಿದೆ. ಅದರ ಘರ್ಜನೆಯನ್ನೊಮ್ಮೆ ನೀವೇ ಕೇಳಿ ನೋಡಿ.
ಆನೇಕಲ್ (ಏ.24): ಬೆಂಗಳೂರಿನ ಹೊರ ವಲಯದಲ್ಲಿರುವ ರಾಷ್ಟ್ರೀಯ ಉದ್ಯಾನವನವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹಾಗೂ ಮೃಗಾಲಯಕ್ಕೆ ಸೋಮವಾರ ಬಿಳಿ ಬಣ್ಣದ ರಾಯಲ್ ಬಂಗಾಳದ ಹುಲಿ ಆಗಮಿಸಿದೆ. ಅದರ ಘರ್ಜನೆಯನ್ನೊಮ್ಮೆ ನೀವೇ ಕೇಳಿ ನೋಡಿ.
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಈ ಬಂಗಾಳದ ರಾಯಲ್ ಹುಲಿಯನ್ನು ತರಿಸಿಕೊಳ್ಳಲಾಗಿದೆ. ಈ ಹುಲಿಯು, ಚೆನ್ನೈನ ಅರಿನ್ನಾಗರ್ ಅಣ್ಣಾ ಝೂಲಾಜಿಕಲ್ ಪಾರ್ಕ್‌ನಿಂದ ತರಿಸಲಾಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಶೇರ್-ಯಾರ್ ಹೆಸರಿನ ಗಂಡು ಸಿಂಹವನ್ನು ಅರಿನ್ನಾಗರ್ ಅಣ್ಣಾ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಬನ್ನೇರುಘಟ್ಟದಲ್ಲಿ ಹೆರಿಗೆ ನೋವಲ್ಲೇ ಪ್ರಾಣಬಿಟ್ಟ ಮಹಾತಾಯಿ ಆನೆ: ಕ್ರೂರಿಗೂ ಈ ಕಷ್ಟ ಬಾರದಿರಲಿ
ವಾತಾವರಣಕ್ಕೆ ಹೊಂದಿಕೊಳ್ಳಲು ಅವಕಾಶ: ಬಿಳಿ ಬಣ್ಣದ ರಾಯಲ್ ಬಂಗಾಳ ಹುಲಿ ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈವರೆಗೆ ಹಲವು ಕಂದು ಬಣ್ಣ ಕರಿ ಪಟ್ಟೆಯ ಹುಲಿಗಳು ಇದ್ದು, ಸಾರ್ವಜನಿಕರನ್ನು ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಿವೆ. ಈಗ ಆಗಮಿಸಿರುವ ಹೊಸ ಅತಿರ್ಥಿ ರಾಯಲ್ ಬಂಗಾಳ ಹುಲಿ ಮತ್ತುಷ್ಟು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರನ್ನು ಆಕರ್ಷಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈಗಲೇ ಸಾರ್ವಜನಿಕರ ವೀಕ್ಷಣೆಗೆ ಈ ಹುಲಿಯನ್ನು ಮುಕ್ತಗೊಳಿಸದೇ, ಕೆಲವು ದಿನಗಳ ಕಾಲ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಂದಿಕೊಳ್ಳಲು ಸಮಯವನ್ನು ಕೊಟ್ಟು, ನಂತರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಉದ್ಯಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3 ವರ್ಷದ ಚುರುಕಾದ ಹುಲಿಗೆ ಕ್ವಾರಂಟೈನ್: ಅರಿನ್ನಾಗರ್ ಅಣ್ಣಾ ಮೃಗಾಲಯದಲ್ಲಿ ಭೀಷ್ಮಾ ಮತ್ತು ಮೀನಾಗೆ ಜನಿಸಿರುವ ಸುಮಾರು 3 ವರ್ಷ ವಯಸ್ಸಿನ ಈ ಬಿಳಿ ಹುಲಿ ಅತ್ಯಂತ ಚುರುಕಾಗಿದೆ. ಇನ್ನೂ ವಯಸ್ಸಿನಲ್ಲಿ ಚಿಕ್ಕದಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಇರುವ ಹುಲಿಗಳೊಂದಿಗೆ ಬೇಗನೆ ಹೊಂದಿಕೊಳ್ಳುವ ಸಾಧ್ಯತೆ ಇದೆ. ಆದರೆ, ಕೆಲವು ದಿನಗಳು ಪ್ರತ್ಯೇಕವಾಗಿಟ್ಟು, ಸ್ವಲ್ಪ ದಿನಗಲ ನಂತರ ಕೆಲವು ಸಿಂಹಗಳೊಂದಿಗೆ ಬಿಡಲಾಗುತ್ತದೆ. ಆಗ ಅದರ ವರ್ತನೆ ಹಾಗೂ ಸ್ಥಳೀಯ ಹುಲಿಗಳ ದಾಳಿಯ ಬಗ್ಗೆ ನಿಗಾವಹಿಸಲಾಗುತ್ತದೆ. ನಂತರ, ಎಲ್ಲ ಹುಲಿಗಳೊಂದಿಗೆ ರಾಯಲ್ ಬಂಗಾಳ ಹುಲಿಯೂ ಕೂಡ ಸ್ಥಳೀಯ ಹುಲಿಗಳಂತೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.
ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದಲ್ಲಿ ಮರಿಗೆ ಜನ್ಮ ನೀಡಿದ ಝೀಬ್ರಾ
ಕರ್ನಾಟಕದಿಂದ 3 ವರ್ಷದ ಸಿಂಹ ರವಾನೆ: ಇನ್ನು ಕರ್ನಾಟಕದ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 2020ರಲ್ಲಿ ಸನಾ ಮತ್ತು ಶಂಕರ್ ಎಂಬ ಸಿಂಹಗಳಿಗೆ ಜನಿಸಿದ ಗಂಡು ಸಿಂಹಕ್ಕೆ ಶೇರ್-ಯಾರ್ ಎಂದು ಹೆಸರಿಡಲಾಗಿತ್ತು. ಈ ಗಂಡು ಸಿಂಹವನ್ನು ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಅರಿನ್ನಾಗರ್ ಅಣ್ಣಾ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಈಗ ಅಲ್ಲಿ ಸಿಂಹವನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನಂತರ, ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.